International Flights Ban:ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯ ಮೇಲೆ ಮಾರ್ಚ್ 2020 ರಲ್ಲಿ ವಿಧಿಸಲಾಗಿದ್ದ ನಿಷೇಧವನ್ನು ಭಾರತ ಸರ್ಕಾರ ಜನವರಿ 31,2021ರವರೆಗೆ ವಿಸ್ತರಿಸಿದೆ. ಆದರೆ, ಈ ನಿರ್ಬಂಧ ವಿಶೇಷ ಮತ್ತು ಸರಕು ವಿಮಾನಗಳಿಗೆ ಅನ್ವಯಿಸುವುದಿಲ್ಲ.
ಕರ್ನಾಟಕ ಸೇರಿದಂತೆ ಹಿಮಾಚಲ, ಜಮ್ಮು ಕಾಶ್ಮೀರ, ಯುಪಿ, ಪಂಜಾಬ್ ಮತ್ತು ಮಹಾರಾಷ್ಟ್ರ ಸರ್ಕಾರಗಳು ವಿಮಾನದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗಾಗಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಕರ್ನಾಟಕದಲ್ಲಿ ಏಳು ದಿನಗಳ ಹೋಮ್ ಕ್ಯಾರೆಂಟೈನ್ ನಿಯಮವಿದೆ.
ವಾಯುಯಾನ ಕ್ಷೇತ್ರದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಂಗ ಸಂಸ್ಥೆ ಅಲೈಯನ್ಸ್ ಏರ್ ಉತ್ತರ ಕರ್ನಾಟಕದ ಕಲಬುರಗಿಯಿಂದ ಬೆಂಗಳೂರು ಮತ್ತು ರಾಜ್ಯದ ದಕ್ಷಿಣ ಪ್ರದೇಶದ ಮೈಸೂರುಗಳಿಗೆ ನೇರ ಸೇವೆಯನ್ನು ಪ್ರಾರಂಭಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.