Karnataka hijab row 2023: ಹಿಜಾಬ್ ಅನ್ನೋದು ನಮ್ಮ ಧರ್ಮ, ಇದನ್ನು ನಾವು ಪಾಲನೆ ಮಾಡಬೇಕಾಗಿದೆ. ಹಿಜಾಬ್ ವಿವಾದದಿಂದ ಅನೇಕ ಹುಡುಗಿಯರು ಶಿಕ್ಷಣದಿಂದ ವಂಚಿತ ಆಗಿದ್ದರು. ಶಿಕ್ಷಣದ ವಿಚಾರದಲ್ಲಿ ರಾಜಕೀಯ ಬೇಡ. ನಾವು ಅಣ್ಣ-ತಮ್ಮಂದಿರ ರೀತಿ ಇದ್ದೇವೆ. ಮುಂದೆಯೂ ಹೀಗೆಯೇ ಇರೋಣವೆಂದು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಹೇಳಿದ್ದಾರೆ.
ಮುಸ್ಕಾನ್ ಮುಗ್ಧ ಹುಡುಗಿ, ಈ ಘಟನೆ ಅತ್ಯಂತ ವಿಷಾಧನೀಯ. ಭಯೋತ್ಪಾದಕ ಸಂಘಟನೆಗಳಿಂದ ಹೆಚ್ಚೇನು ನಿರೀಕ್ಷಿಸಲು ಸಾಧ್ಯ? ಅವರು ಮೂಲಭೂತವಾದಿಗಳಷ್ಟೆ ಅಲ್ಲ, ಮೂಲ ಭಯೋತ್ಪಾದಕರು. ಭಯೋತ್ಪಾದಕರು ಜನರಲ್ಲಿ ಭಯ ಹುಟ್ಟಿಸಲಷ್ಟೆ ಸಾಧ್ಯ, ಈ ನಿಟ್ಟಿನಲ್ಲಿ ಜನರ ಮುಗ್ಧತೆಯನ್ನು ಅಸ್ತ್ರವನ್ನಾಗಿ ಬಳಸುತ್ತಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಮಂಡ್ಯದ ಮುಸ್ಕಾನ್ ಹೇಳಿಕೆಗೆ ಅಲ್ ಖೈದಾ ಬೆಂಬಲ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ ಹಿಜಾಬ್ ವಿವಾದಕ್ಕೆ ಇದೀಗ ಅಲ್ ಖೈದಾ ಎಂಟ್ರಿಯಾಗಿದೆ. ಭಯೋತ್ಪಾದಕ ಸಂಘಟನೆಯ ನಾಯಕ ಅಯ್ಮಾನ್ ಅಲ್ ಜವಾಹಿರಿ (Ayman Al Zawahiri), ಹಿಜಾಬ್ ನಿಷೇಧದ ವಿರುದ್ಧ ಧ್ವನಿ ಎತ್ತುವಂತೆ ಭಾರತೀಯ ಮುಸ್ಲಿಮರಿಗೆ ಕರೆ ನೀಡಿದ್ದಾನೆ.
Hijab Row: ಹಿಜಾಬ್ ಪ್ರಕರಣದಲ್ಲಿ 'ಅಲ್ಲಾಹು ಅಕ್ಬರ್' ಘೋಷಣೆ ಕೂಗುವ ಮೂಲಕ ಹಿಜಾಬ್ ಐಕಾನ್ ಆಗಿದ್ದ ಮುಸ್ಕಾನ್ (Muskan), ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ (PES College Mandya) ಇಂದು ಆರಂಭಗೊಂಡ ಪರೀಕ್ಷೆಗೆ ಗೈರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.