ICC Cricket World Cup 2019: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ

ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೈ ವೋಲ್ಟೇಜ್  ಪಂದ್ಯ ಎಂದೇ ಕರೆಯಲ್ಪಡುವ ಭಾರತ ಪಾಕಿಸ್ತಾನ ಪಂದ್ಯ ಪ್ರಾರಂಭವಾಗಿದೆ.

Last Updated : Jun 16, 2019, 02:52 PM IST
ICC Cricket World Cup 2019: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ  title=
Photo:twitter

ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೈ ವೋಲ್ಟೇಜ್  ಪಂದ್ಯ ಎಂದೇ ಕರೆಯಲ್ಪಡುವ ಭಾರತ ಪಾಕಿಸ್ತಾನ ಪಂದ್ಯ ಪ್ರಾರಂಭವಾಗಿದೆ.

ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನ ಓಲ್ಡ್ ತ್ರಾಫ್ಫ್ರೋದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಬಹು ನಿರೀಕ್ಷಿತ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಈಗ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ವಿಶ್ವಕಪ್ ಇತಿಹಾಸವನ್ನು ಗಮನಿಸಿದಾಗ ಇದುವರೆಗೆ 1992 ರಿಂದ ಇದುವರೆಗೆ ಆರು ಬಾರಿಗೆ ಎದುರಾಗಿವೆ. ವಿಶೇಷವೆಂದರೆ ಈ ಎಲ್ಲ ಪಂದ್ಯಗಳಲ್ಲಿ ಭಾರತ ಗೆದ್ದಿದೆ. 

 

ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಕಾರಣ ಮೂರು ವಾರಗಳ ಕಾಲ ಆಟದಿಂದ ಹೊರಗುಳಿಯಬೇಕಾಗಿದೆ.ಆದ್ದರಿಂದ ಅವರ ಬದಲಿಗೆ ಈಗ ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಗಿದೆ.

Trending News