Saudi Arabia: ತಬ್ಲಿಘಿ ಜಮಾತ್ ಮೇಲೆ ನಿಷೇಧ ವಿಧಿಸಿದ ಸೌದಿ ಅರೇಬಿಯಾ, ಭಯೋತ್ಪಾದನೆಯ ಹೆಬ್ಬಾಗಿಲು ಎಂದ ಅಲ್ಲಿನ ಸರ್ಕಾರ

Tablighi Jamaat Banned - ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಿದೆ. ಈ ಸಂಘಟನೆ ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ (One Of The Gates Of Terrorism) ಒಂದು ಎಂದು ಅಲ್ಲಿನ ಸರ್ಕಾರ ಬಣ್ಣಿಸಿದೆ. ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು (Saudi Islamic Affair Ministry) ತಬ್ಲಿಘಿ ಜಮಾತ್ (Tablighi Jamaat) ಕುರಿತು ಮುಂದಿನ ಶುಕ್ರವಾರದವರೆಗೆ ಈ ಕುರಿತು ಜನರಿಗೆ ಮಾಹಿತಿಯನ್ನು ಒದಗಿಸಲು ಮಸೀದಿಗಳಲ್ಲಿರುವ ಉಪದೇಶಕರಿಗೆ ಆದೇಶ ನೀಡಿದೆ. 

Written by - Nitin Tabib | Last Updated : Dec 11, 2021, 09:13 PM IST
  • ತಬ್ಲಿಘಿ ಜಮಾತ್ ಸಂಘಟನೆಯನ್ನು ನಿಷೇಧಿಸಿದ ಸೌದಿ ಸರ್ಕಾರ.
  • ಸಂಘಟನೆ ಭಯೋತ್ಪಾದನೆಯ ಹೆಬ್ಬಾಗಿಲು ಎಂದು ಬಣ್ಣಿಸಿದ ಅಲ್ಲಿನ ಸರ್ಕಾರ.
  • ಸಂಘಟನೆಯ ಕುರಿತು ಮುಂದಿನ ಶುಕ್ರವಾರದವರೆಗೆ ಜನರಲ್ಲಿ ಅರಿವು ಮೂಡಿಸಲು ಸೂಚನೆ.
Saudi Arabia: ತಬ್ಲಿಘಿ ಜಮಾತ್ ಮೇಲೆ ನಿಷೇಧ ವಿಧಿಸಿದ ಸೌದಿ ಅರೇಬಿಯಾ, ಭಯೋತ್ಪಾದನೆಯ ಹೆಬ್ಬಾಗಿಲು ಎಂದ ಅಲ್ಲಿನ ಸರ್ಕಾರ title=

Tablighi Jamaat Banned - ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಿದೆ. ಈ ಸಂಘಟನೆ ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ (One Of The Gates Of Terrorism) ಒಂದು ಎಂದು ಅಲ್ಲಿನ ಸರ್ಕಾರ ಬಣ್ಣಿಸಿದೆ. ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು (Saudi Islamic Affair Ministry) ತಬ್ಲಿಘಿ ಜಮಾತ್ (Tablighi Jamaat) ಕುರಿತು ಮುಂದಿನ ಶುಕ್ರವಾರದವರೆಗೆ ಈ ಕುರಿತು ಜನರಿಗೆ ಮಾಹಿತಿಯನ್ನು ಒದಗಿಸಲು ಮಸೀದಿಗಳಲ್ಲಿರುವ ಉಪದೇಶಕರಿಗೆ ಆದೇಶ ನೀಡಿದೆ. 

ಈ ಸಂಘಟನೆಯ ದಾರಿತಪ್ಪಿಸುವಿಕೆ, ವಿಚಲನಗೊಳಿಸುವಿಕೆ ಮತ್ತು  ಅಪಾಯಗಳ ಕುರಿತು ತಿಳುವಳಿಕೆ ಮೂಡಿಸಲು ಮಸೀದಿಗಳಿಗೆ ಸರ್ಕಾರ ಕೇಳಿಕೊಂಡಿದೆ. ಇದು ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ ಒಂದಾಗಿದೆ ಎಂದು ಅದು ಹೇಳಿದೆ. ತಬ್ಲೀಘಿ ಜಮಾತ್ ಮಾಡುತ್ತಿರುವ ಪ್ರಮುಖ ತಪ್ಪುಗಳ ಕುರಿತು ಜನರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಈ ಸಂಸ್ಥೆಯಿಂದ ಉಂಟಾಗುವ ಅಪಾಯದ ಬಗ್ಗೆ ಸಮಾಜಕ್ಕೆ ತಿಳಿಸಲು ಸಚಿವಾಲಯವನ್ನು ಕೋರಲಾಗಿದೆ.

