ಕರೋನಾ ಲಸಿಕೆಯ ಅಭಿಯಾನವು ದೇಶಾದ್ಯಂತ ಭರದಿಂದ ಸಾಗುತ್ತಿದೆ. ಲಸಿಕೆ ಪಡೆದ ನಂತರ, ಕೋವಿನ್ ಆಪ್ ಮೂಲಕ ವ್ಯಾಕ್ಸಿನ್ ಸರ್ಟಿಫಿಕೇಟನ್ನು ಪಡೆದುಕೊಳ್ಳಬಹುದು. ಈ ಸರ್ಟಿಫಿಕೇಟ್ ನಲ್ಲಿ ಹೆಸರು, ವಯಸ್ಸು, ಐಡಿ ಮತ್ತು ವ್ಯಾಕ್ಸಿನೇಷನ್ ವಿವರಗಳ ಜೊತೆಗೆ ಕ್ಯೂಆರ್ ಕೋಡ್ ಸಹ ಇರುತ್ತದೆ.
ಕರೋನಾ ಲಸಿಕೆ ಕೊರತೆಯ ವರದಿಗಳ ಮಧ್ಯೆ 'ಸಿಂಗಲ್ ಶಾಟ್ ವ್ಯಾಕ್ಸಿನೇಷನ್' ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಕೋವಿಡ್ -19 ಲಸಿಕೆ ತಯಾರಿಸುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯನ್ನು ಭವಿಷ್ಯದಲ್ಲಿ ಸಿಂಗಲ್ ಶಾಟ್ ಲಸಿಕೆಯಾಗಿ ತಯಾರಿಸಬಹುದು.
Paytm ನ ಈ ಹೊಸ ಟೂಲ್ ನ ಹೆಸರು Vaccine Finder. ಇದರ ಮೂಲಕ ವ್ಯಾಕ್ಸಿನ್ ಸ್ಲಾಟ್ ಲಭ್ಯತೆ ಬಗ್ಗೆ ತಿಳಿದುಕೊಳ್ಳಬಹುದು. ಅಲ್ಲದೆ, ಸಮೀಪದ ಲಸಿಕಾ ಕೇಂದ್ರ, ಯಾವ ಕೇಂದ್ರದಲ್ಲಿ ಯಾವ ಲಸಿಕೆ ಸಿಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು.
ಕರೋನಾ ವೈರಸ್ನ ಎರಡನೇ ತರಂಗದ ನಡುವೆ, ಛತ್ತೀಸ್ಗಢದ ಬುಡಕಟ್ಟು ಪ್ರದೇಶಕ್ಕೆ ಸರ್ಕಾರವು ಒಂದು ವಿಶಿಷ್ಟ ಘೋಷಣೆ ಮಾಡಿದೆ. ಗೊರೆಲ್ಲಾ-ಪೆಂಡ್ರಾ-ಮಾರ್ವಾಹಿ ಜಿಲ್ಲೆಯಲ್ಲಿ ಲಸಿಕೆ ಪಡೆಯದ ಯಾವುದೇ ಅಧಿಕಾರಿ ಅಥವಾ ಉದ್ಯೋಗಿಗೆ ಜೂನ್ ತಿಂಗಳಿಗೆ ಸಂಬಳ ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೊದಲ ಅಥವಾ ಎರಡನೆಯ ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಈ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಅನೇಕ ಜನರು COVID-19 ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ಬಹಳ ಅಪಾಯಕಾರಿ.
ಸೀರಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಜಾಧವ್ ಮಾತನಾಡಿ, ಲಸಿಕೆ ಲಭ್ಯವಿಲ್ಲ ಎಂದು ತಿಳಿದಿದ್ದರೂ ಸರ್ಕಾರವು ಲಸಿಕೆಯನ್ನು ಎಲ್ಲರಿಗೂ ಅನುಮೋದಿಸಿದೆ. ಉತ್ಪನ್ನದ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ನ್ಯಾಯಯುತವಾಗಿ ಬಳಸಬೇಕು ಎಂಬುದು ನಾವು ಕಲಿತ ದೊಡ್ಡ ಪಾಠ ಎಂದಿದ್ದಾರೆ.
23 ವರ್ಷದ ಇಟೆಲಿಯ ಯುವತಿಗೆ ಫೈಜರ್ ಬಯೋಟೆಕ್ ಕಂಪನಿಯ ಫೈಜರ್ ವ್ಯಾಕ್ಸಿನ್ 6 ಡೋಸ್ ನೀಡಲಾಗಿದೆ. ಅದು ಕೂಡಾ ಒಂದೇ ಸಲಕ್ಕೆ. ವ್ಯಾಕ್ಸಿನ್ ಸೆಂಟರ್ ನಲ್ಲಿರುವ ನರ್ಸ್ ಮಾಡಿದ ತಪ್ಪಿಗೆ ಈ ಯುವತಿ ಬೆಲೆ ತೆರಬೇಕಾಗಿದೆ.
