ಇದೀಗ ಹೊರಬಂದಿರುವ ಚಿತ್ರಗಳಲ್ಲಿ ಮೆಹುಲ್ ಚೋಕ್ಸಿ (Mehul Choksi) ಲಾಕಪ್ ನಂತೆ ಕಾಣುವ ಕಂಬಿಗಳ ಹಿಂದೆ ಇರುವುದು ಕಂಡುಬರುತ್ತದೆ. ಅವರ ಕೈಯಲ್ಲಿ ಗಾಯದ ಗುರುತುಗಳಿರುವುದು ಕೂಡಾ ಕಂಡುಬಂದಿದೆ. ಅಲ್ಲದೆ, ಎಡ ಕಣ್ಣು ಕೂಡ ಕೆಂಪಾಗಿರುವುದು ಕಾಣಿಸುತ್ತದೆ.
ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಕೆರಿಬಿಯನ್ ದೇಶವಾದ ಡೊಮಿನಿಕಾದಲ್ಲಿ ಪತ್ತೆಯಾಗಿದ್ದಾರೆ. ಚೋಕ್ಸಿ ಅವರು 14000 ಕೋಟಿ ರೂ ಪಿಎನ್ಬಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ 2018 ರಲ್ಲಿ ಆಂಟಿಗುವಾಕ್ಕೆ ಪಲಾಯನ ಮಾಡಿದ್ದರು, ಅಲ್ಲಿಂದ ಕಳೆದ ಕೆಲವು ದಿನಗಳಲ್ಲಿ ಅವರು ಕಾಣೆಯಾಗಿದ್ದರು.
Nirav Modi Extradition To India - ಬ್ಯಾಂಕ್ ಗಳಿಗೆ ವಂಚನೆ ಎಸಗಿ ದೇಶ ಬಿಟ್ಟು ಪಲಾಯನಗೈದ ವಜ್ರ ವ್ಯಾಪಾರಿ ನಿರವ್ ಮೋದಿ ಅವನನ್ನು ಭಾರತಕ್ಕೆ ಕರೆತರುವ ದಾರಿ ಇದೀಗ ಸುಗಮವಾದಂತಾಗಿದೆ.
PNB Scam - ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ಗೆ ಪಂಗನಾಮ ಹಾಕಿ ವಿದೇಶಗಳಲ್ಲಿ ತಲೆ ಮರೆಸಿಕೊಂಡಿರುವ ನೀರವ್ ಮೋದಿ (Nirav Modi) ಅರ್ಜಿಯನ್ನು ತಿರಸ್ಕರಿಸಿರುವ ಲಂಡನ್ ನ್ಯಾಯಾಲಯ, ಆತನನ್ನು ಭಾರತಕ್ಕೆ ಹಸ್ತಾಂತರಿಸಲು (Extradition) ಒಪ್ಪಿಗೆ ನೀಡಿದೆ. ಆದರೆ, ನ್ಯಾಯಾಲಯದ ಈ ತೀರ್ಪಿನಿಂದ ನಿರವ್ ಮೋದಿ ಮುಂದಿರುವ ಎಲ್ಲ ಆಯ್ಕೆಗಳು ಮುಗಿದಿವೆ ಎಂಬರ್ಥವಲ್ಲ. ಭಾರತಕ್ಕೆ ನಿರವ್ ಮೋದಿಯನ್ನು ವಾಪಸ್ ತರುವ ದಾರಿಯಲ್ಲಿ ಹಲವು ಪೇಚುಗಳಿವೆ.
1,350 ಕೋಟಿ ರೂ.ಗಳ ಮೌಲ್ಯದ 2,300 ಕೆಜಿ ಪಾಲಿಶ್ ವಜ್ರಗಳು, ಮುತ್ತುಗಳು ಮತ್ತು ಆಭರಣಗಳನ್ನು ತನಿಖೆ ನಡೆಸುತ್ತಿರುವಾಗ ವಂಚನೆ-ಆಭರಣ ವ್ಯಾಪಾರಿಗಳಾದ ನೀರವ್ ಮೋದಿ( Nirav Modi )ಮತ್ತು ಮೆಹುಲ್ ಚೋಕ್ಸಿ ದುಬೈಗೆ ರವಾನಿಸಿದ್ದರು.ಈಗ ಅವುಗಳನ್ನು ಜಾರಿ ನಿರ್ದೇಶನಾಲಯವು ಭಾರತಕ್ಕೆ ಮರಳಿ ತಂದಿದೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಲೋಕಸಭೆಯಲ್ಲಿ ಮಾತನಾಡುತ್ತಾ, ವಿಜಯ್ ಮಲ್ಯ, ನಿರಾವ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ 31 ಉದ್ಯಮಿಗಳು ಸಿಬಿಐ ಸಂಬಂಧಿಸಿದ ವಿಷಯಗಳಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.