ದೇಶಾದ್ಯಂತ ಅಬ್ಬರಿಸಿದ ಕನ್ನಡಿಗನ ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ಇದೀಗ ಓಟಿಟಿಯಲ್ಲಿ ದಾಖಲೆಗಳನ್ನು ಧೂಳಿಪಟ ಮಾಡಲು ಸಿದ್ದವಾಗಿದೆ. ನಾಳೆ ಅಂದ್ರೆ ನ.24 ರಂದು ಕಾಂತಾರ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದ್ದು, ಈ ಕುರಿತು ಸ್ವತಃ ಓಟಿಟಿ ಅಮೆಜಾನ್ ಪ್ರೈಮ್ ಇಂಡಿಯಾ ಅಧಿಕೃತವಾಗಿ ಮಾಹಿತಿ ನೀಡಿದೆ.
ಕಾಂತಾರ ನಟ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಂಡಿದೆ. ರೈತರು ಮತ್ತು ಬುಡಕಟ್ಟು ಜನರ ಭೂಮಿ ಸಮಸ್ಯೆಯನ್ನು ಸಾಂಸ್ಕೃತಿಕ ಅಂಶಗಳೊಂದಿಗೆ ತೋರಿಸುವ ಚಿತ್ರವಾಗಿ ಕಾಂತಾರ ಮೋಡಿ ಮಾಡಿದೆ. ಕಿಶೋರ್, ಸಪ್ತಮಿ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ರಾಜ್ಯದಲ್ಲಿ ಚಿತ್ರಕ್ಕೆ ಸಿಕ್ಕ ಭಾರೀ ರೆಸ್ಪಾನ್ಸ್ ನಂತರ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಸಿನಿಮಾವನ್ನು ಅನುವಾದ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು.
ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿದೆ. ಭಾರತದ ದರ್ಶನ ಮಾಡಿರುವ ಕಾಂತಾರದ ಶಿವ, ಲೀಲಾ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಲ್ಲದೆ, ಕಾಂತಾರ ಸಿನಿಮಾಗೆ ಪ್ರೇಕ್ಷಕ, ವಿಮರ್ಶಕರು ಸೇರಿದಂತೆ ನಟ, ನಟಿಯರು, ರಾಜಕೀಯ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಿಷಬ್ ಶೆಟ್ಟಿಯವರನ್ನು ಮನೆಗೆ ಕರೆಯಿಸಿ ಅಭಿನಂದನೆಗಳನ್ನು ತಿಳಿಸಿ ಗೋಲ್ಡನ್ ಚೈನ್ ಒಂದನ್ನು ಉಡುಗೂರೆಯಾಗಿ ನೀಡಿದ್ದರು.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರವು ಪ್ರೇಕ್ಷಕರನ್ನು ಮತ್ತು ಸಿನಿಪಂಡಿತರನ್ನು ವಿಸ್ಮಯಗೊಳಿಸುತ್ತಿದೆ. ಇನ್ನೂ ಅದು ಮುಂದುವರೆಸಿದೆ. ಕಳೆದ 45 ದಿನಗಳ ಕನ್ನಡಿಗನ ʼಕಾಂತಾರʼ ದೇಶಾದ್ಯಂತ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಒಂದರಂತೆ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ. ಸಾರ್ವಕಾಲಿಕ ದೊಡ್ಡ ಯಶಸ್ಸಿನತ್ತ ಸಾಗಿರುವ ಕಾಂತಾರ ಸದ್ಯ ದಾಖಲೆ ಸೃಷ್ಟಿಸಿದೆ.
ನಾವು ಸಿನಿಮಾವನ್ನು ಪ್ರೇಕ್ಷಕರಿಗಾಗಿ ನಿರ್ಮಿಸುತ್ತೇವೆ, ನಮಗಾಗಿ ಅಲ್ಲ. ಸಿನಿಮಾಗಳಲ್ಲಿ ಬಾಲಿವುಡ್ ಶೈಲಿಯನ್ನು ನಾವ್ಯಾಕೆ ಅಳವಡಿಸಿಕೊಳ್ಳಬೇಕು ಅವರೇ ತೋರಿಸುತ್ತಿದ್ದಾರೆ. ನಾವು ನಮ್ಮ ಜನರಿಗೆ ಏನು ಬೇಕು..? ನಮ್ಮ ಹಳ್ಳಿ, ನೆಲ ಜಲದ ಕಥೆಯ ಮೌಲ್ಯಗಳನ್ನು ಸಿನಿಮಾಗಳಲ್ಲಿ ತೋರಿಸಬೇಕು ಎಂದು ನಟ ರಿಷಬ್ ಶೆಟ್ಟಿ ಬಾಲಿವುಡ್ನಲ್ಲಿ ಪಾಶ್ಚಿಮಾತ್ಯ ಸಂಪ್ರದಾಯ ಅಳವಡಿಕೆ ಕುರಿತು ಹೇಳಿದರು.
ಭಾರತೀಯ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ಸಿನಿಮಾ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದೆ. ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದ ಸಿನಿಮಾಗೆ ರಾಜಕೀಯ ಗಣ್ಯರು, ನಟರು ಫಿದಾ ಆಗಿದ್ದಾರೆ. ಇನ್ನು ತಲೈವಾ ರಜನಿಕಾಂತ್ ಅವರು ಸಿನಿಮಾ ನೋಡಿದ್ದು, ಹಾಡಿ ಹೊಗಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.