ವ್ಯಾಕ್ಸಿನ್ ಮೊದಲ ಡೋಸ್ ಹಾಕಿಸಿಕೊಂಡಾಗ ಕೆಲವರಿಗೆ ಜ್ವರ, ತಲೆ ನೋವು, ಮೈಕೈ ನೋವು, ಡಯಾರಿಯ, ಸುಸ್ತು ಕಾಣಿಸಿಕೊಳ್ಳುತ್ತದೆ. ನಿಮಗೆ ಗೊತ್ತಿರಲಿ. ನಿಮಗೆ ಚುಚ್ಚುವ ಲಸಿಕೆಯಲ್ಲಿ ವೈರಸ್ ನ ದುರ್ಬಲ ಅಥವಾ ಮೃತ ಭಾಗ ಇರುತ್ತದೆ. ನಿಮ್ಮ ದೇಹದ ಇಮ್ಯೂನ್ ಸಿಸ್ಟಮ್ ಬಲಗೊಳಿಸಲು ಇದನ್ನು ಶರೀರಕ್ಕೆ ಚುಚ್ಚಲಾಗುತ್ತದೆ.
ಕರೋನಾ ವಿರುದ್ಧ ಮಹಾ ಲಸಿಕಾ ಅಭಿಯಾನ ನಡೆಯುತ್ತಿದೆ. ಮೇ 1 ರಿಂದ ಈ ಅಭಿಯಾನ ಆರಂಭವಾಗಲಿದೆ. ಈ ನಡುವೆಯೂ, ಕೆಲವರು ವ್ಯಾಕ್ಸಿನ್ ನಲ್ಲಿ ಸೈಡ್ ಅಫೆಕ್ಟ್ ಇರುತ್ತವೆ ಎಂದು ಗಾಬರಿಯಾಗಿದ್ದಾರೆ.
ವ್ಯಾಕ್ಸಿನೇಷನ್ ಸಮಯದಲ್ಲಿ, ಯಾವುದೇ ಕಾರಣಕ್ಕೂ ನಿಮ್ಮ ಮೆಡಿಕಲ್ ಹಿಸ್ಟರಿಯನ್ನು ಮುಚ್ಚಿಡಬೇಡಿ. ವೈದ್ಯರೊಂದಿಗೆ ಈ ಬಗ್ಗೆ ಚರ್ಚಿಸಿ. ಯಾಕೆಂದರೆ ಔಷಧಿಯ ಅಲರ್ಜಿ ಇದ್ದರೆ, ವಾಕ್ಸಿನೇಷನ್ ನಿಂದ ಸಮಸ್ಯೆಗಳಾಗಬಹುದು.
Corona Vaccine - ಕೊರೊನಾ ವೈರಸ್ ಗೆ ಬೂಸ್ಟರ್ ಡೋಸ್ ನೀಡಲು ಟ್ರಯಲ್ ಆರಂಭಗೊಂಡಿದೆ. ಚೆನ್ನೈನಲ್ಲಿ ಆರಂಭಗೊಂಡಿರುವ ಈ ಟ್ರಯಲ್ ನಲ್ಲಿ ಈಗಾಗಲೇ 7 ಜನರಿಗೆ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಡೋಸ್ ನೀಡಲಾಗಿದೆ.
ಕರೋನಾ ಹರಡುವ ರೀತಿ ನೋಡಿದರೆ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಹೋದರೆ ಉಳಿಗಾಲ ಇಲ್ಲ ಎನ್ನುವಂತೆಯೇ ತೋರುತ್ತದೆ. ಹಾಗಾಗಿ, ಲಸಿಕೆ ಹಾಕಲು ಹೆದರುವವರು ಕೂಡಾ ಲಸಿಕೆ ಹಾಕಿಸಿಕೊಳ್ಳಲು ಧಾವಿಸುತ್ತಿದ್ದಾರೆ. ಆದರೆ, ಸರ್ಕಾರ ಹಾಗೆಲ್ಲಾ ಲಸಿಕೆ ಹಾಕುವುದಿಲ್ಲ.
ವ್ಯಾಕ್ಸಿನೇಷನ್ನಲ್ಲಿ ಶಿಕ್ಷಕರು ಮತ್ತು ಬ್ಯಾಂಕ್ ಸಿಬ್ಬಂದಿಗಳನ್ನು ಸೇರಿಸಲು ಸರ್ಕಾರ ಚಿಂತಿಸುತ್ತಿದೆ. 22.79 ಕೋಟಿ ಜನಸಂಖ್ಯೆ ಇರುವ ಉತ್ತರಪ್ರದೇಶದಲ್ಲಿಈವರೆಗೆ ಸುಮಾರು 34 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.
ಈಗ ಪ್ರಪಂಚದಾದ್ಯಂತದ ಜನರಿಗೆ ಕರೋನಾ ಲಸಿಕೆಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಅಡ್ಡಪರಿಣಾಮಗಳ ದೂರುಗಳು ಸಹ ಅನೇಕ ಜನರಿಂದ ಬರುತ್ತಿವೆ. ಆದರೆ ಅವರಲ್ಲಿ ಮಹಿಳೆಯರ ಸಂಖ್ಯೆ ತುಂಬಾ ಹೆಚ್ಚಾಗಿದೆ ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ಕಾರಣವೇನು?
Corona Vaccination - ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಜೀಮ್ ಪ್ರೇಮ್ಜಿ ಭಾರತದ ವ್ಯಾಕ್ಸಿನೇಷನ್ (Corona Vaccination) ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ
ಜಗತ್ತಿನಾದ್ಯಂತ ಜನರಿಗೆ ಆತ್ಮವಿಶ್ವಾಸ ತುಂಬಲು ಜನ ನಾಯಕರಾದವರು ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ಪಲಾಯನ ಗೈದಿದ್ದರು. ಇದರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮೋದಿ ಎರಡನೇ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.