IPLನಿಂದ ವಿದೇಶಿ ಆಟಗಾರರಿಗೆ ಬಿಗ್ ಶಾಕ್: ಈ ನಿಯಮದ ಪ್ರಕಾರ ತಂಡಕ್ಕೆ ಸೇರ್ಪಡೆಯಿಲ್ಲ!!

Indian Premier League: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಡಿಯಲ್ಲಿ, ನಾಯಕನು ಪಂದ್ಯದ ಸಮಯದಲ್ಲಿ ಪ್ಲೇಯಿಂಗ್ 11 ರಲ್ಲಿ ಆಟಗಾರನ ಬದಲಿಗೆ ಇನ್ನೊಬ್ಬ ಆಟಗಾರನನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು. ಅಕ್ಟೋಬರ್‌ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯಲ್ಲಿ ಬಿಸಿಸಿಐ ಈ ನಿಯಮವನ್ನು ಪರೀಕ್ಷಿಸಿತ್ತು.

Written by - Bhavishya Shetty | Last Updated : Dec 9, 2022, 09:02 AM IST
    • ಐಪಿಎಲ್ ನ ಮುಂದಿನ ಸೀಸನ್‌ಗಾಗಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿ
    • ಈಗಾಗಲೇ ಫುಟ್‌ಬಾಲ್, ರಗ್ಬಿ, ಬಾಸ್ಕೆಟ್‌ಬಾಲ್ ಮತ್ತು ಬೇಸ್‌ಬಾಲ್‌ನಂತಹ ಕ್ರೀಡೆಗಳಲ್ಲಿ ಈ ನಿಯಮವಿದೆ
    • ವಿದೇಶಿ ಆಟಗಾರರನ್ನು ಪ್ಲೇಯಿಂಗ್ XI ಗೆ ತರಲು ಈ ನಿಯಮವನ್ನು ಬಳಸಲಾಗುವುದಿಲ್ಲ
IPLನಿಂದ ವಿದೇಶಿ ಆಟಗಾರರಿಗೆ ಬಿಗ್ ಶಾಕ್: ಈ ನಿಯಮದ ಪ್ರಕಾರ ತಂಡಕ್ಕೆ ಸೇರ್ಪಡೆಯಿಲ್ಲ!!  title=
Indian Cricket Board

Indian Premier League: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಸೀಸನ್‌ಗಾಗಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಜಾರಿಗೆ ತಂದಿದೆ. ಕ್ರಿಕೆಟ್ ಹೊರತುಪಡಿಸಿ ಈ ನಿಯಮವು ಈಗಾಗಲೇ ಫುಟ್‌ಬಾಲ್, ರಗ್ಬಿ, ಬಾಸ್ಕೆಟ್‌ಬಾಲ್ ಮತ್ತು ಬೇಸ್‌ಬಾಲ್‌ನಂತಹ ಕ್ರೀಡೆಗಳಲ್ಲಿ ಇದೆ. ಆದರೆ ಇದನ್ನು ಮೊದಲ ಬಾರಿಗೆ ಐಪಿಎಲ್‌ನಲ್ಲಿ ಬಳಸಲಾಗುತ್ತಿದೆ. ಆದರೆ ಈ ನಿಯಮಕ್ಕೆ ಸಂಬಂಧಿಸಿದ ಮಹತ್ವದ ಅಪ್‌ಡೇಟ್‌ ಹೊರಬಿದ್ದಿದ್ದು, ವಿದೇಶಿ ಆಟಗಾರರಿಗೆ ಸಖತ್ ನಿರಾಸೆ ಮೂಡಿಸುತ್ತದೆ ಎಂಬುದು ಮಾತ್ರ ಖಚಿತ.

ಇದನ್ನೂ ಓದಿ: Rohit Sharma Batting : ಹೆಬ್ಬೆರಳು ಮುರಿದರು ಬ್ಯಾಟಿಂಗ್‌ ಮಾಡಿದ ರೋಹಿತ್ : ಫ್ಯಾನ್ಸ್ ಮನ ಗೆದ್ದ ಹಿಟ್ ಮ್ಯಾನ್

ಇಂಪ್ಯಾಕ್ಟ್ ಪ್ಲೇಯರ್ ನಿಯಮ ಐಪಿಎಲ್‌ನಲ್ಲಿ ಜಾರಿ:

