ಐಎಎಸ್ ರೋಹಿಣಿ ಮತ್ತು ಐಪಿಎಸ್ ಡಿ. ರೂಪಾ ಕಿತ್ತಾಟ ವಿಚಾರಕ್ಕೆ ಸಂಬಂಧಿಸಿದಂತೆ ದಿನೆ ದಿನೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗ ಆರ್ಟಿಐ ಕಾರ್ಯಕರ್ತನೊಬ್ಬನಿಗೆ ಡಿ.ರೂಪಾ ಅವಾಜ್ ಹಾಕಿದ ಆಡಿಯೋವಂದು ವೈರಲ್ ಆಗಿದೆ.
ಐಪಿಎಸ್ ಡಿ.ರೂಪ ಮತ್ತು ಐಎಎಸ್ ರೋಹಿಣಿ ನಡುವಿನ ಹಾದಿ ಬೀದಿ ರಂಪಾಟದ ನಡುವೆ 8 ವರ್ಷದಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಡಿಕೆ ರವಿ ಸಾವು ಮತ್ತು ಸುದ್ದಿಯಾಗುತ್ತಿದೆ. ಡಿ. ರೂಪ ಪದೇ ಪದೇ ರವಿ ಹೆಸರನ್ನ ಬಳಸಿರೋದಕ್ಕೆ ಒಂದಷ್ಟು ಪರ ವಿರೋಧದ ಚರ್ಚೆಗಳಾಗುತ್ತಿವೆ.
ಮಹಿಳಾ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಜಟಾಪಟಿ ಇಂದೂ ಮುಂದುವರೆದಿದೆ... ಗೆಟ್ ವೆಲ್ ಸೂನ್ ಎಂದು ಪ್ರತಿಕ್ರಿಯಿಸಿದ ರೋಹಿಣಿ ಸಿಂಧೂರಿಗೆ, ರೂಪಾ ಟಕ್ಕರ್ ಕೊಟ್ಟಿದ್ದಾರೆ.. ರೋಹಿಣಿ ಅಭಿಮಾನಿಗಳೂ ರೂಪಾಗೆ ಕೆಲ ಪ್ರಶ್ನೆ ಇಟ್ಟಿದ್ದಾರೆ. ಹೀಗಿರುವಾಗ್ಲೇ ಡಿ.ರೂಪಾ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ.
ಐಪಿಎಸ್ ಐಎಎಸ್ ಮಹಿಳಾ ಅಧಿಕಾರಿಗಳ ಪೇಸ್ ಬುಕ್ ಸಮರ ಪೊಲೀಸ್ ಠಾಣೆ ಹಾಗೂ ವಿಧಾನಸೌಧ ತಲುಪಿದೆ. ನಿನ್ನೆಯವರೆಗು ಪೇಸ್ ಬುಕ್ ನಲ್ಲಿ ಆರೋಪ ಪ್ರತ್ಯಾರೋಪ ಮಾಡ್ತಿದ್ದ ರೋಹಿಣಿ ಸಿಂಧೂರಿ ಮತ್ತು ರೂಪಾ, ಇಂದು ಇಬ್ಬರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಪ್ರತಿದೂರು ನೀಡಿ, ವಿವಾದವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಸೋಷಿಯಲ್ ಮೀಡಿಯಾದಲ್ಲಿ ದಾಳಿ ವಾಗ್ದಾಳಿ ನಡೆಸಿದ್ದಾರೆ. ರೂಪಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಿಂಧೂರಿ ಅವರ ಮೇಲೆ ಆರೋಪಗಳ ಹೊರಿಸಿದ್ದಾರೆ. ಅಲ್ಲದೆ ಐಎಎಸ್ ಅಧಿಕಾರಿ ದುರ್ನಡತೆ ತೋರಿದ್ದಾರೆ ಎಂದು ದೂರಿದ್ದಾರೆ. ಜೊತೆಗೆ ಅವರ ವೈಯಕ್ತಿಕ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ಅಧಿಕಾರಿಗಳ ಜಗಳದ ವಿಚಾರವಾಗಿ ಗೃಹ ಸಚಿವರ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬರೋಬ್ಬರಿ 8 ವರ್ಷಗಳ ಸನಿಹ ಮತ್ತೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಸುದ್ದಿ ಮುನ್ನಲೆಗೆ ಬಂದಿದೆ. ಡಿಕೆ ರವಿ ಸಾವಿನ ವಿಚಾರವನ್ನೇ ಪ್ರಶ್ನಿಸುತ್ತಾ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಐಪಿಎಸ್ ಅಧಿಕಾರಿ ಡಿ.ರೂಪ ಆರೋಪಗಳ ಬಾಣವನ್ನೇ ಬಿಟ್ಟಿದ್ದಾರೆ. ಹಾಗಾದ್ರೆ ಡಿ.ಕೆ ರವಿ ಸಾವಿನ ವಿಚಾರ ಈಗ ಪ್ರಸ್ತಾಪ ಆಗಿದ್ದು ಯಾಕೆ..? ಅದಕ್ಕೆ ರೋಹಿಣಿ ಸಿಂಧೂರಿ ಕೊಟ್ಟ ಸ್ಪಷ್ಟನೇ ಏನು. ಪತ್ನಿ ಕುಸುಮಾ ಕರ್ಮದ ಬಗ್ಗೆ ಮಾತಾಡಿದ್ಯಾಕೆ..? ಅಂತ ಗೊತ್ತಾಗ್ಬೇಕು ಅಂದ್ರೆ ಈ ಸುದ್ದಿ ತಪ್ಪದೆ ಓದಿ..
ಸೋಷಿಯಲ್ ಮೀಡಿಯಾದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಫೋಟೋಗಳನ್ನು ಹಂಚಿಕೊಂಡ ಬೆನ್ನಲ್ಲೆ ಕೆಲ ನೆಟ್ಟಿಗರು ಸೇರಿದಂತೆ ಜನರು ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದೀಗ ಮತ್ತೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸುದೀರ್ಘ ಬರಹ ಬರೆದುಕೊಳ್ಳುವ ಮೂಲಕ ಪ್ರಶ್ನೆ ಮಾಡಿದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಐಎಎಸ್ ಅಧಿಕಾರಿ ಡಿ.ರೂಪ ತಮ್ಮ ಫೇಸ್ಬುಕ್ ಖಾತೆಯಲ್ಲಿ ರೋಹಿಣಿಯವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಿಂದ ಇಬ್ಬರ ನಡುವೆ ಪೋಸ್ಟ್ ವಾರ್ ಮುಂದುವರೆದಂತೆ ಕಾಣುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.