IPL 2025: ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಆದರೆ ಬಿಸಿಸಿಐ ಮೆಗಾ ಆಕ್ಷನ್ಗೆ ಸಮಯವನ್ನು ನಿಗದಿಪಡಿಸುವ ಮೊದಲು ಕೆಲವು ನಿಯಮಗಳನ್ನು ಅಂತಿಮಗೊಳಿಸುತ್ತದೆ. ಉಳಿಸಿಕೊಂಡಿರುವ ಆಟಗಾರರ ಪಟ್ಟಿಗೆ ನಿರ್ಬಂಧ, ಮ್ಯಾಚ್ ಕಾರ್ಡ್ ಅನ್ನು ಜಾರಿಗೊಳಿಸಲಾಗಿದೆಯೇ? ಎನ್ನುವ ಪ್ರಶ್ನೆ ಸದ್ಯ ಚರ್ಚೆಗೆ ಗ್ರಾಸವಾಗಿದೆ.
Kavya Maran: ಬುಧವಾರ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಬಿಸಿಸಿಐ ನಡೆಸಿದ ಸಭೆ ಬಿಸಿ ಬಿಸಿಯಾಗಿತ್ತು. ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನ ನಿಯಮಗಳನ್ನು ಅಂತಿಮಗೊಳಿಸಲು ಮುಂಬೈನಲ್ಲಿ ಈ ಸಭೆ ನಡೆಸಲಾಯಿತು. ಆದರೆ ಎಲ್ಲಾ ಫ್ರಾಂಚೈಸಿಗಳು ನಿರ್ಧಾರದ ಬಗ್ಗೆ ಒಮ್ಮತಕ್ಕೆ ಬಂದಿಲ್ಲ. ಪ್ರತಿ ಫ್ರಾಂಚೈಸಿಗಳು ತಮ್ಮ ಅಭಿಪ್ರಾಯಗಳನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಂಡಿದೆ.
Venkatesh Iyer, IPL 2023: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಮಾತನಾಡಿದ ವೆಂಕಟೇಶ್, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದಾಗಿ ಆಲ್ ರೌಂಡರ್ ಓವರ್’ಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ’ ಎಂದರು. ವೆಂಕಟೇಶ್ ಆಲ್ ರೌಂಡರ್ ಆಗಿದ್ದರೂ ಸಹ ಇದುವರೆಗೆ ಒಂದೇ ಒಂದು ಪಂದ್ಯದಲ್ಲಿ ಬೌಲಿಂಗ್ ಮಾಡಿಲ್ಲ.
Indian Premier League 2023: ಎಲ್ ಎಸ್ ಜಿಗೆ ಈ ಬಾರಿ ಐಪಿಎಲ್ ಪ್ಲೇಆಫ್ ತಲುಪಲು ಕಡಿಮೆ ಅವಕಾಶವಿದೆ ಎಂಬ ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್ ಅವರ ಹೇಳಿಕೆಯನ್ನು ತಾನು ಒಪ್ಪುವುದಿಲ್ಲ ಎಂದು ಬಿಷ್ಣೋಯ್ ಹೇಳಿದ್ದಾರೆ. ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವ ಅವಕಾಶ ಲಖನೌಗೆ ಶೇ 100ರಷ್ಟು ಇದೆ ಎಂದರು.
Indian Premier League: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಡಿಯಲ್ಲಿ, ನಾಯಕನು ಪಂದ್ಯದ ಸಮಯದಲ್ಲಿ ಪ್ಲೇಯಿಂಗ್ 11 ರಲ್ಲಿ ಆಟಗಾರನ ಬದಲಿಗೆ ಇನ್ನೊಬ್ಬ ಆಟಗಾರನನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು. ಅಕ್ಟೋಬರ್ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯಲ್ಲಿ ಬಿಸಿಸಿಐ ಈ ನಿಯಮವನ್ನು ಪರೀಕ್ಷಿಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.