Corona Return: ಎಲ್ಲೆಲ್ಲಿ ರಾತ್ರಿ ಕರ್ಫ್ಯೂ ಜಾರಿ? ಈ ಸ್ಥಳಗಳಿಗೆ ಹೋಗುವ ಮೊದಲು ತಿಳಿದುಕೊಳ್ಳಿ

ದೇಶದ ಹಲವು ನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ ಮತ್ತು ಶೀಘ್ರದಲ್ಲೇ ಕೆಲವು ನಗರಗಳಲ್ಲಿ ಲಾಕ್‌ಡೌನ್ ಘೋಷಿಸಬಹುದು ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Mar 17, 2021, 02:15 PM IST
  • ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ದೇಶದ ಹಲವು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮ
  • ಮಹಾರಾಷ್ಟ್ರದಲ್ಲಿ ಕರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಚ್ಚೆತ್ತಿರುವ ನೆರೆಹೊರೆಯ ರಾಜ್ಯಗಳು
  • ದೇಶದ ಹಲವು ಭಾಗಗಳಲ್ಲಿ ನೈಟ್ ಕರ್ಫ್ಯೂ ಜಾರಿ
Corona Return: ಎಲ್ಲೆಲ್ಲಿ ರಾತ್ರಿ ಕರ್ಫ್ಯೂ ಜಾರಿ? ಈ ಸ್ಥಳಗಳಿಗೆ ಹೋಗುವ ಮೊದಲು ತಿಳಿದುಕೊಳ್ಳಿ title=
Night curfew enforcement in these parts of the country

ನವದೆಹಲಿ: ಇನ್ನೇನು ಕರೋನಾವೈರಸ್ ಅಟ್ಟಹಾಸ  ಕಡಿಮೆಯಾಗುತ್ತಿದೆ ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ದೇಶದ ಹಲವು ರಾಜ್ಯಗಳಲ್ಲಿ ಕರೋನಾ ಮತ್ತೊಮ್ಮೆ ತಾರಕಕ್ಕೇರುತ್ತಿದ್ದು ಎಲ್ಲರಲ್ಲೂ ಭಯ ಹುಟ್ಟಿಸುತ್ತಿದೆ. ಈ ಮಧ್ಯೆ ಕೇವಲ ಒಂದೇ ಒಂದು  ತಿಂಗಳಲ್ಲಿ ದೇಶದಲ್ಲಿ ಹೊಸ ಕರೋನವೈರಸ್ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಹೆಚ್ಚುತ್ತಿರುವ ಕರೋನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. 

ಬೇರೆಲ್ಲಾ ರಾಜ್ಯಗಳಿಗಿಂತ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದೆ, ಅದರ ನಂತರ ರಾಜ್ಯದಲ್ಲಿ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ. ಇದಲ್ಲದೆ ಮಧ್ಯಪ್ರದೇಶ, ಗುಜರಾತ್ ಮತ್ತು ಪಂಜಾಬ್‌ನ ಪರಿಸ್ಥಿತಿ ಕೂಡ ಉತ್ತಮವಾಗಿಲ್ಲ. ಈ ಹಿನ್ನಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

ಎಲ್ಲೆಲ್ಲಿ ರಾತ್ರಿ ಕರ್ಫ್ಯೂ?
ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ದೇಶದ ಹಲವು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಲಾಕ್‌ಡೌನ್‌ (Lockdown) ಬದಲಿಗೆ ರಾತ್ರಿ ಕರ್ಫ್ಯೂ ಜಾರಿಗೆ ಬರುತ್ತಿದೆ. ಕರ್ನಾಟಕ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ದೆಹಲಿ ಮತ್ತು ಆಂಧ್ರಪ್ರದೇಶದಲ್ಲಿ ಮತ್ತೆ ಹೊಸ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕಾರಣದಿಂದಾಗಿ, ಮಹಾರಾಷ್ಟ್ರದ ನಾಗ್ಪುರದ ನಂತರ ಅಕೋಲಾದಲ್ಲಿ ಲಾಕ್‌ಡೌನ್‌ ವಿಧಿಸಲಾಗಿದೆ. ಅದೇ ಸಮಯದಲ್ಲಿ, ಪುಣೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಅನ್ವಯವಾಗುತ್ತದೆ. ಪಂಜಾಬ್, ಲುಧಿಯಾನ, ಪಟಿಯಾಲ, ಮೊಹಾಲಿ, ಜಲಂಧರ್, ನವಾಶಹರ್, ಹೋಶಿಯಾರ್ಪುರ್ ಮತ್ತು ಕಪುರ್ಥಾಲಾ ಸೇರಿದಂತೆ 9 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬರುತ್ತಿದೆ. ಇದಲ್ಲದೆ ಗುಜರಾತ್‌ನ 4 ಜಿಲ್ಲೆಗಳು ಮತ್ತು ಮಧ್ಯಪ್ರದೇಶದ 2 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ.

