Rahul Gandhi: ಲಿಂಗಧಾರಣೆ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

Rahul Gandhi visits Murugha Mutt : ಚಿತ್ರದುರ್ಗದ ಮುರುಘಾಮಠದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬುಧವಾರ ಲಿಂಗಧಾರಣೆ ಮಾಡಿದರು. 

Rahul Gandhi visits Murugha Mutt : ಚಿತ್ರದುರ್ಗದ ಮುರುಘಾಮಠದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬುಧವಾರ ಲಿಂಗಧಾರಣೆ ಮಾಡಿದರು. ಮುರುಘಾಮಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರಿಗೆ ಲಿಂಗಧಾರಣೆ ಮಾಡಿ, ವಿಭೂತಿ ಹಚ್ಚಿದ ಮುರುಘಾಶ್ರೀಗಳು ಉಪದೇಶ ಮಾಡಿದರು. ಮುರುಘಾ ಮಠಕ್ಕೆ ಭೇಟಿ‌ ನೀಡಿದ್ದ ವೇಳೆ, ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ರಾಹುಲ್‌ ಗಾಂಧಿ ಅವರಿಗೆ ಲಿಂಗಧಾರಣೆ ಮಾಡಿಸಿ ಲಿಂಗದ ಬಗ್ಗೆ ಅರಿವು ಮೂಡಿಸಿದರು. ಶ್ರೀಮಠಕ್ಕೆ ಆಗಮಿಸುತ್ತಲೇ ಕರ್ತೃ ಗದ್ದುಗೆಗೆ ಭೇಟಿ ನೀಡಿದ ರಾಹುಲ್ ಗಾಂಧಿ, ಮಠದ ಕರ್ತೃ ಶ್ರೀ ಮುರಿಗಿ ಶಾಂತವೀರ ಸ್ವಾಮೀಜಿ ಗದ್ದುಗೆಗೆ ಪುಷ್ಪಾರ್ಚನೆ ಮಾಡಿ ಕೆಲಕಾಲ ಧ್ಯಾನ ಮಾಡಿದರು.

1 /4

ಮುರುಘಾ ಮಠಕ್ಕೆ ಭೇಟಿ‌ ನೀಡಿದ್ದ ವೇಳೆ, ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ರಾಹುಲ್‌ ಗಾಂಧಿ ಅವರಿಗೆ ಲಿಂಗಧಾರಣೆ ಮಾಡಿಸಿ ಲಿಂಗದ ಬಗ್ಗೆ ಅರಿವು ಮೂಡಿಸಿದರು. ಶ್ರೀಮಠಕ್ಕೆ ಆಗಮಿಸುತ್ತಲೇ ಕರ್ತೃ ಗದ್ದುಗೆಗೆ ಭೇಟಿ ನೀಡಿದ ರಾಹುಲ್ ಗಾಂಧಿ, ಮಠದ ಕರ್ತೃ ಶ್ರೀ ಮುರಿಗಿ ಶಾಂತವೀರ ಸ್ವಾಮೀಜಿ ಗದ್ದುಗೆಗೆ ಪುಷ್ಪಾರ್ಚನೆ ಮಾಡಿ ಕೆಲಕಾಲ ಧ್ಯಾನ ಮಾಡಿದರು.

2 /4

3 /4

ಮುರುಘಾಮಠಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರು ಮೊದಲಿಗೆ ಬಸವಣ್ಣನವರ ಭಾವಚಿತ್ರಕ್ಕೆ ಹಾರ ಹಾಕಿ ನಮಸ್ಕರಿಸಿದರು. ನಂತರ ಮಠಾಧೀಶರೊಂದಿಗೆ ಕೆಲಕಾಲ ಸಂವಾದ ನಡೆಸಿದರು. ಬಳಿಕ ರಾಹುಲ್‌ ಗಾಂಧಿ ಅವರಿಗೆ ಲಿಂಗಧಾರಣೆ ಮಾಡಿ, ವಿಭೂತಿ ಹಚ್ಚಿ, ಲಿಂಗ ಪೂಜೆ ತತ್ವದ ಉಪದೇಶ ಮಾಡಿದರು. ಲಿಂಗ ಪೂಜೆ ಪಾಲಿಸುವುದಾಗಿ ರಾಹುಲ್ ಗಾಂಧಿ ತಿಳಿಸಿದರು.

4 /4

ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀಗಳು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಠಾಧೀಶರು ರಾಹುಲ್ ಗಾಂಧಿ ಅವರ ಜೊತೆ ಸಂವಾದದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಂದೀಪ್ ಸಿಂಗ್ ಸುರ್ಜೆವಾಲಾ, ಕೆ. ಸಿ. ವೇಣುಗೋಪಾಲ್, ಸಲೀಂ ಅಹಮದ್ ಸೇರಿ ಕಾಂಗ್ರೆಸ್‌ ನಾಯಕರು ಸಾಥ್‌ ನೀಡಿದ್ದರು.