Kavyashree Gowda : ಬಿಗ್ ಬಾಸ್ ಸ್ಪರ್ಧಿ ಕಾವ್ಯಶ್ರೀ ಗೌಡ ಅವರ ತಂದೆ-ತಾಯಿ ತಮ್ಮ ಮಗಳು ವರದಿಗಾರತಿ ಆಗಬೇಕು ಅಂತಾ ಕನಸು ಕಂಡಿದ್ರು. ಆದ್ರೆ ಕಾವ್ಯಶ್ರೀ ಕಾಲಿಟ್ಟಿದ್ದು ನಟನಾ ಕ್ಷೇತ್ರಕ್ಕೆ..ಬಿಗ್ ಬಾಸ್ ಸೀಸನ್ 9 ಎಂಡ್ ಆದ ನಂತರ ಸಿನಿಮಾಗೆ ಎಂಟ್ರಿ ಕೊಡ್ತಾರೆ ಎಂಬ ಗಾಸಿಪ್ ಕೇಳಿ ಬರ್ತಾ ಇದೆ. ಹೌದು ಕಿರುತೆರೆಯಲ್ಲಿ ಮೋಡಿ ಮಾಡಿರುವ ಈ ಚೆಲುವೆ ಸಿನಿಮಾಗಳಲ್ಲು ಕಾಣಿಸಿಕೊಳ್ತಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳದ್ದು.
ಸ್ಯಾಂಡಲ್ವುಡ್ ಕ್ಯೂಟ್ ಹುಡುಗಿ ಹರಿಪ್ರಿಯಾ ಮದುವೆಯಂತೆ. ನಟ ವಸಿಷ್ಠ ಸಿಂಹ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಮದುವೆಗಾಗಿಯೇ ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಬಿಗ್ಬಾಸ್ ಮನೆಯಲ್ಲಿ ಪ್ರೇಮ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಲವ್ ಬರ್ಡ್ಸ್ ಮನೆಯಂಗಳದಲ್ಲಿ ಜೋಡಿ ಜೋಡಿಯಾಗಿ ತಿರುಗಾಡುತ್ತಿದ್ದಾರೆ. ಆದ್ರೆ ಕಾವ್ಯಶ್ರೀ ಗೌಡ ಪಾಪ ಸಿಂಗಲ್ ಆಗಿದ್ದಾರೆ ಅಂತೆ. ಅದಕ್ಕೆ ಇವತ್ತು ಮನೆಯಲ್ಲಿ ಗೋಳೋ ಅಂತಿದ್ರು.
ಬಿಗ್ಬಾಸ್ ಮನೆ ಮಂದಿಯ ಮನದಾಳದ ಮಾತುಗಳು ಒಂದೊಂದಾಗಿ ಹೊರಗೆ ಬರುತ್ತಿದೆ. ತಮ್ಮ ಮನಸ್ಸಿನಲ್ಲಿ ನಿಗೂಢವಾಗಿಟ್ಟಿದ್ದ ಗುಟ್ಟುಗಳನ್ನು ರಟ್ಟು ಮಾಡುತ್ತಿದ್ದಾರೆ. ಸದ್ಯ ಕಾವ್ಯಾಶ್ರೀ ಗೌಡ ತಮ್ಮ ಪ್ರೇಮ ಪುರಾಣದ ಬಗ್ಗೆ ಬಾಯ್ಬಿಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.