ಕಳೆದ 2 ದಿನಗಳಿಂದ ತನ್ನ ತಂದೆ ಕಾಣುತ್ತಿಲ್ಲವೆಂದು ದಿನೇಶ್ ಮತ್ತು ಪಪ್ಪು ಪ್ರಕಾಶ್ಗೆ ಕರೆ ಮಾಡಿದ್ದಾರೆ. ಪ್ರಕಾಶ್ ತನ್ನ ತಾಯಿಯೊಂದಿಗೆ ಗ್ರಾಮಕ್ಕೆ ಬಂದು ಚುನ್ನಿಲಾಲ್ ಬಳಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಆರಂಭದಲ್ಲಿ ಚುನ್ನಿಲಾಲ್ ತನಗೇನೂ ಗೊತ್ತಿಲ್ಲವೆಂದು ವಾದಿಸಿದ್ದಾನೆ. ನಂತರ ತಾನೇ ತಂದೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಜುಲೈ 11ರಂದು ಮನೆಯಿಂದ ಹೋಗಿದ್ದ ಜೋಗೇಂದ್ರ ನಂತರ ವಾಪಸ್ ಬಂದಿರಲಿಲ್ಲ. ಹೀಗಾಗಿ ಆತಂಕಗೊಂಡ ಅವರ ತಂದೆ, ಮದನ್ ಲಾಲ್ ಮೇಲೆ ಶಂಕೆ ಇರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ‘ನನ್ನ ಮಗನನ್ನು ಹತ್ಯೆ ಮಾಡಲಾಗಿದೆ, ಇದರಲ್ಲಿ ಅನೇಕ ಜನರು ಭಾಗಿಯಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದ್ದರು.
ಇಲ್ಲಿನ ಜೈಸಿಂಗ್ಪುರ ಖೋರ್ ಪ್ರದೇಶದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಅಕ್ರಮ ಜೂಜಾಟದಲ್ಲಿ ತೊಡಗಿದ್ದ 13 ಮಹಿಳೆಯರು ಸೇರಿದಂತೆ 84 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.