OTT Release: ಈ ವಾರ ಒಟಿಟಿಯಲ್ಲಿ ದಕ್ಷಿಣ ಭಾರತದ ಹಲವು ಸಿನಿಮಾಗಳು ರಿಲೀಸ್ ಆಗಲಿವೆ. ಹಾಗೇ ಇಂಗ್ಲಿಷ್, ಬೆಂಗಾಲಿ ಸೇರಿದಂತೆ ಇನ್ನಿತರ ಭಾಷೆಗಳ ಸಿನಿಮಾ ಮತ್ತು ವೆಬ್ ಸಿರೀಸ್ಗಳು ಸಹ ಬಿಡುಗಡೆಯಾಗಲಿವೆ.
ಹೈದರಾಬಾದ್ನಲ್ಲಿ ಕೆಜಿಎಫ್ 2 ಸಿನಿಮಾವನ್ನು ಎರಡು ದಿನಗಳಲ್ಲಿ ಮೂರು ಬಾರಿ ನೋಡಿದ 15 ವರ್ಷದ ಯುವಕನೊಬ್ಬ ಸಿನಿಮಾದಲ್ಲಿರುವ ರಾಕಿ ಭಾಯ್ ಪಾತ್ರದಿಂದ ಪ್ರೇರಣೆ ಪಡೆದು ಫುಲ್ ಪ್ಯಾಕ್ ಸಿಗರೇಟ್ ಸೇದಿದ್ದಾನೆ.
KGF Chapter 2: ಸಿನಿಮಾ ರಿಲೀಸ್ ಆಗಿ 43 ದಿನಗಳು ಕಳೆದಿದ್ದು, ಚಿತ್ರಮಂದಿರದಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಕೆಜಿಎಫ್ 2 ಸಿನಿಮಾ ಮತ್ತೊಂದು ದಾಖಲೆಯನ್ನು ಬರೆದಿದೆ.
ಬಸ್ ಡ್ರೈವರ್ ರೊಬ್ಬನ ಮಗನಾಗಿ ಸಾಮಾನ್ಯ ಕುಟುಂಬದಿಂದ ಬಂದಂತಹ ಯಶ್ ಈಗ ದೇಶಾದ್ಯಂತ ರಾಕಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.ಆದರೆ ಅವರ ಸಿನಿ ಜರ್ನಿ ಮಾತ್ರ ಅಷ್ಟು ಸಲಿಸಾಗಿರಲಿಲ್ಲ, ಆರಂಭದಲ್ಲಿ ರಂಗಭೂಮಿಯಲ್ಲಿ ಬ್ಯಾಕ್ ಗ್ರೌಂಡ್ ಕೆಲಸ ಮಾಡುತ್ತಲೇ ಕಿರುತೆರೆಗೆ ಪ್ರವೇಶಿಸಿ ಮುಂದೆ ಬೆಳ್ಳಿ ತೆರೆಯಲ್ಲಿಯೂ ಕೂಡ ಸೈ ಎನಿಸಿಕೊಂಡವರು.
ಕೆಜಿಎಫ್ 2 ಚಿತ್ರವು ಬಿಡುಗಡೆಯಾದಾಗಿನಿಂದ ಹೊಸ ದಾಖಲೆಗಳನ್ನು ನಿರ್ಮಿಸುತ್ತಲೇ ಇದೆ, ಚಿತ್ರ ಬಿಡುಗಡೆಯಾಗಿ ಐದು ವಾರಗಳು ಕಳೆದರೂ ಕೂಡ ಅದರ ಯಶಸ್ವಿಯಾನ ಮಾತ್ರ ಇನ್ನೂ ನಿಂತಿಲ್ಲ,ಈಗ ಹಿಂದಿಯೊಂದರಲ್ಲೇ ಕೆಜಿಎಫ್ ಚಿತ್ರವು 430 ಕೋಟಿ ಗಳಿಸುವ ಮೂಲಕ ಈ ಸಾಧನೆ ಮಾಡಿದ ಎರಡನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಾಮಾನ್ಯವಾಗಿ ನಟರ ಮಧ್ಯೆ ಬಾಂಧವ್ಯ ಚೆನ್ನಾಗಿದ್ದರೂ ಸಹಿತ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟಾರ್ ವಾರ್ ಗಳನ್ನು ಮಾಡುತ್ತಿರುತ್ತಾರೆ.ಕೆಜಿಎಫ್ 2 ಚಿತ್ರ ಬಿಡುಗಡೆಯಾದಾಗಿನಿಂದಲೂ ಕಿಚ್ಚ ಸುದೀಪ್ ಅವರು ಈ ಚಿತ್ರದ ವಿಚಾರವಾಗಿ ಟ್ವೀಟ್ ಮಾಡಿಲ್ಲ ಎಂದು ಅಭಿಮಾನಿಗಳು ದೂರುತ್ತಿದ್ದರು.
Toofan Video Song: ಒಂದಿಲ್ಲೊಂದು ದಾಖಲೆಗಳನ್ನು ಮಾಡುತ್ತಾ ಮುನ್ನುಗ್ಗುತ್ತಿರುವ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಕಳೆದರೂ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹವಾ ಸ್ವಲ್ಪವೂ ಕಡಿಮೆಯಾಗಿಲ್ಲ. ಇದೀಗ ಕೆಜಿಎಫ್ 2 ಚಿತ್ರದ ತೂಫಾನ್ ಹಾಡಿನ ವಿಡಿಯೋ ಸಾಂಗ್ ರಿಲೀಸ್ ಆಗಿದೆ.
'ಕೆಜಿಎಫ್-2' ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಯಾಕಂದ್ರೆ ಬಾಕ್ಸ್ ಆಫಿಸ್ನಲ್ಲಿ 'ಕೆಜಿಎಫ್' ಚಾಪ್ಟರ್ 2 ಮಾಡಿರುವ ಸಾಧನೆಯೇ ಅಂತಹದ್ದು.'ಕೆಜಿಎಫ್-2' ರಿಲೀಸ್ ಆದ ದಿನದಿಂದ ಇಲ್ಲಿಯವರೆಗೂ ನೂರಾರು ದಾಖಲೆಗಳನ್ನ ಪುಡಿ ಪುಡಿ ಮಾಡಿದೆ. ಅದರಲ್ಲೂ ಬಾಲಿವುಡ್ನ ಹಲವು ಹಳೆಯ ಸಿನಿಮಾಗಳು ರಾಕಿಭಾಯ್ ಆರ್ಭಟದ ಎದುರು ಧೂಳ್ ಆಗಿವೆ.ಇದೇ ಸಂದರ್ಭದಲ್ಲಿ 'ಕೆಜಿಎಫ್-2' ಮತ್ತೊಂದು ರೆಕಾರ್ಡ್ ಕ್ರಿಯೇಟ್ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.