ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಕುರಿತು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷಗಳ ಸಭೆ ಭಾನುವಾರ ಸಂಜೆ ಜರುಗಿತು.
ಕಾವೇರಿ ನೀರಿಗಾಗಿ ರಾಜ್ಯದಲ್ಲಿ ಮುಂದುವರೆದ ಆಕ್ರೋಶದ ಮಹಾಜ್ವಾಲೆ... ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಕರೆ... ವಿಧಾನಸೌಧ ಮುತ್ತಿಗೆ ಹಾಕಲಿರುವ ವಾಟಾಳ್ ನಾಗರಾಜ್ ಟೀಂ
ತಮಿಳುನಾಡಿಗೆ ನೀರು ಬಿಡುಗಡೆ ಬಗ್ಗೆ ಪರಿಷ್ಕರಣೆ ಮನವಿ.. ದೆಹಲಿಯ CWRC ಕಚೇರಿಯಲ್ಲಿ ನಿಗಧಿಯಾಗಿರುವ ಮಹತ್ವದ ಸಭೆ.. ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾವೇರಿ ನಿಯಂತ್ರಣ ಸಮಿತಿ ಸಭೆ.. ಕೇರಳ, ತಮಿಳುನಾಡು, ಕರ್ನಾಟಕ, ಪುದುಚೇರಿ ಅಧಿಕಾರಿಗಳು ಭಾಗಿ.. ರಾಜ್ಯದಲ್ಲಿ ನೀರಿನ ಕೊರತೆ ಕುರಿತು ಅಧಿಕಾರಿಗಳು ಮತ್ತೊಮ್ಮೆ ಸಭೆ
ರಾಜ್ಯದಾದ್ಯಂತ ಕಾವೇರಿ ಕಾವು ಹೆಚ್ಚಾಗುತ್ತಿದೆ. ಜನರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಗ್ಗಟ್ಟು ಪ್ರದರ್ಶನಕ್ಕಾಗಿ ಈ ಹೋರಾಟ. ಪ್ರತಿಭಟನೆ, ಬಂದ್ ಗೆ ದೊಡ್ಡ ಶಕ್ತಿ ಇದೆ. ನಾನು ಯಾವುದೇ ಪಕ್ಷದ ಪರ, ವಿರೋಧವಾಗಿ ಬಂದಿಲ್ಲ. ಒಬ್ಬ ಕನ್ನಡತಿಯಾಗಿ ಬಂದಿರುವೆ ಎಂದು ನಟಿ ಶ್ರುತಿ ಹೇಳಿದರು.
ಕಾವೇರಿ ಕೊಳ್ಳ ಮತ್ತು ಬೆಂಗಳೂರು ನಗರದ ಜನರ ಕತ್ತು ಹಿಚುಕುವುದಕ್ಕೆಂದೇ ರಾಜ್ಯ ಕಾಂಗ್ರೆಸ್ ಸರಕಾರ ಬಂದಿದೆಯೇನೋ ಎಂದು ಬಹಳ ನೋವಿನಿಂದ ಹೇಳಲೇಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.