Karnataka Rain: ಬೆಂಗಳೂರು ನಗರದಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣವಿರಲಿದ್ದು, ಲಘು ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿಗ್ರಿ ದಾಖಲಾಗಲಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.
ನೈಋತ್ಯ ಮುಂಗಾರು ಶನಿವಾರ ಮಧ್ಯ ಅರೇಬಿಯನ್ ಸಮುದ್ರ, ದಕ್ಷಿಣ ಮಹಾರಾಷ್ಟ್ರ, ತೆಲಂಗಾಣ ಮತ್ತು ದಕ್ಷಿಣ ಛತ್ತೀಸ್ಗಢದ ಕೆಲವು ಭಾಗಗಳು, ದಕ್ಷಿಣ ಒಡಿಶಾ ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಿಗೆ ಮುನ್ನಡೆದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂದಿನ ಏಳು ದಿನಗಳ ಕಾಲ ರಾಜ್ಯದೆಲ್ಲೆಡೆ ಭಾರಿ ಮಳೆಯಾಗಲಿದೆ ಜೊತೆಗೆ ಮುಂದಿನ 5 ದಿನಗಳವರೆಗೆ ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರದ ಡಾ. ರಾಜವೇಲ್ ಮಾಣಿಕ್ಕಂ ತಿಳಿಸಿದ್ದಾರೆ.
ಮಳೆ ಅನಾಹುತ ಇನ್ನು ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ, ಸುನಾಮಿ ಸಹ ಬರುವ ಸಾಧ್ಯತೆ ಇದೆ ಎಂದು ಕೋಡಿ ಶ್ರೀಗಳು ರಾಜ್ಯಾದ್ಯಂತ ಮಳೆ ವಿಚಾರವಾಗಿ ಭವಿಷ್ಯ ನುಡದಿದ್ದಾರೆ.
ರಾಜ್ಯದಲ್ಲಿ ನಿಲ್ಲದ ಜಲಾಸುರನ ಅಟ್ಟಹಾಸ. ವರುಣನ ಆರ್ಭಟದಿಂದ ಬೀದಿಗೆ ಬಂದ ರೈತನ ಬದುಕು. ನಿರಂತರ ಮಳೆಯಿಂದ ಸಂಪೂರ್ಣ ನೆಲಕಚ್ಚಿದ ಬೆಳೆ. ಧಾರವಾಡದ ಕಲಘಟಗಿ ತಾಲೂಕಿನಾದ್ಯಂತ ಮಳೆ ಅವಾಂತರ.
ಗಾಳಿ ಮಿಂಚು ಗುಡುಗು ಸಹಿತ ಮಳೆ ಸಾಧ್ಯತೆ ಇದ್ದು, ವೇಗ 30-40 ವೇಗದಲ್ಲಿ ಗಾಳಿಯ ಬೀಸಲಿದೆ ಹೀಗಾಗಿ ಅಗತ್ಯ ಕ್ರಮ ಮತ್ತು ಎಚ್ಚರ ವಹಿಸುವಂತೆ ಇಲಾಖೆಯಿಂದ 20 ಜಿಲ್ಲೆಗಳ ಜಿಲ್ಲಾ ಅಧಿಕಾರಿಗಳಿಗೆ ಅಲರ್ಟ್ ಸಂದೇಶ ರವಾನಿಸಿದೆ.
ರಾಜ್ಯದ ಮಲೆನಾಡು, ಕರಾವಳಿ ಮತ್ತು ಉತ್ತರ ಒಳನಾಡು, ದಕ್ಷಿನ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಇದು ಇಂದು ನಾಳೆ, ನಾಡಿದ್ದು ಅಂದ್ರೆ ಮೂರು ದಿನವೂ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಇಲಾಖೆ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.