ಮಲೆನಾಡಿನ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ ಹೆಚ್ಚು ನೀರು ಬರಬಹುದೆಂದು ಅಂದಾಜಿಸಿ ನದಿ ಪ್ರವಾಹದಿಂದ ಮುಳುಗಡೆಯಾಗುವ ಪ್ರದೇಶದಲ್ಲಿ ಜನ, ಜಾನುವಾರುಗಳ ರಕ್ಷಣೆಗಾಗಿ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಮತ್ತು ತುರ್ತು ಸೇವಾ ಉಪಕರಣಗಳನ್ನು ಸನ್ನದ್ದವಾಗಿಸಲು ಅಣಕು ರಕ್ಷಣಾ ಕಾರ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಕೃತಿ ವಿಕೋಪದಿಂದುಂಟಾಗುವ ಪರಿಸ್ಥಿತಿ ಎದುರಿಸಲು ಸಿದ್ದತೆಗಾಗಿ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
sweetest water river in India: ಜಗತ್ತಿನಲ್ಲಿ ಸುಮಾರು 1.5 ಲಕ್ಷ ನದಿಗಳು ಜನರ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತವೆ.. ಅದರಂತೆ ನಮ್ಮ ದೇಶದಲ್ಲಿ ಸುಮಾರು 200 ನದಿಗಳಿವೆ. ಹಾಗಾದರೆ ಜಗತ್ತಿನ ಅತ್ಯಂತ ಸಿಹಿಯಾದ ನೀರಿನ ನದಿ ಯಾವುದು ಎನ್ನುವುದನ್ನು ಇದೀಗ ತಿಳಿಯೋಣ..
ಹಾವೇರಿಯಲ್ಲಿ ಮುಂದುವರೆದ ಮಳೆರಾಯನ ಆರ್ಭಟ ಅಪಾಯ ಮಟ್ಟ ಮೀರಿ ಹರಿಯುತ್ತಿರೋ ತುಂಗಭದ್ರಾ ನದಿ ನದಿಯಲ್ಲಿ ಕೈ ಕಾಲು ತೊಳೆಯಲು ಹೋಗಿದ್ದ ಯುವಕ ನಾಪತ್ತೆ ಕಾಲು ಜಾರಿ ಬಿದ್ದು ನೀರಿನಲ್ಲಿ ತೇಲಿ ಹೋದ ಯುವಕ ರಾಣಿಬೆನ್ನೂರು ತಾ. ಮಾಕನೂರು ಗ್ರಾಮದ ಬಳಿ ಘಟನೆ
ಪ್ರಸಕ್ತ ವರ್ಷ ಮಳೆ ಹೆಚ್ಚಾಗಿದ್ದರಿಂದ ಕೆರೆ ಕಟ್ಟೆಗಳು, ಹಳ್ಳ ಕೊಳ್ಳ ತುಂಬಿ ಹರಿದು ಕೋಡಿ ಬಿದ್ದಿದೆ. ಹಚ್ಚ ಹಸಿರಾದ ವಾತಾವರಣ ಇದೆ. ಹಾಗಾಗಿ ನೀರು ನಾಯಿಗಳು ಸುಂದರ ತಾಣ ಹುಡಿಕಿಕೊಂಡು ಇಲ್ಲಿಗೆ ಬಂದಿರಬಹುದು ಎಂದು ಸ್ಥಳೀಯರು ಮಾತನಾಡುತಿದ್ದಾರೆ.
ಮಂತ್ರಾಲಯದ ರಾಯರ 351ನೇ ಆರಾಧನಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಧ್ವಜಾರೋಹಣದ ಮೂಲಕ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. 2 ವರ್ಷಗಳ ಬಳಿಕ ಅದ್ಧೂರಿಯಾಗಿ ಈ ಮಹೋತ್ಸವ ನಡೆಯುತ್ತಿದ್ದು, ಈ ಬಾರಿ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ತುಂಗಭದ್ರ ನದಿಯಲ್ಲಿ ನೀರು ಹೆಚ್ಚಳವಾದ ಹಿನ್ನೆಲೆ ನದಿ ಸ್ನಾನಕ್ಕೆ ನಿರ್ಬಂಧ ಹೇರಲಾಗಿದೆ.
ತುಂಗಭದ್ರಾ ಡ್ಯಾಂನಿಂದ ನೀರು ಬಿಡಲಾಗಿದೆ ಆದರೆ ಮಂತ್ರಾಲಯಕ್ಕೆ ಅದರಿಂದ ಯಾವುದೇ ಪ್ರವಾಹವಾಗಿಲ್ಲ ಆ ನೀರು ಸೀಮಿತ ಮಟ್ಟದಲ್ಲೇ ಹರಿಯುತ್ತಿದೆ ಭಕ್ತರ ಆತಂಕ ಪಡದೇ ರಾಯರ ದರ್ಶನಕ್ಕೆ ಆಗಮಿಸಬಹುದು
ತುಂಗಾಭದ್ರಾ ಜಲಾಶಯ ಭರ್ತಿಯಾಗಿದ್ದು, ಹಂಪಿ ಬಳಿಯ ತುಂಗಾಭದ್ರಾ ನದಿಯಲ್ಲೂ ನೀರು ನಾಯಿಗಳು ಕಾಣಿಸಿಕೊಳ್ಳುತ್ತಿವೆ. ಜನರಿಲ್ಲದ ವೇಳೆ ತುಂಗಾಭದ್ರಾ ದಡದ ಮೇಲೆ ನೀರು ನಾಯಿಗಳು ಬರುತ್ತಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.