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಡಿಯಲ್ಲಿ, ನಾಯಕನು ಪಂದ್ಯದ ಸಮಯದಲ್ಲಿ ಪ್ಲೇಯಿಂಗ್ 11 ರಲ್ಲಿ ಆಟಗಾರನ ಬದಲಿಗೆ ಇನ್ನೊಬ್ಬ ಆಟಗಾರನನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು. ಅಕ್ಟೋಬರ್‌ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯಲ್ಲಿ ಬಿಸಿಸಿಐ ಈ ನಿಯಮವನ್ನು ಪರೀಕ್ಷಿಸಿತ್ತು. ರಾಜ್ಯ ತಂಡಗಳು ಈ ಕ್ರಮವನ್ನು ಸ್ವಾಗತಿಸಿದ್ದವು. ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಭಾರತೀಯ ಆಟಗಾರರ ಮೇಲೆ ಮಾತ್ರ ಜಾರಿಗೆ ತರಲಾಗುತ್ತಿದೆ. ವಿದೇಶಿ ಆಟಗಾರರನ್ನು ಪ್ಲೇಯಿಂಗ್ XI ಗೆ ತರಲು ಈ ನಿಯಮವನ್ನು ಬಳಸಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಎಲ್ಲಾ IPL ತಂಡಗಳಿಗೆ ಅಪ್‌ಡೇಟ್:

Cricbuzz ನಲ್ಲಿನ ವರದಿಯ ಪ್ರಕಾರ, ವಿದೇಶಿ ಆಟಗಾರನು ಇನ್ನೊಬ್ಬ ವಿದೇಶಿ ಆಟಗಾರನನ್ನು ಬದಲಿಯಾಗಿ ಆಟವಾಡಲು ಸಾಧ್ಯವಿಲ್ಲ ಎಂದು ಎಲ್ಲಾ ಫ್ರಾಂಚೈಸಿಗಳಿಗೆ ಈಗಾಗಲೇ ತಿಳಿಸಲಾಗಿದೆ. ಅಷ್ಟೇ ಅಲ್ಲದೆ, ಯಾವುದೇ ವಿದೇಶಿ ಆಟಗಾರ ಭಾರತೀಯ ಆಟಗಾರನಿಗೆ ಬದಲಿಯಾಗಿ ಬರಲು ಸಾಧ್ಯವಿಲ್ಲ. ಇತ್ತೀಚೆಗೆ, ಈ ನಿಯಮದ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ, ಐಪಿಎಲ್ 2023 ರಿಂದ ಹೊಸ ಆಯಾಮವನ್ನು ಸೇರಿಸುವ ಪರಿಕಲ್ಪನೆಯನ್ನು ಪರಿಚಯಿಸಲಾಗುವುದು. ಇದರಲ್ಲಿ ಪ್ರತಿ ತಂಡಕ್ಕೆ ಒಬ್ಬ ಬದಲಿ ಆಟಗಾರ ಐಪಿಎಲ್ ಪಂದ್ಯದಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿತ್ತು.

ಇದನ್ನೂ ಓದಿ: Virender Sehwag : ಟೀಂ ಇಂಡಿಯಾ ಹೀನಾಯ ಸೋಲನ್ನು ಲೇವಡಿ ಮಾಡಿದ ವೀರೇಂದ್ರ ಸೆಹ್ವಾಗ್

ಇಂಪ್ಯಾಕ್ಟ್ ಪ್ಲೇಯರ್ ಗಳಿಗೆ ಪ್ರಯೋಜನ:

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಡಿಯಲ್ಲಿ ತಂಡವು ನಾಲ್ಕು ಆಟಗಾರರ ಬದಲಾವಣೆಯನ್ನು ಮಾಡಬಹುದು. ಆದರೆ ಇನ್ನಿಂಗ್ಸ್‌ನ 14 ನೇ ಓವರ್‌ನ ಮೊದಲು ಈ ಬದಲಾವಣೆ ಮಾಡಬಹುದು. ಈ ಬಳಿಕ ಅವಕಾಶ ಇರುವುದಿಲ್ಲ. ಇಂಪ್ಯಾಕ್ಟ್ ಪ್ಲೇಯರ್  ಆಗಿ ಸೇರ್ಪಡೆಗೊಳ್ಳುವ ಆಟಗಾರನು ಸಂಪೂರ್ಣ ಕೋಟಾದಲ್ಲಿ ಬೌಲ್ ಮಾಡಲು ಅಥವಾ ಹೊಸ ಬ್ಯಾಟ್ಸ್‌ಮನ್‌ನಂತೆ ಬ್ಯಾಟ್ ಮಾಡಲು ಸಾಧ್ಯವಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News