Tablighi Jamaat Banned - ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಿದೆ. ಈ ಸಂಘಟನೆ ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ (One Of The Gates Of Terrorism) ಒಂದು ಎಂದು ಅಲ್ಲಿನ ಸರ್ಕಾರ ಬಣ್ಣಿಸಿದೆ. ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು (Saudi Islamic Affair Ministry) ತಬ್ಲಿಘಿ ಜಮಾತ್ (Tablighi Jamaat) ಕುರಿತು ಮುಂದಿನ ಶುಕ್ರವಾರದವರೆಗೆ ಈ ಕುರಿತು ಜನರಿಗೆ ಮಾಹಿತಿಯನ್ನು ಒದಗಿಸಲು ಮಸೀದಿಗಳಲ್ಲಿರುವ ಉಪದೇಶಕರಿಗೆ ಆದೇಶ ನೀಡಿದೆ.
ಸೈನ್ಯಕ್ಕೆ ಸೇರಲು ಮಹಿಳೆಯರು ವಯಸ್ಸು ಮತ್ತು ಉದ್ದದ ಮಾನದಂಡಗಳನ್ನು ಪೂರೈಸಬೇಕು ಎಂದು ಸೌದಿ ಅರೇಬಿಯಾ ಸರ್ಕಾರ ಹೇಳಿದೆ. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ವಿದೇಶಿ ಪುರುಷರನ್ನು ಮದುವೆಯಾಗುವ ಮಹಿಳೆಯರನ್ನು ಸೈನ್ಯಕ್ಕೆ ಸೇರಿಸಲಾಗುವುದಿಲ್ಲ.
ಕಾರ್ಮಿಕ ಸುಧಾರಣೆಗಳತ್ತ ಹೆಜ್ಜೆ ಹಾಕುತ್ತಿರುವ ಸೌದಿ ಅರೇಬಿಯಾ ವಿವಾದಾತ್ಮಕ 'ಕಫಾಲಾ ವ್ಯವಸ್ಥೆಯನ್ನು' ಕೊನೆಗೊಳಿಸುವುದಾಗಿ ಘೋಷಿಸಿದೆ. ಸೌದಿ ಅರೇಬಿಯಾದ ಈ ನಿರ್ಧಾರವನ್ನು ಭಾರತೀಯರಿಗೆ ದೀಪಾವಳಿ ಉಡುಗೊರೆಯಾಗಿ ಕಾಣಬಹುದು. ಏಕೆಂದರೆ ಹೆಚ್ಚಿನ ಸಂಖ್ಯೆಯ ಭಾರತೀಯ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಾರೆ.
ಇದ್ದಕ್ಕಿದ್ದಂತೆ ಸೌದಿ ಅರೇಬಿಯಾ (Soudi Arabia) ಪಾಕಿಸ್ತಾನಕ್ಕೆ (Pakistan)ಶಾಕ್ ನೀಡಿದೆ. ಪಾಕಿಸ್ತಾನ ನಕ್ಷೆಯಿಂದ ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್ (Gilgit) ಮತ್ತು ಬಾಲ್ಟಿಸ್ತಾನಗಳನ್ನು (Baltistan )ತೆಗೆದು ಹಾಕುವ ಮೂಲಕ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಸರಿಯಾದ ಏಟು ನೀಡಿದೆ.
ಉತ್ತರ ಸೌದಿ ಅರೇಬಿಯಾದ ದಿಬ್ಬಗಳಲ್ಲಿ, ಒಣಗಿದ ನೆಲದ ಮೇಲೆ ಹರಡಿರುವ ಮಾನವ ಹೆಜ್ಜೆಗುರುತುಗಳನ್ನು ಕಂಡುಹಿಡಿಯಲಾಗಿದೆ. ಮಾನವನ ಹೆಜ್ಜೆಗುರುತುಗಳ ಆವಿಷ್ಕಾರವು ಧೃಡಿಕರಿಸಲ್ಪಟ್ಟರೆ, ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಇನ್ನೂ ಕಂಡುಬರುವ ನಮ್ಮ ಜಾತಿಯ ಅತ್ಯಂತ ಹಳೆಯ ಕುರುಹುಗಳನ್ನು ಗುರುತಿಸುತ್ತದೆ, ಇದು ವಿಶ್ವದಾದ್ಯಂತ ಹರಡಿರುವ ಆರಂಭಿಕ ಮನುಷ್ಯರ ಕೂರುಹಾಗುತ್ತದೆ ಎಂದು ನ್ಯಾಷನಲ್ ಜಿಯೋಗ್ರಾಫಿ ವರದಿಯೊಂದು ತಿಳಿಸಿದೆ.
ಕಳೆದ ಐದು ವರ್ಷಗಳಲ್ಲಿ ವಿವಿಧ ಅಪರಾಧಗಳು ಮತ್ತು ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಒಟ್ಟು 2,85,980 ಪಾಕಿಸ್ತಾನಿಗಳನ್ನು ವಾಪಸ್ ಕಳುಹಿಸಿದೆ ಎಂದು ಪಾಕಿಸ್ತಾನ ತಿಳಿಸಿದೆ.
ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್ ರೋಬ್ಬರಿಗೆ ಚೀನಾದಲ್ಲಿ ಹುಟ್ಟಿದ ಮತ್ತು ಇದುವರೆಗೆ 17 ಜನರ ಸಾವಿಗೆ ಕಾರಣವಾದ ಮಾರಣಾಂತಿಕ ಕೊರೊನಾವೈರಸ್ ಸೋಂಕು ತಗುಲಿದೆ.
ವಿಶ್ವದ ಅತಿದೊಡ್ಡ ತೈಲ ರಫ್ತುದಾರರಾದ ಸೌದಿ ಅರೇಬಿಯಾವು ದೇಶದ ಬೆಳವಣಿಗೆಯ ಸಾಮರ್ಥ್ಯವನ್ನು ಪರಿಗಣಿಸಿ ಪೆಟ್ರೋಕೆಮಿಕಲ್ಸ್, ಮೂಲಸೌಕರ್ಯ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಭಾರತದಲ್ಲಿ 100 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಲು ಎದುರು ನೋಡುತ್ತಿದೆ.
ಸಾಂಪ್ರದಾಯಿಕ ಕಾನೂನು ಚೌಕಟ್ಟುಗಳಿಂದ ಸೌದಿ ವಿಮಖವಾಗುತ್ತಿದೆಯಾ? ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಇದಕ್ಕೆ ಪೂರಕ ಎನ್ನುವಂತೆ ಕಳೆದ ಕೆಲವು ವರ್ಷಗಳಲ್ಲಿ ಸೌದಿಯಲ್ಲಿನ ಬೆಳವಣಿಗೆಗಳನ್ನು ನೋಡಿದಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.
ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಸಲ್ಮಾನ್ ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೌದಿಯಲ್ಲಿರುವ 2.5 ಮಿಲಿಯನ್ ಪಾಕಿಸ್ತಾನದ ಕಾರ್ಮಿಕರಿಗೆ ನೆರವನ್ನು ನೀಡಬೇಕೆಂದು ಕೇಳಿದಾಗ "ಪಾಕಿಸ್ತಾನಕ್ಕೆ ನಾವು ಇಲ್ಲವೆಂದು ಹೇಳಲಿಕ್ಕೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.