Srinivas Prabhu: ಸ್ಯಾಂಡಲ್ವುಡ್ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು, ಸ್ಯಾಂಡ್ವುಡ್ನಲ್ಲಿ ಪ್ರೇಮಲೋಕ ಸೃಷ್ಟಿಸಿದವರು. ಇಂದಿಗೂ, ಈ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದರೆ ಅವುಗಳನ್ನು ನೋಡುವ ಒಂದು ವಿಶೇಷ ಪ್ರೇಕ್ಷಕವರ್ಗವೇ ಇದೆ. ರವಿಚಂದ್ರನ್ ಅವರು ಆರಂಭದ ಸಿನಿಮಾ ಯಾತ್ರೆಯಲ್ಲಿ ತಮ್ಮ ಸಿನಿಮಾಗಳಿಗೆ ತಾವು ಧ್ವಿನಿ ನೀಡುತ್ತಿರಲಿಲ್ಲ, ಬದಲಿಗೆ ಅವರ ಸಿನಿಮಾಗಳಿಗೆ ಧ್ವನಿಯಾಗಿದ್ದು ನಟ ಹಾಗೂ ಕಂಠದಾನ ಕಲಾವಿದ ಶ್ರೀನಿವಾಸ್ ಪ್ರಭು.
ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಎನ್.ಎಸ್.ರಾಜಕುಮಾರ್ - ವಿ.ಎಸ್ ರಾಜಕುಮಾರ್ ನಿರ್ಮಾಣದ "ಗೌರಿ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಶೇಷಾದ್ರಿಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೇರಿತು.
ನಟಿ ತಾರಾ, ನಟರಾದ ಮನುರಂಜನ್, ಸಾಧುಕೋಕಿಲ, ಶರಣ್, ಆದಿ ಲೋಕೇಶ್, ನಿರ್ದೇಕರಾದ ಶಿವಮಣಿ, ಸಂತೋಷ್ ಆನಂದರಾಮ್, ಚೇತನ್ ಕುಮಾರ್ ಮುಂತಾದ ಗಣ್ಯರು ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದರು.
ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಲಹರಿ ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷಗಳು ಕಳೆದಿವೆ. ಈಗ ಮತ್ತೊಂದು ವಿಶೇಷವೆಂದರೆ ಈ ಸಂಸ್ಥೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿಕೇಜ್ ನೇತೃತ್ವದಲ್ಲಿ "ಡಿವೈನ್ ಟೈಡ್ಸ್" ಎಂಬ ಅದ್ಭುತ ಆಲ್ಬಂ ಮೂಡಿಬಂದಿದೆ. ಈ ಆಲ್ಬಂಗಾಗಿ ರಿಕ್ಕಿಕೇಜ್ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಅವಾರ್ಡ್ ಬಂದಿರುವುದು ಇದು ಎರಡನೇ ಬಾರಿ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಚಲನಚಿತ್ರರಂಗದ ಬಹುತೇಕ ಕೆಲಸಗಳು ಸ್ಥಗಿತಗೊಂಡಿದ್ದು, ಇಂತಹ ಸಂದರ್ಭದಲ್ಲಿ ಚಿತ್ರರಂಗವನ್ನೇ ಅವಲಂಭಿಸಿರುವ ಕಾರ್ಮಿಕರಿಗೆ ಪ್ಯಾಕೇಜ್ ನೀಡುವ ಕುರಿತಾಗಿ ಚರ್ಚಿಸಲು ಡಾ.ಶಿವರಾಜ್ ಕುಮಾರ್ (Shiva Rajkumar )ಮನೆಯಲ್ಲಿ ಕರೆದಿದ್ದ ಸಭೆಗೆ ಬಹುತೇಕ ಎಲ್ಲ ನಟರು ಆಗಮಿಸುವ ಮೂಲಕ ಮತ್ತೆ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.