Suryakumar Yadav: ಇನ್ನೊಂದೆಡೆ ರಾಹುಲ್ ತ್ರಿಪಾಠಿ 16 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ 35 ರನ್ ಗಳಿಸಿ ಬಿರುಸಿನ ಇನ್ನಿಂಗ್ಸ್ ಆಡಿದ್ದಾರೆ. ಅಕ್ಷರ್ ಪಟೇಲ್ 9 ಎಸೆತಗಳಲ್ಲಿ 21 ರನ್ ಮತ್ತು ಶುಭಮನ್ ಗಿಲ್ 36 ಎಸೆತಗಳಲ್ಲಿ 46 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ 229 ರನ್ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 137 ರನ್ಗಳಿಗೆ ಆಲೌಟ್ ಆಗಿದ್ದು, ಭಾರತ 91 ರನ್ಗಳ ದೊಡ್ಡ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದರೊಂದಿಗೆ ಭಾರತ ಈ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.
Suryakumar Yadav World Record: ಶ್ರೀಲಂಕಾ ವಿರುದ್ಧ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇಶಾನ್ ಕಿಶನ್ ಬೇಗನೇ ಔಟಾಗಿ ಪೆವಿಲಿಯನ್ ಗೆ ಮರಳಿದರು. ಈ ಬಳಿಕ ವೇಗದ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ 9 ಸುದೀರ್ಘ ಸಿಕ್ಸರ್ ಒಳಗೊಂಡ 112 ರನ್ ಗಳಿಸಿದರು. ಇವರ ಬ್ಯಾಟಿಂಗ್ ನೋಡಿ ಎದುರಾಳಿ ಬೌಲರ್ ಗಳು ಶಾಕ್ ಆಗಿದ್ದಂತು ಸುಳ್ಳಲ್ಲ.
Suryakumar Yadav: 2022ರ ವರ್ಷವು ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷವಾದ ವರ್ಷವೇನಲ್ಲ. ಈ ವರ್ಷ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ 2022ರಂತಹ ದೊಡ್ಡ ಟೂರ್ನಿಗಳಲ್ಲಿ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು. 2022 ರಲ್ಲಿ ತಂಡವು ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗದಿದ್ದರೂ, ಭಾರತೀಯ ಕ್ರಿಕೆಟ್ನ ಸ್ಟಾರ್ ಆಟಗಾರರೊಬ್ಬರು ಈ ವರ್ಷ ದೊಡ್ಡ ದೊಡ್ಡ ದಾಖಲೆಗಳನ್ನು ಮಾಡಿದ್ದಾರೆ. ಈ ಆಟಗಾರ ಬೇರೆ ಯಾರೂ ಅಲ್ಲ. ಟೀಂ ಇಂಡಿಯಾದ ಮಿಸ್ಟರ್ 360 ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಕೀವಿಸ್ ದಾಳಿಯನ್ನು ಪುಡಿಗಟ್ಟಿದ್ದ ಟೀಂ ಇಂಡಿಯಾದ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಕೇವಲ 49 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಸೂರ್ಯ ಶತನಕದ ಜೊತೆ ಮತ್ತೊಂದು ದಾಖಲೆ ಮಾಡಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಎರಡು ಶತಕ ಸಿಡಿಸಿದ ಖ್ಯಾತಿಗೆ ಸೂರ್ಯಕುಮಾರ್ ಯಾದವ್ ಭಾಜನರಾಗಿದ್ದಾರೆ. ಎರಡನೇ T20 ಅಂತಾರಾಷ್ಟ್ರೀಯ ಶತಕಕ್ಕಾಗಿ ಸೂರ್ಯ 49 ಎಸೆತಗಳನ್ನು ಎದುರಿಸಿದರು. ಇದರಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್ಗಳು ಸೇರಿವೆ.
SuryaKumar Yadav Record: ಒಂದು ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಹೆಸರಿನಲ್ಲಿದೆ. ರಿಜ್ವಾನ್ 2021 ರಲ್ಲಿ 29 ಪಂದ್ಯಗಳಲ್ಲಿ 134.89 ಸ್ಟ್ರೈಕ್ ರೇಟ್ ಮತ್ತು 73.66 ರ ಸರಾಸರಿಯಲ್ಲಿ 1326 ರನ್ ಬಾರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಈ ದಾಖಲೆಯನ್ನು ಸಾಧಿಸಲು ಕೇವಲ 286 ರನ್ಗಳ ಅಂತರದಲ್ಲಿದ್ದಾರೆ.
Suryakumar Yadav: ಕ್ಯಾಲೆಂಡರ್ ವರ್ಷದಲ್ಲಿ 1000 T20I ರನ್ಗಳನ್ನು ಪೂರ್ಣಗೊಳಿಸಿದ ಸೂರ್ಯಕುಮಾರ್, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ನಿರ್ಗಮನದ ನಂತರ 4 ನೇ ಸ್ಥಾನದಲ್ಲಿದ್ದ ಭಾರತದ ಅತ್ಯುತ್ತಮ ಬ್ಯಾಟರ್ ಭಾರತದ ರನ್ ಸ್ಕೋರಿಂಗ್ ಗೆ ತೊಂದರೆಯಾಗದಂತೆ ನೋಡಿಕೊಂಡರು.
Suryakumar Yadav Record: ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ T20 ಸರಣಿಯಲ್ಲೂ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದು, ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ 780 ರೇಟಿಂಗ್ಸ್ ಗಳಿಸುವ ಮೂಲಕ 3ನೇ ಸ್ಥಾನಕ್ಕೇರಿದ್ದರು. ಇದರ ಜೊತೆಗೆ 573 ಎಸೆತಗಳಲ್ಲಿ ವೇಗವಾಗಿ 1 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಖ್ಯಾತಿಗೂ ಒಳಪಟ್ಟಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.