ವರದಿಗಳ ಪ್ರಕಾರ, ಭಾರತದಲ್ಲಿ 1926 ರಲ್ಲಿ ರೂಪುಗೊಂಡ ತಬ್ಲಿಘಿ ಜಮಾತ್, ಸುನ್ನಿ ಇಸ್ಲಾಮಿಕ್ ಮಿಷನರಿ (Sunni Islamic Missionary) ಚಳುವಳಿಯಾಗಿದ್ದು, ಇದು ಸುನ್ನಿ ಇಸ್ಲಾಂನ ಶುದ್ಧ ರೂಪಕ್ಕೆ ಮರಳಲು ಮತ್ತು ಧಾರ್ಮಿಕವಾಗಿ ಅನುಸರಿಸುವಂತೆ ಮುಸ್ಲಿಮರಿಗೆ ಮನವಿ ಮಾಡುತ್ತದೆ. ಈ ಸಂಸ್ಥೆಯು ಶುದ್ಧ ಇಸ್ಲಾಮಿಕ್ ಡ್ರೆಸ್ಸಿಂಗ್, ವೈಯಕ್ತಿಕ ನಡವಳಿಕೆ ಮತ್ತು ಆಚರಣೆಗಳನ್ನು ಪ್ರತಿಪಾದಿಸುತ್ತದೆ.

ಇದನ್ನೂ ಓದಿ-New Trouble: ವಿಶ್ವಕ್ಕೆ ಎಂಟ್ರಿ ಕೊಟ್ಟ ಮತ್ತೊಂದು ಅಪಾಯ! ಎರಡು ರೂಪಾಂತರಿಗಳಲ್ಲಿ ವಿಭಜನೆಯಾದ Omicron Variant

ಒಂದು ಅಂದಾಜಿನ ಪ್ರಕಾರ, ವಿಶ್ವಾದ್ಯಂತ ತಬ್ಲಿಘಿ ಜಮಾತ್‌ನ 35-40 ಕೋಟಿ ಸದಸ್ಯರಿದ್ದಾರೆ. ಅವರು ತಮ್ಮ ಕೇಂದ್ರಬಿಂದುವಾಗಿರುವ ಕ್ಷೇತ್ರವನ್ನು ಧರ್ಮ ಎಂದು ಹೇಳಿಕೊಳ್ಳುತ್ತಾರೆ ಮತ್ತು ಅವರು ರಾಜಕೀಯ ಚಟುವಟಿಕೆಗಳನ್ನು ತಪ್ಪಿಸುತ್ತಾರೆ. ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ ತಬ್ಲಿಘಿ ಜಮಾತ್ ಅನ್ನು ಇಸ್ಲಾಮಿಕ್ ಪುನರುಜ್ಜೀವನಗೊಳಿಸುವ ಸಂಘಟನೆ ಎಂದು ಬಣ್ಣಿಸಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಹಲವು ಬಾರಿ ಈ ಸಂಘಟನೆಯ ಹೆಸರು ಕೇಳಿ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ-ಅಫ್ಘಾನಿಸ್ತಾನಕ್ಕೆ 1.6 ಟನ್ ಔಷಧಿಗಳನ್ನು ಕಳುಹಿಸಿದ ಭಾರತ

ಕಳೆದ ವರ್ಷ ಭಾರತದಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆಯ ಸಮಯದಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಸಾಮೂಹಿಕ ಸಭೆಯ ಆಯೋಜನೆಯ ಹಿನ್ನೆಲೆ ಈ ಸಂಘಟನೆಯ ವಿರುದ್ಧ ಅಪಾರ ಟೀಕೆಟ್ಗಳು ಕೇಳಿಬಂದಿದ್ದವು. ಪ್ಯೂ ರಿಸರ್ಚ್ ಸೆಂಟರ್ ಪ್ರಕಾರ, ತಬ್ಲೀಘಿ ಜಮಾತ್ ಪಶ್ಚಿಮ ಯುರೋಪ್, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ಸೇರಿದಂತೆ ವಿಶ್ವದ ಸುಮಾರು 150 ದೇಶಗಳಲ್ಲಿ ಸಕ್ರಿಯವಾಗಿದೆ. ವರದಿಗಳ ಪ್ರಕಾರ, ಈ ಸಂಘಟನೆಯ ಹಲವಾರು ಕೋಟಿ ಸದಸ್ಯರು ದಕ್ಷಿಣ ಏಷ್ಯಾದಂತಹ ದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಇಂಡೋನೇಷ್ಯಾ, ಮಲೇಷ್ಯಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಥೈಲ್ಯಾಂಡ್‌ನಲ್ಲಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ-Hurrican Havoc: ಅಮೇರಿಕಾದಲ್ಲಿ ಬೀಸಿದ ಭೀಕರ ಚಂಡಮಾರುತ, 50 ಹೆಚ್ಚು ಸಾವು, ಹಲವರಿಗೆ ಗಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News