D Roopa vs Rohini Sindhuri : ಸೋಷಿಯಲ್ ಮೀಡಿಯಾದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಫೋಟೋಗಳನ್ನು ಹಂಚಿಕೊಂಡ ಬೆನ್ನಲ್ಲೆ ಕೆಲ ನೆಟ್ಟಿಗರು ಸೇರಿದಂತೆ ಜನರು ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದೀಗ ಮತ್ತೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸುದೀರ್ಘ ಬರಹ ಬರೆದುಕೊಳ್ಳುವ ಮೂಲಕ ಪ್ರಶ್ನೆ ಮಾಡಿದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಫೇಸ್‌ಬುಕ್ ಖಾತೆಯಲ್ಲಿ ಡಿ ರೂಪ ಅವರು, ಈ ಪಿಕ್ಸ್ ಈಗ ಯಾಕೆ ಹಾಕಿದ್ದೀರಿ ಅಂತ ಕೇಳುವವರಿಗೆ ಹೇಳುವುದು ಇಷ್ಟೇ. ಈ ಚಿತ್ರಗಳು ನನ್ನ ಕೈ ಸೇರಿದ್ದು ಕೇವಲ ಇತ್ತೀಚೆಗೆ. ವಿಷಯ ತಿಳಿದ ತಕ್ಷಣ ಸರ್ಕಾರ ಮಟ್ಟದಲ್ಲಿ ವಿಷಯ ಎಲ್ಲೆಲ್ಲಿ ತಿಳಿಸಬೇಕು ಅಲ್ಲಿ ತಿಳಿಸಿದ್ದೇನೆ. ನಾನು ಹಾಕಿದ 20 ಅಂಶಗಳ ಪೋಸ್ಟ್ನಲ್ಲಿ ಒಂದಂಶ ಈ ಚಿತ್ರಗಳ ಬಗ್ಗೆ ಹೇಳಿದ್ದೇನೆ. ಅದಕ್ಕಾಗಿ ಈ ಚಿತ್ರಗಳನ್ನು ( ಅದರಲ್ಲೂ ಆದಷ್ಟು ಗಂಭೀರ ಚಿತ್ರಗಳನ್ನು) ಹಾಕಿದ್ದೇನೆ. 20 ಅಂಶಗಳ ಬಗ್ಗೆ , ಅಂದರೆ ಕೆಲವು ಹಿಂದಿನವು, ಈಗ ಯಾಕೆ ಪ್ರಸ್ತಾಪ ಮಾಡಿದ್ದೀರಿ ಅಂತ ಕೇಳುವವರಿಗೆ ಹೇಳುವುದು ಇಷ್ಟೇ. ಅನೇಕ ವಿಷಯಗಳು ನನಗೆ ಇತ್ತೀಚೆಗೆ ಒಂದು ವರ್ಷದೊಳಗೆ ಗೊತ್ತಾಗಿದ್ದು.
ಇದನ್ನೂ ಓದಿ: IAS vs IPS : ರೋಹಿಣಿ ಸಿಂಧೂರು ವಿರುದ್ಧ ಮತ್ತೆ ಗುಡುಗಿದ ಡಿ.ರೂಪ!
ಎಂಎಲ್‌ಎ ಒಬ್ಬರ ಹತ್ರ ಡಿಸಿ ಆಗಿದ್ದ ಐಎಎಸ್ ಅಧಿಕಾರಿ ಸಂಧಾನಕ್ಕೆ ಹೋಗಿದ್ದಾರೆ ಎಂಬ ವಿಷಯ ಮಾಧ್ಯಮದಲ್ಲಿ ಬಂದಿದ್ದರಿಂದ ಈ ಐಎಎಸ್ ಅಧಿಕಾರಿಯ (ರೋಹಿಣಿ ಸಿಂಧೂರಿ) ಅವರ ನಡವಳಿಕೆ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವ ಹಳೆಯ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ. ಯಾಕೆ ಇವರು ಎಂಎಲ್ಎ ಬಳಿ ಸಂಧಾನಕ್ಕೆ ಹೋಗುತ್ತಾರೆ. ಸರ್ಕಾರದ ಯಾವ ನಿಯಮದಲ್ಲಿ ಈ ರೀತಿಯ ಸಂಧಾನಕ್ಕೆ ಅವಕಾಶ ಇದೆ. ಅಂದರೆ, ಇವರು ಏನನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಾ ಇದ್ದಾರೆ. ಈಕೆ ಮಾಡಿದ ಭ್ರಷ್ಟಾಚಾರ ವೋ, ಅನೈತಿಕ ನಡತೆಯೋ, ಆಕೆಯೇ ಉತ್ತರಿಸಬೇಕು.
