BS Yediyurappa : 'ರಾಜ್ಯದ ಕೊರೋನಾ ಲಸಿಕೆ ಕೊರತೆಯನ್ನ 2-3 ದಿನಗಳಲ್ಲಿ ಬಗೆಹರಿಸಲಾಗುವುದು' 

ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಚಾಲನೆಗೆ ಸಾಂಕೇತಿಕ ಆರಂಭ 

Last Updated : May 1, 2021, 05:38 PM IST
  • ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಚಾಲನೆಗೆ ಸಾಂಕೇತಿಕ ಆರಂಭ
  • ಮುಂದಿನ ಮೂರು ದಿನಗಳಲ್ಲಿ ರಾಜ್ಯದಲ್ಲಿನ ಲಸಿಕೆ ಕೊರತೆಯನ್ನು ಬಗೆಹರಿಸಲಾಗುವುದು ಎಂದು ಸಿಎಂ ಬಿಎಸ್ ಯಡಿಯುರಪ್ಪ
  • ಸೀರಮ್ ಇನ್‌ಸ್ಟಿಟ್ಯೂಟ್‌ಗೆ 1 ಕೋಟಿ ಡೋಸ್‌ಗಳನ್ನು ನೀಡುವಂತೆ ಆದೇಶ ನೀಡಿದ್ದೇವೆ
BS Yediyurappa : 'ರಾಜ್ಯದ ಕೊರೋನಾ ಲಸಿಕೆ ಕೊರತೆಯನ್ನ 2-3 ದಿನಗಳಲ್ಲಿ ಬಗೆಹರಿಸಲಾಗುವುದು'  title=

ಬೆಂಗಳೂರು : ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಚಾಲನೆಗೆ ಸಾಂಕೇತಿಕ ಆರಂಭ ನೀಡಿರುವುದರಿಂದ ಮುಂದಿನ ಮೂರು ದಿನಗಳಲ್ಲಿ ರಾಜ್ಯದಲ್ಲಿನ ಲಸಿಕೆ ಕೊರತೆಯನ್ನು ಬಗೆಹರಿಸಲಾಗುವುದು ಎಂದು ಸಿಎಂ ಬಿಎಸ್ ಯಡಿಯುರಪ್ಪ ಹೇಳಿದ್ದಾರೆ.

ನಗರದಲ್ಲಿ ಇಂದು ಈ ಕುರಿತು ಮಾತನಾಡಿದ ಅವರು(BS Yediyurappa), ರಾಜ್ಯಕ್ಕೆ ಇನ್ನೂ ಲಸಿಕೆ ಸರಬರಾಜು ಮಾಡದ ಕಾರಣ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವುದು ವಿಳಂಬವಾಗಲಿದೆ ಎಂದು ಅವರು ಹೇಳಿದ ಒಂದು ದಿನದ ನಂತರ ಸಿಎಂ ಯಡಿಯೂರಪ್ಪ ಅವರು ಮತ್ತೆ ಆ ಹೇಳಿಕೆ ಪ್ರತಿಕ್ರಿಯೆಸಿದ್ದಾರೆ. "18 ವರ್ಷಕ್ಕಿಂತ ಮೇಲ್ಪಟ್ಟವರಿಗೆ  ವ್ಯಾಕ್ಸಿನೇಷನ್ ಅನ್ನು ಸಾಂಕೇತಿಕವಾಗಿ ಪ್ರಾರಂಭಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಭಾರತ ಸರ್ಕಾರದ ನಿರ್ದೇಶನದಂತೆ, ಸುಮಾರು 18 ವರ್ಷ ವಯಸ್ಸಿನ ವರಿಗೆ ಲಸಿಕೆ ಹಾಕುವ ಚಾಲನೆ ಇಂದಿನಿಂದ ಪ್ರಾರಂಭವಾಗುತ್ತಿದೆ" ಎಂದು ತಿಳಿಸಿದರು.

