Rohit Sharma : ಕ್ಯಾಪ್ಟನ್ ರೋಹಿತ್ ಸೂಚನೆಯಂತೆ ಹೀಗಿದೆ ಟೀಂ ಇಂಡಿಯಾ Playing 11

ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸುದ್ದಿಗೋಷ್ಠಿ ನಡೆಸಿ ತಂಡದ ಪ್ಲೇಯಿಂಗ್ 11 ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೆ, ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳುವ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ.

Written by - Channabasava A Kashinakunti | Last Updated : Aug 27, 2022, 08:54 PM IST
  • ಪ್ಲೇಯಿಂಗ್ 11 ಬಗ್ಗೆ ರೋಹಿತ್ ಹೇಳಿದ್ದು ಹೀಗೆ
  • ದಿನೇಶ್ ಕಾರ್ತಿಕ್ ಆಡುತ್ತಾರೋ ಇಲ್ಲವೋ?
  • ಅಮೋಘ ಫಾರ್ಮ್‌ನಲ್ಲಿದ್ದಾರೆ ವಿರಾಟ್ ಕೊಹ್ಲಿ
Rohit Sharma : ಕ್ಯಾಪ್ಟನ್ ರೋಹಿತ್ ಸೂಚನೆಯಂತೆ ಹೀಗಿದೆ ಟೀಂ ಇಂಡಿಯಾ Playing 11 title=

Rohit Sharma Press Conference : ಏಷ್ಯಾ ಕಪ್ 2022 ಆರಂಭವಾಗಿದೆ. ನಾಳೆ ಅಂದರೆ ಭಾನುವಾರ (ಆ.28) ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಈ ಬಿಗ್ ಮ್ಯಾಚ್‌ಗಾಗಿ ಎರಡೂ ತಂಡಗಳು ಸಂಪೂರ್ಣ ಸಿದ್ಧತೆಯಲ್ಲಿ ತೊಡಗಿವೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸುದ್ದಿಗೋಷ್ಠಿ ನಡೆಸಿ ತಂಡದ ಪ್ಲೇಯಿಂಗ್ 11 ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೆ, ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳುವ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ.

ಪ್ಲೇಯಿಂಗ್ 11 ಬಗ್ಗೆ ರೋಹಿತ್ ಹೇಳಿದ್ದು ಹೀಗೆ

ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ 11 ಬಗ್ಗೆ ರೋಹಿತ್ ಶರ್ಮಾ, 'ನಾವು ಪಿಚ್ ನೋಡಿದ್ದೇವೆ, ಅದರ ಮೇಲೆ ಸಾಕಷ್ಟು ಹುಲ್ಲು ಇದೆ, ಆದ್ದರಿಂದ ಪಂದ್ಯದ ದಿನದಂದು ಪಿಚ್ ಹೇಗಿರುತ್ತದೆ ಎಂಬುದನ್ನು ನಾವು ನೋಡಬೇಕು, ಪ್ಲೇಯಿಂಗ್ -11 ಅದರಂತೆ ನಿರ್ಧರಿಸಲಾಗುತ್ತದೆ. ಇಲ್ಲಿ ಟಾಸ್ ಬಹಳ ಮುಖ್ಯವಾಗಲಿದೆ, ನಾವು ಇಂದಿನ ಪಂದ್ಯವನ್ನು ವೀಕ್ಷಿಸಿ ನಂತರ ಅದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ.

ಇದನ್ನೂ ಓದಿ : Virat Kohli : ಕಳೆದ 10 ವರ್ಷದಲ್ಲಿ ಕೊಹ್ಲಿ ಇದೇ ಮೊದಲ ಬಾರಿಗೆ ಈ ರೀತಿ ಮಾಡಿದ್ದು!

ದಿನೇಶ್ ಕಾರ್ತಿಕ್ ಆಡುತ್ತಾರೋ ಇಲ್ಲವೋ?

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಇತ್ತೀಚಿನ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದು ಹೀಗೆ, 'ದಿನೇಶ್ ಕಾರ್ತಿಕ್ ಅವರ ಯೋಗ್ಯತೆ ನಮಗೆ ಗೊತ್ತಿದೆ. ತಂಡದಿಂದ ಕೈಬಿಡುವ ಮುನ್ನವೂ ಅವರು ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಹಿಂದಿರುಗಿದ ನಂತರ ಅವರು ಪ್ರಭಾವಿತರಾಗಿದ್ದಾರೆ. ಕಾರ್ತಿಕ್ ಆಡುತ್ತಾರೋ ಇಲ್ಲವೋ ಎಂಬುದರ ಬಗ್ಗೆ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ದಿನೇಶ್ ಕಾರ್ತಿಕ್ ಅವರನ್ನು ಐಪಿಎಲ್ 2022 ರಿಂದ ಮ್ಯಾಚ್ ಫಿನಿಶರ್ ಆಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ಈ ಪಂದ್ಯವನ್ನು ಆಡಲು ದೊಡ್ಡ ಸ್ಪರ್ಧಿಯಾಗಿದ್ದಾರೆ ಎಂದರು.

ಅಮೋಘ ಫಾರ್ಮ್‌ನಲ್ಲಿದ್ದಾರೆ ವಿರಾಟ್ ಕೊಹ್ಲಿ 

ಸುದೀರ್ಘ ವಿರಾಮದ ನಂತರ ವಿರಾಟ್ ಕೊಹ್ಲಿ ತಂಡಕ್ಕೆ ಮರಳುತ್ತಿದ್ದಾರೆ. ವಿರಾಟ್ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, 'ವಿರಾಟ್ ಅಭ್ಯಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ತುಂಬಾ ಕಷ್ಟಪಟ್ಟು ಅಭ್ಯಾಸ ಮಾಡುತ್ತಿದ್ದಾರೆ. ಅವರ ಬ್ಯಾಟಿಂಗ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅವರು ಒಂದು ತಿಂಗಳ ನಂತರ ಮರಳುತ್ತಿದ್ದಾರೆ. ಆದ್ದರಿಂದ ಅವರು ಹೆಚ್ಚು ಪ್ರೆಶ್ ಆಗಿ ಕಾಣುತ್ತಿದ್ದಾರೆ. ಒಟ್ಟಿಗೆ ಅಭ್ಯಾಸ ಮಾಡುತ್ತಿದ್ದೇವೆ. ಯಾರು ಯಾರೊಂದಿಗೆ ಅಭ್ಯಾಸ ಮಾಡಬೇಕು ಎಂಬುದನ್ನು ಬ್ಯಾಟಿಂಗ್ ಕೋಚ್ ನಿರ್ಧರಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ : Team India : ಪಾಕ್​ಗೆ ಶತ್ರುವಾಗಿ ಕಾಡಲಿದ್ದಾರೆ ಟೀಂ ಇಂಡಿಯಾದ ಈ 3 ಬ್ಯಾಟ್ಸ್‌ಮನ್‌ಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News