ಇದನ್ನೂ ಓದಿ - ಈ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ RT-PCR test ಕಡ್ಡಾಯ

ನೆರೆಹೊರೆಯ ರಾಜ್ಯಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿವೆ:
ಮಹಾರಾಷ್ಟ್ರದಲ್ಲಿ (Maharashtra) ಕರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಚ್ಚೆತ್ತಿರುವ ನೆರೆಹೊರೆಯ ರಾಜ್ಯಗಳು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುತ್ತಿವೆ. ಮಧ್ಯ ಪ್ರದೇಶ ಇಂದೋರ್ ನಲ್ಲಿ ಸ್ಥಳೀಯ ಆಡಳಿತವು ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿವೆ. ಇದರ ಅನ್ವಯ ಮಹಾರಾಷ್ಟ್ರದಿಂದ ವಿಮಾನದ ಮೂಲಕ ಇಂದೋರ್ಗೆ ತೆರಳುವವರು ಕರೋನಾ ನೆಗೆಟಿವ್ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಕರೋನಾ ನೆಗೆಟಿವ್ ವರದಿ ಸಲ್ಲಿಸದವರನ್ನು ವಿಮಾನ ನಿಲ್ದಾಣದಲ್ಲಿಯೇ ತಡೆಹಿಡಿಯಲಾಗುತ್ತದೆ.

ಈ ದೊಡ್ಡ ನಗರಗಳಲ್ಲಿ ಕಟ್ಟುನಿಟ್ಟಿನ ಕ್ರಮ: 
ಲುಧಿಯಾನ, ಪಟಿಯಾಲ, ಜಲಂಧರ್, ಸೂರತ್, ಅಹಮದಾಬಾದ್, ವಡೋದರಾ, ರಾಜ್‌ಕೋಟ್, ಭೋಪಾಲ್, ಇಂದೋರ್, ನಾಗ್ಪುರ, ಪುಣೆ, ನಾಸಿಕ್ ಸೇರಿದಂತೆ ಮುಂಬಯಿಯಲ್ಲಿ ಕಟ್ಟುನಿಟ್ಟನ ಕ್ರಮ ಜಾರಿಗೊಳಿಸಲಾಗಿದೆ. ಕರೋನಾ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಮಾಸ್ಕ್ ಧರಿಸದೆ ಹೊರಗೆ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ, ರಾಜಕೀಯ ಅಥವಾ ಯಾವುದೇ ರೀತಿಯ ಸಾಮಾಜಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಜನಸಮೂಹವನ್ನು ಒಟ್ಟುಗೂಡಿಸುವುದನ್ನು ಸಹ ಈ ನಗರಗಳಲ್ಲಿ ನಿಷೇಧಿಸಲಾಗಿದೆ.

ಇದನ್ನೂ ಓದಿ - Corona Vaccination ನಂತರ ರಕ್ತ ಹೆಪ್ಪುಗಟ್ಟುವಿಕೆ ದೂರು, ಈ ಲಸಿಕೆ ನಿಷೇಧ

ಹೊರೆಯಾಗಲಿರುವ ಆರ್ಥಿಕ ನಿರ್ಲಕ್ಷ್ಯ  :
ಕರೋನಾ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ಸಂದೇಶದ ನಂತರವೂ ಜನರು ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬಂದಿದೆ. ದೇಶದಲ್ಲಿ ವ್ಯಾಕ್ಸಿನೇಷನ್ ಪರಿಚಯಿಸುವುದರಿಂದ ಮಾಸ್ಕ್ ಗಳಿಂದ ಸ್ವಾತಂತ್ರ್ಯ ಸಿಗುವುದಿಲ್ಲ. ಲಸಿಕೆ ಪರಿಚಯಿಸುವುದರೊಂದಿಗೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕೂಡ ಅಗತ್ಯವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಹಾಗಿದ್ದರೆ ಮಾತ್ರ ಈ ಕರೋನಾ ಯುದ್ಧದಲ್ಲಿ ಜಯಗಳಿಸಬಹುದು ಎಂಬುದನ್ನು ಎಲ್ಲರೂ ಪ್ರತಿ ಕ್ಷಣ ನೆನಪಿಡಬೇಕು.

Trending News