ಭಾರತದ ಪರವಾಗಿ ವಿಶ್ವಕಪ್ ಇತಿಹಾಸದಲ್ಲಿ ಯಜುವೆಂದ್ರ ಚಹಾಲ್ ನೂತನ ದಾಖಲೆ ಮಾಡಿದ್ದಾರೆ.ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ 10 ಓವರ್ ಗಳಲ್ಲಿ 88 ರನ್ ನೀಡುವ ಮೂಲಕ ಅತಿ ದುಬಾರಿ ರನ್ ನೀಡಿದ ಆಟಗಾರ ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ಭಾನುವಾರ ಭಾರತ -ಇಂಗ್ಲೆಂಡ್ ನಡುವಿನ ಪಂದ್ಯ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.ಈ ಹಿನ್ನಲೆಯಲ್ಲಿ ಈಗ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಮೊಯಿನ್ ಅಲಿ ವಿರಾಟ್ ಕೊಹ್ಲಿ ವಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಕಳಪೆ ಪ್ರದರ್ಶನಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.ಅಲ್ಲದೆ ಕೆಲವು ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಬಹಿರಂಗವಾಗಿ ಟೀಕಿಸಿದ್ದಾರೆ.
ಸೌತಾಂಪ್ಟನ್ ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಆಫ್ಘಾನಿಸ್ತಾನದ ವಿರುದ್ಧ ನಡೆದ ವಿಶ್ವಕಪ್ ಟೂರ್ನಿಯ ಏಕದಿನ ಪಂದ್ಯದಲ್ಲಿ ಭಾರತ ತಂಡವು 11 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ. ಕೊನೆಯ ಓವರ್ ವರೆಗೆ ಕುತೂಹಲ ಕೆರಳಿಸಿದ್ದ, ಈ ಪಂದ್ಯಕ್ಕೆ ಭಾರತ ತಂಡದ ಬೌಲರ್ ಗಳು ಗೆಲುವನ್ನು ತಂಡದ ಕಡೆ ವಾಲುವಂತೆ ಮಾಡಿದರು.
2019 ರ ವಿಶ್ವಕಪ್ ಟೂರ್ನಿ ಅಂಗವಾಗಿ ಸೌತಾಮ್ಪ್ತೊನ್ ನ ದಿ ರೌಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ತಂಡದ ವಿರುದ್ದ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿದೆ.
ಐದು ದಿನಗಳ ಅಂತರದ ನಂತರ ಭಾರತೀಯ ಕ್ರಿಕೆಟ್ ತಂಡವು ಶನಿವಾರದಂದು ಅಫಘಾನಿಸ್ತಾನ ತಂಡದ ವಿರುದ್ಧ ದಿ ರೋಸ್ ಬೌಲ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಮೂಲಕ ತನ್ನ ಸೆಮಿಫೈನಲ್ ಕನಸನ್ನು ಸುಲಭ ಮಾಡುವತ್ತ ಗಮನ ಹರಿಸಿದೆ.
ವಿರಾಟ್ ಕೊಹ್ಲಿ ಈಗ ಮುಟ್ಟಿದ್ದೆಲ್ಲವೂ ದಾಖಲೆ ಎನ್ನುವಂತಾಗಿದೆ. ಕಳೆದ ಪಂದ್ಯದಲ್ಲಿ ಅತಿ ವೇಗವಾಗಿ ಏಕದಿನ ಕ್ರಿಕೆಟ್ ನಲ್ಲಿ 11 ಸಾವಿರ ರನ್ ಗಳಿಸಿ ಸಾಧನೆ ಮಾಡಿದ್ದ ಕೊಹ್ಲಿ ಈಗ ಮತ್ತೊಂದು ನೂತನ ದಾಖಲೆ ಮಾಡುವ ಹೊಸ್ತಿಲಲ್ಲಿ ಇದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ. ಅಲ್ಲದೆ ಪಿಚ್ ಕೂಡ ಅವರನ್ನು ಮಿಸ್ ಮಾಡಿಕೊಳ್ಳಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಎಡ್ಜ್ಬಾಸ್ಟನ್ನಲ್ಲಿ ಬುಧವಾರ ನಡೆದ 49 ಓವರ್ಗಳ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು. ಆ ಮೂಲಕ 2019 ರ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಅಜೇಯ ಗೆಲುವನ್ನು ಮುಂದುವರೆಸಿದೆ. ಇನ್ನೊಂದೆಡೆಗೆ ದಕ್ಷಿಣ ಆಫ್ರಿಕಾ ತಂಡವು ಆರು ಪಂದ್ಯಗಳಲ್ಲಿ ನಾಲ್ಕನೇ ಸೋಲನ್ನು ಅನುಭವಿಸಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಏಕದಿನದ ಕ್ರಿಕೆಟ್ ಪಂದ್ಯದಲ್ಲಿ ಅತಿ ಕಡಿಮೆ ಇನ್ನಿಂಗ್ಸ್ ನಲ್ಲಿ 11 ಸಾವಿರ ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ಪಾಕ್ ವಿರುದ್ಧ ಪಂದ್ಯದಲ್ಲಿ 222 ಇನ್ನಿಂಗ್ಸ್ ನಲ್ಲಿ 11 ಸಾವಿರ ರನ್ ಗಳ ಗಡಿ ತಲುಪುವ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾದರು.
ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತ ಭರ್ಜರಿ ಆರಂಭ ಕಂಡಿದೆ. ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಅವರ ಆಟದಿಂದಾಗಿ 136 ರನ್ ಗಳ ಜೊತೆಯಾಟ ತಂಡದ ರನ್ ಗತಿಯನ್ನು ಹೆಚ್ಚುವಂತೆ ಮಾಡಿತು.
2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್ನ 19 ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೆ ಏರಿತು, ಅದು 4 ಪಂದ್ಯಗಳಲ್ಲಿ ಆರು ಅಂಕಗಳನ್ನು ಗಳಿಸಿದೆ. ಅದೇ ಸಂಖ್ಯೆಯ ಪಂದ್ಯಗಳನ್ನು ಆಡಿದ ವೆಸ್ಟ್ ಇಂಡೀಸ್ ಕೇವಲ ಮೂರು ಅಂಕಗಳೊಂದಿಗೆ 6 ನೇ ಸ್ಥಾನದಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.