ಇದನ್ನೂ ಓದಿ : Covid Protocol : ಬೈಎಲೆಕ್ಷನ್ ಮತ ಎಣಿಕೆಗೆ ತೆಗೆದುಕೊಳ್ಳಲಿದೆ ಹೆಚ್ಚು ಸಮಯ..!

ಸುಮಾರು 18 ವರ್ಷ ವಯಸ್ಸಿನ ಜನರಿಗೆ ಲಸಿಕೆಗಳನ್ನು ಉಚಿತ(Free Vaccin)ವಾಗಿ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು. ಕರ್ನಾಟಕದಲ್ಲಿ ಒಂದು ಲಕ್ಷ ಲಸಿಕೆಗಳ ದಾಸ್ತಾನು ಇದ್ದಾಗ ರಾಜ್ಯವು ಕೇಂದ್ರದಿಂದ ಮೂರು ಲಕ್ಷ ಲಸಿಕೆಗಳನ್ನು ಪಡೆದಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪೂರ್ಣ ಪ್ರಮಾಣದ ವ್ಯಾಕ್ಸಿನೇಷನ್ ಚಾಲನೆಯಲ್ಲಿ, ಎರಡು ಕೋಟಿ ಲಸಿಕೆಗಳನ್ನು ಖರೀದಿಸಲು ರಾಜ್ಯ ಸರ್ಕಾರ ಹಣವನ್ನು ಪಾವತಿಸಿದೆ ಎಂದು ಹೇಳಿದರು.

ಇದನ್ನೂ ಓದಿ : Corona Vaccine: ಆದಷ್ಟು ಬೇಗ ಕೊರೋನಾ ಲಸಿಕೆ ಕೊರತೆ ನಿವಾರಿಸಿ, ಎಲ್ಲರಿಗೂ ಲಸಿಕೆ ಕೊಡಿ-ಸಿದ್ದರಾಮಯ್ಯ

"ಮುಂದಿನ ಎರಡು, ಮೂರು ದಿನಗಳಲ್ಲಿ ಲಸಿಕೆ(Vaccin) ಸಮಸ್ಯೆಯನ್ನ ಸುಧಾರಿಸುತ್ತದೆ ಎಂಬ ನಂಬಿಕೆ ನನಗಿದೆ .. ರಾಜ್ಯದ 3.26 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದ್ದವೇ" ಎಂದು ಹೇಳಿದರು.

ಇದನ್ನೂ ಓದಿ : COVID-19 Crisis: ಆತಂಕ ತರಿಸಿದ ಬೆಂಗಳೂರಿನ ಕೊರೊನಾ ಪ್ರಕರಣಗಳ ಹೆಚ್ಚಳ

ಶುಕ್ರವಾರ ಆರೋಗ್ಯ ಸಚಿವ ಕೆ ಸುಧಾಕರ್, "ನಾವು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್‌(Serum Institute)ಗೆ 1 ಕೋಟಿ ಡೋಸ್‌ಗಳನ್ನು ನೀಡುವಂತೆ ಆದೇಶ ನೀಡಿದ್ದೇವೆ. ಆದರೆ ಅಧಿಕೃತ ಸುದ್ದಿಯೆಂದರೆ, ಅದನ್ನು ನಿಗದಿಪಡಿಸಿದಂತೆ ನಾಳೆಯಿಂದ ನಮಗೆ ನೀಡಲು ಅವರು ಇನ್ನೂ ಸಿದ್ಧರಿಲ್ಲ" ಎಂದು ಸುಧಾಕರ್ ಹೇಳಿದರು.

ಇದನ್ನೂ ಓದಿ : Covid-19 in Karnataka: ಕರ್ನಾಟಕವನ್ನು ಬೆಚ್ಚಿಬೀಳಿಸಿದ ಕೊರೊನಾ, ಮೃತಪಟ್ಟವರಲ್ಲಿ ಶೇ.30 ರಷ್ಟು ಜನರಿಗೆ ಇತರ ಯಾವುದೇ ಕಾಯಿಲೆ ಇರಲಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News