Coronavirus: ಮೈಸೂರಿನಲ್ಲಿ ಮತ್ತೆ ಕೋವಿಡ್ ಆತಂಕ, ಒಂದೇ ಶಾಲೆಯ 19 ಮಕ್ಕಳಿಗೆ ಕರೋನ ದೃಢ

ಮೊದಲು ಕರೋನಾವೈರಸ್ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಕರೋನಾವೈರಸ್ ಪ್ರಕರಣಗಳನ್ನು ಹೊಂದಿದ್ದ ಮೈಸೂರು ನಂತರದ ದಿನಗಳಲ್ಲಿ ಕಠಿಣ ಕ್ರಮಗಳನ್ನು ಅನುಸರಿಸುವ ಮೂಲಕ ಕರೋನಾ ಹಿಡಿತದಿಂದ ಹೊರಬಂದಿತ್ತು. 

Written by - Yashaswini V | Last Updated : Mar 24, 2021, 09:39 AM IST
  • ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲೂಕಿನಲ್ಲಿ ಒಂದೇ ಶಾಲೆಯ 19 ಮಕ್ಕಳಲ್ಲಿ ಕರೋನಾ ಸೋಂಕು
  • ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲೂಕಿನ ಬನ್ನೂರಿನಲ್ಲಿರುವ ಶಾಲೆಯ ಮಕ್ಕಳಲ್ಲಿ ಸೋಂಕು ಪತ್ತೆ
  • ಕರೋನಾ ಸೋಂಕು ಪತ್ತೆಯಾಗಿರುವ ಮಕ್ಕಳೆಲ್ಲರೂ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು
Coronavirus: ಮೈಸೂರಿನಲ್ಲಿ ಮತ್ತೆ ಕೋವಿಡ್ ಆತಂಕ, ಒಂದೇ ಶಾಲೆಯ 19 ಮಕ್ಕಳಿಗೆ ಕರೋನ ದೃಢ title=
Representational Image

ಮೈಸೂರು: ಕೋವಿಡ್ ನಂತರ ರಾಜ್ಯದಲ್ಲಿ ಶಾಲೆಗಳನ್ನು ಪುನಃ ಪ್ರಾರಂಭಿಸಬೇಕೇ? ಬೇಡವೇ? ಎಂಬ ಗೊಂದಲದ ನಡುವೆಯೇ 6ನೇ ತರಗತಿಯಿಂದ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಆದರೆ ಕೋವಿಡ್ -19 ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 1ರಿಂದ 5ನೇ ತರಗತಿವರೆಗೂ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಈ ಮಧ್ಯೆ ಮೈಸೂರಿನಲ್ಲಿ ಒಂದೇ ಶಾಲೆಯ 19 ಮಕ್ಕಳಿಗೆ ಕರೋನಾ ದೃಢ ಪಟ್ಟಿದ್ದು ಪೋಷಕರ ಆತಂಕ ಹೆಚ್ಚಿಸಿದೆ.

ಮೊದಲು ಕರೋನಾವೈರಸ್ (Coronavirus) ಮಹಾಮಾರಿ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಕರೋನಾವೈರಸ್ ಪ್ರಕರಣಗಳನ್ನು ಹೊಂದಿದ್ದ ಮೈಸೂರು ನಂತರದ ದಿನಗಳಲ್ಲಿ ಕಠಿಣ ಕ್ರಮಗಳನ್ನು ಅನುಸರಿಸುವ ಮೂಲಕ ಕರೋನಾ ಹಿಡಿತದಿಂದ ಹೊರಬಂದಿತ್ತು. 

ಇದನ್ನೂ ಓದಿ - ಎಪ್ರಿಲ್ 1 ರಿಂದ 45 ವರ್ಷದ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ

ಇದೀಗ ಕರೋನಾ ಎರಡನೇ ಅಲೆಯು ಮೈಸೂರಿನಲ್ಲಿ (Mysuru) ತೀವ್ರ ಪರಿಣಾಮ ಬೀರುತ್ತಿದ್ದು, ದಿನೇ ದಿನೇ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲೂಕಿನ ಬನ್ನೂರಿನಲ್ಲಿರುವ ವಿವೇಕಾನಂದ ಶಾಲೆಯಲ್ಲಿ ಬರೋಬ್ಬರಿ 19 ಮಕ್ಕಳಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. 

ಇದನ್ನೂ ಓದಿ - International Flight: ಏಪ್ರಿಲ್ 30 ವರೆಗೆ 'ಇಂಟೆರ್ ನ್ಯಾಷನಲ್ ಫ್ಲೈಟ್' ಬಂದ್..!

ಕರೋನಾ ಸೋಂಕು ಪತ್ತೆಯಾಗಿರುವ ಎಲ್ಲಾ ಮಕ್ಕಳನ್ನು ಹೋಂ ಐಸೊಲೇಶನ್ ನಲ್ಲಿ ಇರಿಸಲಾಗಿದೆ. ಕರೋನಾ ಸೋಂಕು ಪತ್ತೆಯಾಗಿರುವ ಮಕ್ಕಳೆಲ್ಲರೂ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News