'ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೆ ಸುಮ್ಮನೇನಾ..? ನೋ ವೇ ಚಾನ್ಸೇ ಇಲ್ಲ.' ಹೀಗೆ ಕಿಚ್ಚ ಸುದೀಪ್ ಅಭಿಮಾನಿಗಳು ಕಾಲರ್ ಮೇಲೆತ್ತಿ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ಸುದೀಪ್ ಅವರ ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಅಧಿಕೃತವಾಗಿ ₹200 ಕೋಟಿ ಕ್ಲಬ್ಗೆ ಸೇರ್ಪಡೆಯಾಗಿದೆ. ಈ ಕುರಿತು ಜಗತ್ತಿನ ಅತಿದೊಡ್ಡ ಓಟಿಟಿ ಪ್ಲಾಟ್ಫಾರಂ 'ZEE5' ಸಂಸ್ಥೆ ಅಧಿಕೃತ ಘೋಷಣೆ ಮೊಳಗಿಸಿದೆ.
Vikrant Rona Box Office Collection Day 7 : ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ 150 ಕೋಟಿ ರೂ.ಗಳತ್ತ ದಾಪುಗಾಲಿಡುತ್ತಿದೆ.
ಸ್ಯಾಂಡಲ್ವುಡ್ ಸಿನಿಮಾಗಳ ಗತ್ತು ಏನೆಂದು ಜಗತ್ತಿಗೇ ಗೊತ್ತು. ಅದರಲ್ಲೂ ಕನ್ನಡ ಸಿನಿಮಾ ರಂಗದ ಪಾಲಿಗೆ ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಸಖತ್ ಸ್ಪೆಷಲ್. ಯಾಕಂದ್ರೆ ಕನ್ನಡಿಗರ ಸಿನಿಮಾ ಒಂದು ಇದೇ ಮೊದಲ ಬಾರಿಗೆ ಹಾಲಿವುಡ್ನಲ್ಲೂ ತೆರೆಕಂಡು ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಲ್ಲೂ ಅಬ್ಬರ ತೋರುತ್ತಿರುವ ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ.
ಅದೇನ್ ಕ್ಯಾಮೆರಾ ವರ್ಕ್, ಅದೇನ್ ಸೀನ್ಸ್, ಅದೇನ್ ಕ್ಲೈಮ್ಯಾಕ್ಸ್.. ಅಬ್ಬಬ್ಬಾ ಅದೇನ್ ಬಿಜಿಎಂ ಗುರೂ.. ಅರೆರೆ ಇದು ನಾವು ಹೇಳ್ತಾ ಇರೋದು ಅಲ್ಲ, ಸದ್ಯ ‘ವಿಕ್ರಾಂತ್ ರೋಣ’ ಸಿನಿಮಾ ನೋಡಿ ಬಂದಿರುವವರ ರಿಯಾಕ್ಷನ್. ಹೇಗಂದ್ರೆ ನಿಮಗೆಲ್ಲಾ ಗೊತ್ತಿರುವಂತೆ ಈಗಾಗಲೇ ಹಲವು ಕಡೆ ‘ವಿಕ್ರಾಂತ್ ರೋಣ’ ಚಿತ್ರ ಪ್ರೀಮಿಯರ್ ಶೋ ಮೂಲಕ ತೆರೆಕಂಡಿದೆ. ಹೀಗೆ ಪ್ರೀಮಿಯರ್ ಶೋಗಳಲ್ಲಿ ‘ವಿಕ್ರಾಂತ್ ರೋಣ’ ಕಣ್ತುಂಬಿಕೊಂಡಿರುವ ಹಲವರು ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುನಾಮಿ ಎಬ್ಬಿಸಿದ್ದಾರೆ.
ಅಬ್ಬಬ್ಬಾ.. ಎಲ್ಲಿ ನೋಡಿದ್ರೂ ಬರೀ ‘ವಿಕ್ರಾಂತ್ ರೋಣ’.. ‘ವಿಕ್ರಾಂತ್ ರೋಣ’ .. ‘ವಿಕ್ರಾಂತ್ ರೋಣ’.. ಅರೆರೆ ಇದು ಇರಲೇಬೇಕಲ್ವಾ..? ಯಾಕಂದ್ರೆ ‘ವಿಕ್ರಾಂತ್ ರೋಣ’ ಇಟ್ಟಿರೋ ಹವಾ ಅಂತಹದ್ದು. ಇದು ಬರೀ ಹವಾ ಮಾತ್ರ ಅಲ್ಲ ಕನ್ನಡ ಸಿನಿಮಾಗಳ ತಾಕತ್ತು ಈ ‘ವಿಕ್ರಾಂತ್ ರೋಣ’ ಎನ್ನಬಹುದು. ಯಾಕಂದ್ರೆ ಬಹುನಿರೀಕ್ಷಿತ ಸ್ಯಾಂಡಲ್ವುಡ್ ಸಿನಿಮಾದ ರಿವ್ಯೂವ್ ಔಟ್ ಆಗಿದ್ದು, ‘ವಿಕ್ರಾಂತ್ ರೋಣ’ ಸುನಾಮಿ ಜಗತ್ತಿನಾದ್ಯಂತ ಸೃಷ್ಟಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.