Suryakumar Yadav: ಸೂರ್ಯಕುಮಾರ್ ಮತ್ತೊಂದು ದಾಖಲೆ: ಪಾಕ್ ನಾಯಕನನ್ನು ಹಿಂದಿಕ್ಕಿದ ಟೀಂ ಇಂಡಿಯಾದ ‘ಮಿಸ್ಟರ್ 360’

Suryakumar Yadav Record: ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ T20 ಸರಣಿಯಲ್ಲೂ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದು, ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ 780 ರೇಟಿಂಗ್ಸ್ ಗಳಿಸುವ ಮೂಲಕ 3ನೇ ಸ್ಥಾನಕ್ಕೇರಿದ್ದರು. ಇದರ ಜೊತೆಗೆ 573 ಎಸೆತಗಳಲ್ಲಿ ವೇಗವಾಗಿ 1 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಖ್ಯಾತಿಗೂ ಒಳಪಟ್ಟಿದ್ದರು.

Written by - Bhavishya Shetty | Last Updated : Oct 30, 2022, 11:46 AM IST
    • ಟೀಂ ಇಂಡಿಯಾ ಮಿ.360 ಸೂರ್ಯಕುಮಾರ್ ಯಾದವ್ ಹೊಸ ದಾಖಲೆ
    • ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ದಾಖಲೆಯನ್ನು ಸರಿಗಟ್ಟಿರುವ ಯಾದವ್
    • ಈ ದಾಖಲೆಯಲ್ಲಿ 1 ಶತಕ, 7 ಅರ್ಧಶತಕ, 77 ಬೌಂಡರಿ ಹಾಗೂ 52 ಸಿಕ್ಸರ್‌ಗಳು ಸೇರಿವೆ
Suryakumar Yadav: ಸೂರ್ಯಕುಮಾರ್ ಮತ್ತೊಂದು ದಾಖಲೆ: ಪಾಕ್ ನಾಯಕನನ್ನು ಹಿಂದಿಕ್ಕಿದ ಟೀಂ ಇಂಡಿಯಾದ ‘ಮಿಸ್ಟರ್ 360’ title=
suryakumar yadav

Suryakumar Yadav Record: ಕಳೆದ ಪಂದ್ಯದಲ್ಲಿ ನೆದರ್‌ಲ್ಯಾಂಡ್ ವಿರುದ್ಧ ಸ್ಫೋಟಕ ಅರ್ಧಶತಕ ಗಳಿಸಿದ ಟೀಂ ಇಂಡಿಯಾ ಮಿ.360 ಸೂರ್ಯಕುಮಾರ್ ಯಾದವ್ ಹೊಸ ದಾಖಲೆಯನ್ನು ಮಾಡಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ದಾಖಲೆಯನ್ನು ಸರಿಗಟ್ಟಿರುವ ಯಾದವ್ ಈ ವರ್ಷದಲ್ಲಿ ಅತಿಹೆಚ್ಚು ರನ್‌ ಗಳಿಸಿದ ಮೊದಲ ಆಟಗಾರ ಎನ್ನಿಸಿಕೊಂಡಿದ್ದಾರೆ.

ಇದನ್ನೂ ಓದಿ: Mithali Raj: ಭಾರತ-ದ.ಆಫ್ರಿಕಾ ಪಂದ್ಯಕ್ಕಿಂದು ಹೊಸ ಮೆರುಗು: ಮೊದಲ ಬಾರಿಗೆ ಕಾಮೆಂಟರಿ ಮಾಡಲಿರುವ ‘ಮಿಥಾಲಿ’

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ T20 ಸರಣಿಯಲ್ಲೂ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದು, ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ 780 ರೇಟಿಂಗ್ಸ್ ಗಳಿಸುವ ಮೂಲಕ 3ನೇ ಸ್ಥಾನಕ್ಕೇರಿದ್ದರು. ಇದರ ಜೊತೆಗೆ 573 ಎಸೆತಗಳಲ್ಲಿ ವೇಗವಾಗಿ 1 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಖ್ಯಾತಿಗೂ ಒಳಪಟ್ಟಿದ್ದರು.

 

ಇದೀಗ ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಸ್ಪೋಟಕ ಅರ್ಧ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ದಾಖಲೆಯಿಂದ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌ನನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ಇನ್ನು ಈ ದಾಖಲೆಯಲ್ಲಿ 1 ಶತಕ, 7 ಅರ್ಧಶತಕ, 77 ಬೌಂಡರಿ ಹಾಗೂ 52 ಸಿಕ್ಸರ್‌ಗಳು ಸೇರಿವೆ.

ಇದನ್ನೂ ಓದಿ: IND vs SA: ಟೀಂ ಇಂಡಿಯಾದಲ್ಲಿ ಆಗುತ್ತಾ ಬದಲಾವಣೆ? ಅಥವಾ ದೆಹಲಿಯ ಈ ಆಟಗಾರನಿಗೆ ಸಿಗುತ್ತಾ ಅವಕಾಶ!

ಇನ್ನು ಇಂದು ಪರ್ತ್ ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಭರ್ಜರಿ ಆಟ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಉತ್ತಮ ಲಯದಲ್ಲಿರುವ ಸೂರ್ಯ ಕುಮಾರ್ ಯಾದವ್, ಹರಿಣಗಳನ್ನು ಬಗ್ಗುಬಡಿಯಲು ಕಾತುರರಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News