India-China Border Dispute: ಡೊಮಿನಿಕನ್ ರಿಪಬ್ಲಿಕ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಯಾಂಟೋ ಡೊಮಿಂಗೊಗೆ ಆಗಮಿಸಿದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಭಾರತ - ಚೀನಾ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
China FDI Proposals - ಭಾರತ-ಚೀನಾ ಗಡಿಯಲ್ಲಿ ಕಡಿಮೆಯಾಗುತ್ತಿರುವ ಉದ್ವಿಗ್ನತೆಯ ಹಿನ್ನೆಲೆ ಕೇಂದ್ರ ಸರ್ಕಾರ ಚೀನಾದ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಕೇಸ್-ಟು-ಕೇಸ್ ಆಧಾರದ ಮೇಲೆ ಹಸಿರು ನಿಶಾನೆ ನೀಡಲು ಆರಂಭಿಸಿದೆ. ಇದಕ್ಕೂ ಮೊದಲು ಗಡಿವಿವಾದದ ಹಿನ್ನೆಲೆ ಭಾರತ (India) ಸರ್ಕಾರ ಚೀನಾದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವುದನ್ನು ನಿಲ್ಲಿಸಿತ್ತು.
ಚೀನಾದ ಸೈನ್ಯದ ವೆಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರರು ಭಾರತೀಯ ಸೈನ್ಯದ ವಿರುದ್ಧವೇ ಆರೋಪ ಮಾಡಿದ್ದು ಭಾರತೀಯ ಸೈನ್ಯವು ನಮ್ಮ ಸೈನಿಕರ ಮೇಲೆ ಗುಂಡು ಹಾರಿಸಿದೆ ಎಂದರಲ್ಲದೆ ಭಾರತೀಯ ಸೇನೆ ಬೆದರಿಕೆ ಹಾಕಿರುವ ಬಗ್ಗೆಯೂ ಆರೋಪ ಮಾಡಿದ್ದಾರೆ.
ಚೀನಾಕ್ಕೆ ನೀಡಿದ ಬಲವಾದ ಸಂದೇಶದಲ್ಲಿ ಭಾರತವು ಈ ಪ್ರದೇಶದಲ್ಲಿ ತನ್ನ ಕಾವಲುಗಾರರನ್ನು ಕಡಿಮೆ ಮಾಡಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.ಪೂರ್ವ ಲಡಾಕ್ನಲ್ಲಿ ನಡೆಯುತ್ತಿರುವ ಗಡಿ ಸಮಸ್ಯೆಗಳ ಮಧ್ಯೆ ಎಲ್ಎಸಿಯಲ್ಲಿ ನಿಯೋಜಿಸಲಾಗಿರುವ ಸೈನಿಕರ ಸಂಖ್ಯೆಯನ್ನು ಭಾರತ ಕಡಿಮೆ ಮಾಡುವುದಿಲ್ಲ ಎಂದು ತಿಳಿಸಿದೆ.
ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಭಾರತ (India) ಮತ್ತು ಚೀನಾ (China) ನಡುವಿನ ಹಿಂಸಾಚಾರ ಮತ್ತು ಸಾವಿನ ವರದಿಗಳ ಬಗ್ಗೆ ವಿಶ್ವಸಂಸ್ಥೆಯ (ಯುಎನ್) ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟಾರೆಸ್ ಕಳವಳ ವ್ಯಕ್ತಪಡಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.