ʼಮೋದಿ, ಅಮಿಶ್‌ ಶಾ ಟಕ್ಕರ್‌ ನಮ್ಮತ್ರ ನಡೆಯೊಲ್ಲ.. ಏನಾಗುತ್ತೋ ನೋಡೊಣ.ʼ

ಮೋದಿಯವರ ಟಕ್ಕರ್ ಆಗಲಿ, ಅಮಿತ್ ಶಾ ಟಕ್ಕರ್ ಆಗಲಿ ನಮ್ಮತ್ರ ನಡೆಯೊಲ್ಲ. ಕರ್ನಾಟಕದ ಜನ ಬುದ್ದಿವಂತರಿದ್ದಾರೆ. ರಾಮನಗರ ಜಿಲ್ಲೆಯ ಜನ ಎಲ್ಲರನ್ನೂ ನೋಡಿದ್ದಾರೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಬಿಜೆಪಿ ಹೈಕಮಾಂಡ್ ಮಾಜಿ ಡಿಸಿಎಂ ಆರ್.ಅಶೋಕ್ ರನ್ನ ಕನಕಪುರ ಅಭ್ಯರ್ಥಿ ಮಾಡಿದೆ. ಏನಾಗುತ್ತೋ ನೋಡೊಣ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದ್ದಾರೆ.

Written by - Krishna N K | Last Updated : Apr 12, 2023, 04:30 PM IST
  • ಕನಕಪುರದಿಂದ ಸಚಿವ ಆರ್.ಅಶೋಕ್ ಸ್ಪರ್ಧೆ.
  • ಬಿಜೆಪಿ ಹೈಕಮಾಂಡ್ ಮಾಜಿ ಡಿಸಿಎಂ ಆರ್.ಅಶೋಕ್ ರನ್ನ ಕನಕಪುರ ಅಭ್ಯರ್ಥಿ ಮಾಡಿದೆ.
  • ಏನಾಗುತ್ತೋ ಕಾಯ್ದು ನೋಡೊಣ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದ್ದಾರೆ.
ʼಮೋದಿ, ಅಮಿಶ್‌ ಶಾ ಟಕ್ಕರ್‌ ನಮ್ಮತ್ರ ನಡೆಯೊಲ್ಲ.. ಏನಾಗುತ್ತೋ ನೋಡೊಣ.ʼ title=

ರಾಮನಗರ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಬಿಜೆಪಿ ಹೈಕಮಾಂಡ್ ಮಾಜಿ ಡಿಸಿಎಂ ಆರ್.ಅಶೋಕ್ ರನ್ನ ಕನಕಪುರ ಅಭ್ಯರ್ಥಿ ಮಾಡಿದೆ. ಅವರ ಪಕ್ಷದ ಆದೇಶದ ಮೇರೆಗೆ ಅವರು ಸ್ಪರ್ಧೆ ಮಾಡ್ತಿರಬಹುದು. ಏನಾಗುತ್ತೋ ನೋಡೊಣ ಎಂದು ಕನಕಪುರದಿಂದ ಆರ್‌. ಅಶೋಕ್‌ ಸ್ಪರ್ಧೆ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್‌ ಪ್ರತಿಕ್ರಿಯೆ ನೀಡಿದರು.

ನಗರದಲ್ಲಿ ಮಾತನಾಡಿದ ಅವರು, ಕನಕಪುರ ಬಿಜೆಪಿಯಿಂದ ಸಚಿವ ಆರ್.ಅಶೋಕ್ ಗೆ ಬಿಜೆಪಿ ಟಿಕೆಟ್ ಹಿನ್ನಲೆ ಪ್ರತಿಕ್ರಿಯೆ ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಬಿಜೆಪಿ ಹೈಕಮಾಂಡ್ ಮಾಜಿ ಡಿಸಿಎಂ ಆರ್.ಅಶೋಕ್ ರನ್ನ ಕನಕಪುರ ಅಭ್ಯರ್ಥಿ ಮಾಡಿದೆ. ಅವರ ಪಕ್ಷದ ಆದೇಶದ ಮೇರೆಗೆ ಅವರು ಸ್ಪರ್ಧೆ ಮಾಡ್ತಿರ ಬಹುದು. ಏನಾಗುತ್ತೋ ನೋಡೊಣ ಎಂದರು.

ಇದನ್ನೂ ಓದಿ:

ಅಲ್ಲದೆ, ಮೋದಿಯವರ ಟಕ್ಕರ್ ಆಗಲಿ, ಅಮಿತ್ ಶಾ ಟಕ್ಕರ್ ಆಗಲಿ ನಮ್ಮತ್ರ ನಡೆಯೊಲ್ಲ. ಕರ್ನಾಟಕದ ಜನ ಬುದ್ದಿವಂತರಿದ್ದಾರೆ. ರಾಮನಗರ ಜಿಲ್ಲೆಯ ಜನ ಎಲ್ಲರನ್ನೂ ನೋಡಿದ್ದಾರೆ. ಇಂಥಾ ಮಹಾನ್ ನಾಯರನ್ನು ನಾವೂ ಸಹ ನೋಡಿದ್ದೇವೆ. ಇದು ಕನಕಪುರಕ್ಕೆ ಹೊಸದಲ್ಲ. ಮೇ.10ರಂದು ಜನತೆ ಇದಕ್ಕೆ ಉತ್ತರ ನೀಡ್ತಾರೆ. ರಾಜಕೀಯ ರಣರಂಗದ ಚದುರಂಗದ ಆಟ ನಡಿತಿದೆ. ಏನಾಗುತ್ತೋ ಕಾದುನೋಡೊಣ. ಜನ ನಮ್ಮ ಪಕ್ಷದ ತತ್ವ ಸಿದ್ದಾಂತ ಒಪ್ಪಿದ್ದಾರೆ. ರಾಜ್ಯದ ಜನ ಭ್ರಷ್ಟಾಚಾರದಿಂದ ನೊಂದಿದ್ದಾರೆ. ಬಿಜೆಪಿಗೆ ಭಯ ಪ್ರಾರಂಭ ಆಗಿದೆ. ಹಾಗಾಗಿ ಈ ರೀತಿಯ ಅಭ್ಯರ್ಥಿಗಳ ಹಾಕಿದ್ದಾರೆ ಎಂದು ಹೇಳಿದರು.

 

Trending News