ಪೋಕ್ಸೋ ಕಾಯ್ದೆಯಡಿ ಬಂಧನವಾಗಿರುವ ಮುರುಘಾ ಶ್ರೀಗಳನ್ನ ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮತ್ತೆ 9 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ನೀಡಿದೆ.. ಸದ್ಯಕ್ಕಿಲ್ಲ ಸ್ವಾಮೀಜಿಗೆ ರಿಲೀಫ್ ಇಲ್ಲದಂತೆ ಆಗಿದೆ.
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರ ಪುರುಷತ್ವ ಪರೀಕ್ಷೆ ಯಶಸ್ವಿಯಾಗಿದೆ. ಇದೇ ಮೊದಲ ಬಾರಿ ಆರೋಪಿಗಳಾಗಿ ಅವರನ್ನ ನಿನ್ನೆ ಮುರುಘಾ ಮಠಕ್ಕೆ ಕರೆತಂದು ಇಂಚಿಂಚು ಮಹಜರು ಮಾಡಲಾಯಿತು. ಪೊಲೀಸರ ಕಾರ್ಯದ ನಡುವೆ ಇಡೀ ಮಠ ಖಾಲಿ ಖಾಲಿಯಾಗಿತ್ತು. ಮಠದೊಳಗೆ ನೀರವ ಮೌನ ಮನೆ ಮಾಡಿತ್ತು. ಹಾಗಿದ್ರೆ ನಿನ್ನೆ ನಡೆದ ಮಹಜರು ಪ್ರಕ್ರಿಯೆ ಹೇಗಿತ್ತು ಅನ್ನೋದರ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಚಿತ್ರದುರ್ಗದ ಮುರುಘಾ ಶರಣರ ಪೋಕ್ಸೋ ಪ್ರಕರಣ. ಇಂದಿಗೆ ಶಿವಮೂರ್ತಿ ಶರಣರ ಪೊಲೀಸ್ ಕಸ್ಟಡಿ ಮುಕ್ತಾಯ. ಪೊಲೀಸ್ ಕಸ್ಟಡಿ ಮುಂದುವರೆಸಲು ಕೋರ್ಟ್ಗೆ ಮನವಿ ಸಾಧ್ಯತೆ. ಮತ್ತೆ ಕಸ್ಟಡಿಗೆ ಕೇಳಿ ಪೊಲೀಸ್ ಅಧಿಕಾರಿಗಳಿಂದ ಮನವಿ ಸಾಧ್ಯತೆ. ಪೊಲೀಸ್ ಕಸ್ಟಡಿಗೆ ಕೋರ್ಟ್ ನೀಡದಿದ್ದರೆ ನ್ಯಾಯಾಂಗ ಬಂಧನ.
ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ... ಪೋಕ್ಸೋ ಕೇಸ್ ಅಡಿ ಚಿತ್ರದುರ್ಗದಲ್ಲಿ ಮುರುಘಾಶ್ರೀ ಬಂಧನ ಮಾಡಲಾಗಿದೆ.. ಶ್ರೀಗಳ ಮೇಲಿನ ಪೋಕ್ಸೋ ಕೇಸ್ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಕೇಸ್ ದಾಖಲಾಗಿ 7 ದಿನಗಳ ಬಳಿಕ ಮುರುಘಾಶ್ರೀ ಬಂಧನ ಬಂಧನವಾಗಿದೆ.
ಚಿತ್ರದುರ್ಗದ ಮಠದ ಮುರುಘಾಶರಣರ ವಿರುದ್ಧ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣದ ವಿಚಾರವಾಗಿ ತನಿಖೆ ನಡೆಸಿರುವ ಪೊಲೀಸರು ಮುರುಘಾ ಮಠದ ಆವರಣದಲ್ಲಿ ಇಂದು ಸುಮಾರು ನಾಲ್ಕು ತಾಸುಗಳ ಕಾಲ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಬಾಲಕಿಯರ ಮೇಲೆ ಮುರುಘಾ ಶ್ರೀಗಳ ಲೈಂಗಿಕ ಕಿರುಕುಳ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಶ್ರೀಗಳ ವಿರುದ್ಧ ಎಫ್ಐಆರ್ ಆಗಲ್ಲಾ, ಆದರೆ ನೋಡೋಣ ಎಂದು ಹೇಳಿದ್ದಾರೆ.
ಚಿತ್ರದುರ್ಗದ ಮುರುಘಾಮಠದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬುಧವಾರ ಲಿಂಗಧಾರಣೆ ಮಾಡಿದರು. ಮುರುಘಾಮಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರಿಗೆ ಲಿಂಗಧಾರಣೆ ಮಾಡಿ, ವಿಭೂತಿ ಹಚ್ಚಿದ ಮುರುಘಾಶ್ರೀಗಳು ಉಪದೇಶ ಮಾಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.