Prashant Madal : ಟೆಂಡರ್ ಲಂಚ ಪ್ರಕರಣ ಆರೋಪಿ ಪ್ರಶಾಂತ್ ಮಾಡಾಳ್ರನ್ನು ಮೂರುದಿನಗಳ ಅವಧಿಗೆ ಪೋಲಿಸರ ವಶಕ್ಕೆ ನೀಡಲಾಗಿದೆ. ಲಂಚ ಪಡೆಯುತ್ತಿದ್ದಾಗ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಲೋಕಾಯುಕ್ತರ ಕೈಗೆ ಸಾಕ್ಷಿ ಸಮೇತವಾಗಿ ಸಿಕ್ಕಿಬಿದ್ದರು. ಈ ಲಂಚ ಪ್ರಕರಣ ರಾಜ್ಯದಲ್ಲಿ ಸುನಾಮಿಯನ್ನೇ ಉಂಟುಮಾಡಿದೆ.
ಲೋಕಾಯುಕ್ತ ಅಧಿಕಾರಿಗಳ ತನಿಖೆಗೆ ಸಹಕಾರ ಕೊಡ್ತೀನಿ. ಯಾವಾಗ ಅಧಿಕಾರಿಗಳು ಕರೆದ್ರೂ ವಿಚಾರಣೆಗೆ ಹಾಜರಾಗ್ತೀನಿ ಎಂದು ವಿಚಾರಣೆ ಬಳಿಕ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿಕೆ ನೀಡಿದ್ದಾರೆ.
ಪ್ರಶಾಂತ್ ಮಾಡಾಳ್ ಹೆಸರಿನಲ್ಲಿ ಬೇನಾಮಿ ಆಸ್ತಿಯಿರುವ ಬಗ್ಗೆ ಆರೋಪಿ ಸಿದ್ದೇಶ್ ಮಾಹಿತಿ ನೀಡಿದ್ದು ಇದರ ಬಗ್ಗೆ ತನಿಖೆ ಮಾಡಲು ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಪ್ರಶಾಂತ್ ಮಡಾಳ್, ಸುರೇಂದ್ರ, ಹಾಗೂ ಸಿದ್ದೇಶ್ ಆರೋಪಿಗಳಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.