ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ನಿರ್ದೇಶಕರಾದ ಎಸ್.ಸೋಮನಾಥ್ ಅವರು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರ ಕಾರ್ಯಾಚರಣೆಗೆ ಮುಕ್ತವಾಗಲಿದೆ ಎಂದು ಘೋಷಿಸಿದ್ದಾರೆ. ಈ ಬಾಹ್ಯಾಕಾಶ ಕೇಂದ್ರ ಸಣ್ಣ ಉಪಗ್ರಹಗಳ ಉಡಾವಣೆಯ ಸಲುವಾಗಿಯೇ ವಿಶೇಷವಾಗಿ ಸಿದ್ಧಗೊಂಡಿದೆ. ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 28ರಂದು ಶಂಕುಸ್ಥಾಪನೆ ನೆರವೇರಿಸಿದರು. ಇದರ ಬಳಿಕ ಮಾತನಾಡಿದ ಇಸ್ರೋ ಮುಖ್ಯಸ್ಥರಾದ ಸೋಮನಾಥ್ ಅವರು, ಇಸ್ರೋದ ಎರಡನೇ ಉಪಗ್ರಹ ಉಡಾವಣಾ ಕೇಂದ್ರ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ ಎಂದರು.
GSLV F14: ಇಸ್ರೋ ಫೆಬ್ರವರಿ 17, 2024 ರಂದು ಸಂಜೆ 5.30 ಕ್ಕೆ ಶ್ರೀಹರಿಕೋಟಾದಿಂದ GSLV-F14/INSAT 3DS ಮಿಷನ್ ಅನ್ನು ಪ್ರಾರಂಭಿಸಲಿದೆ. ಬಾಹ್ಯಾಕಾಶ ನೌಕೆಯು ಹವಾಮಾನ ಉಪಗ್ರಹ INSAT-3DS ಅನ್ನು ಜಿಯೋಸಿಂಕ್ರೊನಸ್ ವರ್ಗಾವಣೆ ಕಕ್ಷೆಗೆ ಉಡಾಯಿಸುತ್ತದೆ. ಜಿಎಸ್ಎಲ್ವಿ ಮೂರು ಹಂತಗಳಲ್ಲಿ ಉಡಾವಣೆಯಾಗಲಿದೆ.
Aditya-L1 Mission: ಸೆಪ್ಟೆಂಬರ್ ಮೊದಲ ವಾರದಲ್ಲಿ ಸೂರ್ಯನ ಅಧ್ಯನಕ್ಕೆ ‘Aditya L-1’ ಯೋಜನೆ ಕೈಗೊಳ್ಳಲಾಗುವುದು ಎಂದು ಕೆಲ ದಿನಗಳ ಹಿಂದಷ್ಟೇ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದರು.
Chandrayaan-3 Launch: ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 14ನೇ ಜುಲೈ 2023 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.
Chandrayaan-3 mission: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಇಂದು ಮಧ್ಯಾಹ್ನ(ಜುಲೈ 14) 2.35ಕ್ಕೆ LVM-3 ರಾಕೆಟ್ ಉಡಾವಣೆಗೊಂಡಿದೆ. ಲ್ಯಾಂಡರ್(ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ) ಹೊತ್ತ ರಾಕಟ್ ನಭಕ್ಕೆ ಚಿಮ್ಮಿದೆ.
ಇಸ್ರೋ ಇಂದು ತನ್ನ ಅತ್ಯಂತ ಭಾರವಾದ ರಾಕೆಟ್ LVM-3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಯುಕೆ ಕಂಪನಿ ಒನ್ವೆಬ್ನ 36 ಬ್ರಾಡ್ಬ್ಯಾಂಡ್ ಉಪಗ್ರಹಗಳನ್ನು ಹೊತ್ತ ರಾಕೆಟ್ ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಉಡಾವಣೆ ನಡೆಸಿತು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸರಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ `ಪುನೀತ್' ಉಪಗ್ರಹವನ್ನು ನ.15ರಿಂದ ಡಿ.31ರ ನಡುವೆ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಡಾ.ಕೆ. ಶಿವನ್ (K Sivan) ಅವರು ಜಿಎಸ್ಎಲ್ವಿ-ಎಫ್ 10/ಇಒಎಸ್ -03 ಕಾರ್ಯಾಚರಣೆಯನ್ನು ಕ್ರಯೋಜೆನಿಕ್ ಹಂತದಲ್ಲಿ (Cryogenic Stage) ತಾಂತ್ರಿಕ ವ್ಯತ್ಯಾಸದಿಂದಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಈ 42 ನೇ ಮಿಶನ್ಗೆ, ISRO ವಿಶ್ವಾಸಾರ್ಹ ಕಾರ್ಯಸಾಧ್ಯವಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C40) ಅನ್ನು ಕಳುಹಿಸಿತು. ಇದು ಕಾರ್ಟೊಸೆಟ್ -2 ಸರಣಿಯ ಉಪಗ್ರಹ ಮತ್ತು 30 ಸಹ-ಪ್ರಯಾಣಿಕರ (ಸುಮಾರು 613 ಕೆಜಿಯ ಒಟ್ಟು ತೂಕದ) ಉಪಗ್ರಹದಲ್ಲಿ 9.38 ಕ್ಕೆ ಹಾರಾಟ ಮಾಡಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.