India vs Hong Kong Asia Cup: ಪಾಕಿಸ್ತಾನ ವಿರುದ್ಧ ಜಯ ದಾಖಲಿಸಿದ ನಂತರ ಟೀಂ ಇಂಡಿಯಾದ ಕಣ್ಣು ಹಾಂಕಾಂಗ್ ವಿರುದ್ಧ ಜಯ ದಾಖಲಿಸುವತ್ತ ನೆಟ್ಟಿದೆ. ಹಾಂಕಾಂಗ್ ವಿರುದ್ಧ ಟೀಂ ಇಂಡಿಯಾ ಗೆದ್ದರೆ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಉತ್ತಮ ಆರಂಭವನ್ನು ಪಡೆದಿದ್ದಾರೆ, ಆದ್ದರಿಂದ ಅವರು ಕ್ರೀಸ್ನಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. ಕೊಹ್ಲಿ ಕನಿಷ್ಠ 60 ರಿಂದ 70 ರನ್ ಗಳಿಸಬೇಕಾಗಿತ್ತು,
ಏಷ್ಯಾಕಪ್ 2022 ಟೂರ್ನಿಯ ಹೈ ವೋಲ್ಟೇಜ್ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 5 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಪಾಕಿಸ್ತಾನ ನೀಡಿದ 148 ರನ್ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಭಾರತ ತಂಡ ವಿರಾಟ್ ಕೊಹ್ಲಿ 35 ಹಾಗೂ ಹಾರ್ದಿಕ್ ಪಾಂಡ್ಯಾ ಆಜೇಯ 33 ಆಲ್ರೌಂಡ್ ಪ್ರದರ್ಶನದ ನೆರವಿನಿಂದ 19.5 ಓವರ್ನಲ್ಲಿ 148 ರನ್ ಗಳಿಸಿ 5 ವಿಕೆಟ್ಗಳ ರೋಚಕ ಜಯ ಸಾಧಿಸಿತು.
IND vs PAK Asia Cup 2022: ಬಹು ನಿರೀಕ್ಷಿತ ಏಷ್ಯಾ ಕಪ್ 2022ರ ತನ್ನ ಮೊದಲ ಪಂದ್ಯದಲ್ಲಿ ಭಾರತವು ತನ್ನ ಸಾಂಪ್ರದಾಯಕ ಎದುರಾಳಿ ತಂಡವಾದ ಪಾಕಿಸ್ತಾನವನ್ನು 5 ವಿಕೆಟ್ಗಳಿಂದ ಮಣಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ.
ಭಾರತದ ಅಗ್ರ ಕ್ರಮಾಂಕದಲ್ಲಿ ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಇದ್ದಾರೆ. ಪಂತ್ ಮತ್ತು ಕಾರ್ತಿಕ್ ತಂಡದಲ್ಲಿ ವಿಶೇಷ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಏಷ್ಯಾಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಇಂದು ಪಾಕಿಸ್ತಾನವನ್ನು ಎದುರಿಸಲಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಜೊತೆ ತಮಾಷೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸುದ್ದಿಗೋಷ್ಠಿ ನಡೆಸಿ ತಂಡದ ಪ್ಲೇಯಿಂಗ್ 11 ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೆ, ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳುವ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಭಾರತವು ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನದ ವಿರುದ್ಧ ಹೈ-ವೋಲ್ಟೇಜ್ ಪಂದ್ಯದೊಂದಿಗೆ ಏಷ್ಯಾ ಕಪ್ ಸರಣಿಯನ್ನು ಪ್ರಾರಂಭಿಸಲಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಆಡಿದ್ದವು, ಪಾಕಿಸ್ತಾನವು ಭಾರತವನ್ನು 10 ವಿಕೆಟ್ಗಳಿಂದ ಸೋಲಿಸಿತ್ತು. ಭಾನುವಾರ ನಡೆಯುವ ಬಿಗ್ ಮ್ಯಾಚ್ಗೂ ಮುನ್ನ ಭಾರತದ ಆಟಗಾರರು ನೆಟ್ಸ್ನಲ್ಲಿ ಬೆವರಿಲಿಸುತ್ತಿದ್ದಾರೆ.
8 ವರ್ಷಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಪರಿಚಯಿಸಲಾದ ಏಷ್ಯಾ ಕಪ್ ಟ್ರೋಫಿಗಾಗಿ ಏಷ್ಯಾದ ಅಗ್ರ ಆರು ತಂಡಗಳು ದುಬೈ ಮತ್ತು ಶಾರ್ಜಾದಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ 13 ಪಂದ್ಯಗಳನ್ನು ಆಡಲಿದೆ.
ಭಾರತ ತಂಡ ಆಗಸ್ಟ್ 28 ರಂದು ಏಷ್ಯಾಕಪ್ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಹೀಗಾಗಿ ಎಲ್ಲರ ಕಣ್ಣು ಈ ಪಂದ್ಯದ ಮೇಲಿದೆ. ಪಾಕಿಸ್ತಾನದ ವಿರುದ್ಧದ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಭಾರತದ ವೇಗದ ಬೌಲರ್ ಸ್ಥಾನ ಪಡೆಯುವುದು ಕಷ್ಟಕರವಾಗಿದೆ. ಈ ಆಟಗಾರ ಅತ್ಯಂತ ಕಳಪೆ ಫಾರ್ಮ್ನೊಂದಿಗೆ ಹೋರಾಡುತ್ತಿದ್ದಾರೆ. ಹೀಗಾಗಿ, ನಾಯಕ ರೋಹಿತ್ ಶರ್ಮಾ ಈ ಆಟಗಾರನನ್ನು ಟೀಂನಿಂದ ಹೊರಗಿಡಬಹುದು. ಹಾಗಿದ್ರೆ ಈ ಆಟಗಾರ ಯಾರು? ಇಲ್ಲಿಡಿ ನೋಡಿ..
ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಿಂದ ರೋಹಿತ್ ಶರ್ಮಾ ಅವರ ವೀಡಿಯೊವನ್ನು ಹಂಚಿಕೊಂಡಿದೆ. ಅದರಲ್ಲಿ ಅವರು ಸ್ಕೇಟಿಂಗ್ ಸ್ಕೂಟರ್ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ಇದರೊಂದಿಗೆ ಬಿಸಿಸಿಐ, 'ಅಭ್ಯಾಸದ ನಂತರ ರೋಹಿತ್ ಶರ್ಮಾ ಅವರ ಶೈಲಿಯಲ್ಲಿ ಸ್ವಿಂಗ್ ಮಾಡುತ್ತಿರುವುದು ಕಂಡುಬಂದಿದೆ' ಎಂದು ಬರೆದುಕೊಂಡಿದೆ.
Asia Cup 2022: ಏಷ್ಯಾ ಕಪ್ನಲ್ಲಿ ಭಾರತ vs ಪಾಕಿಸ್ತಾನದ ಪಂದ್ಯ ವೀಕ್ಷಣೆಗಾಗಿ ಇಡೀ ವಿಶ್ವವೇ ಕಾತುರದಿಂದ ಕಾದು ಕುಳಿತಿದೆ. ಭಾರತ ಮತ್ತು ಪಾಕಿಸ್ತಾನದ ಘರ್ಷಣೆಗೆ ಮುಂಚಿತವಾಗಿ ನೆಟ್ಸ್ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ತಯಾರಿಯ ವಿಡಿಯೋ ಒಂದು ಅಂತರ್ಜಾಲದಲ್ಲಿ ಸಖತ್ ಸದ್ದು ಮಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.