PAN Card Alert: ಪ್ರಸ್ತುತ, ಭಾರೀ ಚರ್ಚೆಯಲ್ಲಿರುವ ವಿಷಯವೆಂದರೆ ಅದು ಆಧಾರ್-ಪ್ಯಾನ್ ಲಿಂಕ್. 1,000ರೂ. ಗಳ ದಂಡ ಪಾವತಿಯೊಂದಿಗೆ ಆಧಾರ್-ಪ್ಯಾನ್ ಲಿಂಕ್ ಮಾಡಲು ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಈ ಮಧ್ಯೆ ನಿಮ್ಮ ಬಳಿ ಇರುವ ಪ್ಯಾನ್ ನಿಜವಾಗಿಯೂ ಅಸಲಿಯೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ/ನಕಲಿಯೋ ಎಂದು ಕೇವಲ ಒಂದೇ ಒಂದು ನಿಮಿಷದಲ್ಲಿ ಪತ್ತೆ ಮಾಡಬಹುದು.
ಪ್ಯಾನ್ ಕಾರ್ಡ್ (Pan Card) ಮೂಲಕ, ನೀವು ಬ್ಯಾಂಕ್ ಖಾತೆ ತೆರೆಯುವುದು, ಆಸ್ತಿ ಖರೀದಿಸುವುದು ಅಥವಾ ಮಾರಾಟ ಮಾಡುವುದು, ಕಾರು ಖರೀದಿಸುವುದು ಅಥವಾ ಮಾರಾಟ ಮಾಡುವುದು, ಐಟಿಆರ್ ಸಲ್ಲಿಸುವುದು, 2 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಆಭರಣಗಳನ್ನು ಖರೀದಿಸುವುದು ಮುಂತಾದ ಅನೇಕ ಕೆಲಸಗಳನ್ನು ಮಾಡಬಹುದು.
ನೀವು ಇನ್ನೂ ಪ್ಯಾನ್ ಕಾರ್ಡ್ ಮಾಡಿಸದಿದ್ದರೆ ಸರ್ಕಾರವು ಅದನ್ನು ನಿಮಿಷಗಳಲ್ಲಿ ಮಾಡುವ ಸೌಲಭ್ಯವನ್ನು ಪ್ರಾರಂಭಿಸಿದೆ. ಇದಕ್ಕಾಗಿ ನೀವು ಆದಾಯ ತೆರಿಗೆ ವೆಬ್ಸೈಟ್ಗೆ ಹೋಗಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.