ಭಾರತದಲ್ಲಿ ಕೋವಿಡ್ -19ರ ಹೊಸ ಪ್ರಕರಣಗಳು ಇದೇ ಮೊದಲ ಬಾರಿಗೆ ದಿನವೊಂದರಲ್ಲಿ 3 ಲಕ್ಷ ದಾಟಿದೆ. ಇದು ಅಮೇರಿಕಾದ ದೈನಂದಿನ ದಾಖಲೆಗಳ ದಾಖಲೆಯನ್ನು ಮುರಿದಿದೆ. ಇದಕ್ಕೂ ಮೊದಲು ಜನವರಿ 8 ರಂದು ಅಮೇರಿಕಾದಲ್ಲಿ 3,07,581 ಹೊಸ ಪ್ರಕರಣಗಳು ದಾಖಲಾಗಿದ್ದವು.
ಭಾರತದಲ್ಲಿ ಕೊರೊನಾವೈರಸ್ನ ರುದ್ರ ನರ್ತನ ಮುಂದುವರೆದಿದೆ ಮತ್ತು ಕಳೆದ 24 ಗಂಟೆಗಳಲ್ಲಿ 2.75 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ, ವೇಗವಾಗಿ ಹೆಚ್ಚುತ್ತಿರುವ ಸಾವಿನ ಅಂಕಿ ಅಂಶಗಳು ಸರ್ಕಾರದ ಕಳವಳವನ್ನು ಹೆಚ್ಚಿಸಿವೆ.
ವಾಣಿಜ್ಯ ನಗರಿ ಮುಂಬೈಯಲ್ಲಿ ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗಿರುವುದರಿಂದ ಬೇರೆ ವಿಧಿಯಿಲ್ಲದೆ ಮತ್ತೆ ಲಾಕ್ಡೌನ್ ಜಾರಿಗೆ ತರಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೋನಾ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಎಪ್ರಿಲ್ 6ರಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ.
ಹಬ್ಬಗಳ ಸಮಯದಲ್ಲಿ ಕಿಕ್ಕಿರಿದು ತುಂಬಿರುವ ಮಾರುಕಟ್ಟೆಗಗಳಿಗೆ ಶಾಪಿಂಗ್ ಗಾಗಿ ತೆರಳುವುದು ಎಂದರೆ ಕರೋನಾವೈರಸ್ ಅನ್ನು ಆಹ್ವಾನಿಸಿದಂತೆಯೇ ಸರಿ. ಇದಕ್ಕೆ ಸಾಕ್ಷಿ ಎಂಬಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರುಕಟ್ಟೆಗಳು ಸೇರಿದಂತೆ ಈ ಐದು ಸ್ಥಳಗಳನ್ನು ಕರೋನಾ ಸೂಪರ್ ಸ್ಪ್ರೆಡರ್ ಎಂದು ಹೇಳಲಾಗುತ್ತಿದೆ.
ಕರೋನಾವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ, ಭೋಪಾಲ್, ಇಂದೋರ್, ಜಬಲ್ಪುರ್, ಬೆತುಲ್, ಚಿಂದ್ವಾರ, ರತ್ನಂನ ಖಾರ್ಗೊನ್ನಲ್ಲಿನ ಶಾಲೆಗಳು ಮತ್ತು ಕಾಲೇಜುಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಸೂಚನೆ ನೀಡಲಾಗಿದೆ.
ಮೊದಲು ಕರೋನಾವೈರಸ್ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಕರೋನಾವೈರಸ್ ಪ್ರಕರಣಗಳನ್ನು ಹೊಂದಿದ್ದ ಮೈಸೂರು ನಂತರದ ದಿನಗಳಲ್ಲಿ ಕಠಿಣ ಕ್ರಮಗಳನ್ನು ಅನುಸರಿಸುವ ಮೂಲಕ ಕರೋನಾ ಹಿಡಿತದಿಂದ ಹೊರಬಂದಿತ್ತು.
ಕೋವಿಡ್ 2ನೇ ಅಲೆಯ ವೇಳೆ ರೋಗಿಗಳ ಸಂಖ್ಯೆ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ವ್ಯವಸ್ಥೆ ಬೇಕಾಗುತ್ತದೆ. ಯಾವುದೇ ಸಂಸ್ಥೆಯಲ್ಲಿ ಲೋಪ ಕಂಡುಬಂದರೆ ಆಯಾ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು.
Corona Updates Today: ಕರೋನಾ ವೈರಸ್ ಸೋಂಕು ಮತ್ತೊಮ್ಮೆ ವೇಗವಾಗಿ ಬೆಳೆಯುತ್ತಿದೆ. ಮತ್ತೊಮ್ಮೆ, ದೇಶದಲ್ಲಿ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸೋಂಕಿನ ಮಟ್ಟವು 1.55% ರಿಂದ 1.96% ಕ್ಕೆ ಏರಿದೆ.
ಶನಿವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ನೀತಿ ಆಯೋಗದ (NITI Ayog) ಆರೋಗ್ಯ ಸದಸ್ಯ ಡಾ.ವಿನೋದ್ ಪಾಲ್ ಅವರು 9 ರಾಜ್ಯಗಳ ಆರೋಗ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ಆರೋಗ್ಯ ಕ್ರಮಗಳನ್ನು ಪರಿಶೀಲಿಸಿದರು.
Coronavirus in Maharashtra: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪುಸೆಗಾಂವ್ನ ಸೇವಾಗಿರಿ ಶಾಲೆಯಲ್ಲಿ 14 ಮಕ್ಕಳಲ್ಲಿ ಕರೋನಾ ಪಾಸಿಟಿವ್ ಕಂಡುಬಂದಿದೆ. ಈ ಮೊದಲು ಈ ಶಾಲೆಯ 9 ಮಕ್ಕಳ ಕರೋನಾ ವರದಿ ಸಕಾರಾತ್ಮಕವಾಗಿದೆ.
ಕೊವಿಡ್-19 ಸೋಂಕು ನಿಯಂತ್ರಣ ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಹೊರ ರಾಜ್ಯಗಳಿಂದ ಬಂದವರಿಗೆ, ಪ್ರತಿಬಂಧಿತ ಪ್ರದೇಶಗಳಲ್ಲಿನ ಜನರಿಗೆ, ಸೋಂಕಿತರ ಪ್ರಥಮ ದ್ವಿತೀಯ ಸಂಪರ್ಕಿತರಿಗೆ ಮನೆ ದಿಗ್ಭಂದನ ಕಡ್ಡಾಯಗೊಳಿಸಿದೆ.
ಪ್ರಯಾಣಿಕರ ಒತ್ತಡ ಮತ್ತು ಸಾಂಸ್ಥಿಕ ಕ್ವಾರಂಟೈನ್ ತೊಡಕಿನಿಂದ ತಪ್ಪಿಸಿಕೊಳ್ಳಲು ಸಾಂಸ್ಥಿಕ ಕ್ವಾರಂಟೈನ್ ಬದಲಾಗಿ ಹೋಮ್ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.