ನಾನು ಹಿಂದೆ ಕೂಡ ಇವರಿಗೆ ನಾನು ಹಾಗೂ ನನ್ನ ಪತಿ ಐಎಎಸ್ ಅಧಿಕಾರಿಯಾದ ಮೌದ್ಗಿಲ್ ಅವರು ತುಂಬಾ ಸಹಾಯ ಮಾಡಿದ್ದು ಆಕೆಗೂ ಗೊತ್ತಿದೆ ಎಂದು ಫೇಸ್ಬುಕ್ನಲ್ಲಿ ಬರೆದಿದ್ದೆ ಈ ಹಿಂದೆ. ಆದರೆ ಬರಬರುತ್ತಾ ಆಕೆ ಯ ಅನೇಕ ವಿಷಯಗಳು ಬಯಲಾಗಿ ನನಗೆ ಗೊತ್ತಾಗಿ, ಸಂಧಾನ ಎಂದು ಮಾಧ್ಯಮದಲ್ಲಿ ಬಂದಾಗ ಈ ಪೋಸ್ಟ್ ಹಾಕಿರುತ್ತೆನೆ. ಮಾನ್ಯ ಡಿಕೆ ರವಿ ವಿಚಾರದಲ್ಲಿ ಈಕೆ ನಡೆದುಕೊಂಡ ರೀತಿ ಬಗ್ಗೆ ಅವತ್ತೂ ನನ್ನ ಅಭಿಪ್ರಾಯ ಅದೇ ಇತ್ತು, ಈಗೂ ಅದೇ ಇದೆ.
ಇದನ್ನೂ ಓದಿ: ರಾಜ್ಯದಲ್ಲಿ ಹಿಟ್ ಅಂಡ್ ರನ್ ಕೇಸ್ ಬೆಂಗಳೂರಿನಲ್ಲೆ ಹೆಚ್ಚು..! ಕಾರಣ ಇಲ್ಲಿದೆ
ಅವತ್ತಿಗೂ ನಾನು ಇದೆ ವಿಷಯ ಅನೇಕೆ ಐಎಎಸ್ ಅಧಿಕಾರಿಗಳಿಗೆ ಹೇಳಿದ್ದೆ, ಏನೆಂದರೆ, ಯಾಕೆ ಇವರು ಡಿಕೆ ರವಿ ಅವರನ್ನು ಸಂಪೂರ್ಣ block ಮಾಡಲಿಲ್ಲ? ರವಿ ಅವರು ಈಕೆಯ ಬಗ್ಗೆ ಭಾವಾನುರಾಗಕ್ಕೆ ಒಳಗಾದಾಗ ಐಎಎಸ್ ಸ್ಥಾನದಲ್ಲಿ ಇದ್ದ ಜವಾಬ್ದಾರಿಯುತ ಮಾದರಿ ಮಹಿಳೆ ಏನು ಮಾಡಬೇಕು? ಅದನ್ನು ಮುಂದು ವರೆಸದೆ ಬ್ಲಾಕ್ ಮಾಡಬೇಕು. ಅದನ್ನು ಯಾಕೆ ಮಾಡಲಿಲ್ಲ ಹಾಗಾಗಿ ನನ್ನ ಪ್ರಶ್ನೆ ಮಾಡುವವರಿಗೆ ನಾನು ಹೇಳುವುದು ಇಷ್ಟೇ.. ನಾನು ಬರೆದ 20 ಅಂಶಗಳಿಗೆ ಒಂದರಲ್ಲಿ ಆದರೂ ಆಕೆಗೆ ಶಿಕ್ಷೆ ಆಗಿದೆಯೇ. ಯಾಕೆ. ಶಿಕ್ಷೆ ಆಗದಂತೆ ಈಕೆ ಏನು ಮಾಡುತ್ತಾರೆ. ಅದಕ್ಕಾಗಿಯೇ ಸಂಧಾನಕ್ಕೆ ಹೋದರೆ ಎಂಎಲ್ಎ ಬಳಿ. ಈಗೂ ಕೂಡ ಪ್ರೂವ್ ಆಗಿರುವ ಅಂಶಗಳ ಮೇಲೆ ಆಕೆಗೆ ಶಿಕ್ಷೆ ಆಗುತ್ತದೆಯೇ. ವಿರಾಮ. ಎಂದು ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.