ಆರು ಅಡಿ ಎತ್ತರದ ತೇರಿನಲ್ಲಿ ರುದ್ರಾಕ್ಷಿ ಪಲ್ಲಕ್ಕಿ ಒಳಗೆ ಸಿದ್ದಗಂಗಾಶ್ರೀಗಳ ಲಿಂಗಶರೀರವನ್ನು ಇಟ್ಟು ಸುಮಾರು 400 ಮೀಟರ್ ದೂರದವರೆಗೆ ಮೆರವಣಿಗೆ ಮೂಲಕ ಕ್ರಿಯಾ ಸಮಾಧಿ ಸ್ಥಳಕ್ಕೆ ತರಲಾಯಿತು.
ಬದುಕಿನುದ್ದಕ್ಕೂ ಮತ್ತೊಬ್ಬರ ಸಮಸ್ಯೆಗಳು, ಸುಖ, ಸಂತೋಷ, ಉಪಕಾರದ ಬಗ್ಗೆಯೇ ಆಲೋಚಿಸುತ್ತಿದ್ದ ತ್ರಿವಿಧ ದಾಸೋಹಿ ಇಂದು ಶಿವೈಕ್ಯರಾಗಿರುವುದು ಕೇಳಿ ಮಕ್ಕಳೂ ಸೇರಿದಂತೆ ಇಡೀ ಕರುನಾಡ ಜನತೆ ಅಂತಿಮ ದರ್ಶನ ಪಡೆಯಲು ಮಠಕ್ಕೆ ಆಗಮಿಸುತ್ತಿದ್ದಾರೆ.
ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ವಿಧಿವಶ ಹಿನ್ನೆಲೆಯಲ್ಲಿ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಶ್ರೀಗಳ ಲಿಂಗ ಶರೀರವನ್ನು ಇಡಲಾಗಿದ್ದು, ಸಾರ್ವಜನಿಕರಿಂದ ಶ್ರೀಗಳ ಅಂತಿಮ ದರ್ಶನ ಆರಂಭವಾಗಿದೆ. ಭಕ್ತರು, ಸಾರ್ವಜನಿಕರು ಸರದಿಯಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.
ಬಡತನ, ಹಸಿವು, ಸಾಮಾಜಿಕ ಅನ್ಯಾಯಗಳಂತಹ ಪಿಡುಗುಗಳನ್ನು ನಿರ್ಮೂಲನ ಮಾಡಲು ಶ್ರೀಗಳು ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು ಎಂದು ಟ್ವೀಟ್ ಮೂಲಕ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಸ್ವಾಮೀಜಿ ಅವರ ರಕ್ತದಲ್ಲಿ ಎಂಡೋಟಾಕ್ಸಿನ್ ಮತ್ತು ಬ್ಯಾಕ್ಟೀರಿಯಾಗಳನ್ನು ಶುದ್ಧೀಕರಿಸಿ ರಕ್ತ ಚಲನೆಗೆ ಸಹಕಾರಿಯಾಗುವಂತಹ ನೂತನ ಚಿಕಿತ್ಸಾ ವಿಧಾನವನ್ನು ನಿನ್ನೆಯಿಂದ ಕೈಗೊಳ್ಳಲಾಗಿದೆ. ಅವರ ದೇಹದಲ್ಲಿ ಪ್ರೋಟೀನ್ ಅಂಶ ಕೂಡ ಜಾಸ್ತಿಯಾಗಿದೆ ಎಂದು ಡಾ.ಪರಮೇಶ್ ಹೇಳಿದರು.
ಶ್ರೀಗಳು ಇಳಿ ವಯಸ್ಸಿನಲ್ಲಿಯೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶ್ರೀಗಳನ್ನು ನೋಡಿಕೊಳ್ಳುತ್ತಿರುವ ವೈದ್ಯರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.