ಇಬ್ಬರು ಮಹಿಳೆಯರು ಧೂಮಪಾನ ಮಾಡುತ್ತಿದ್ದಾಗ ಅವರನ್ನು ದಿಟ್ಟಿಸಿದ ಆರೋಪದ ಮೇಲೆ 28 ವರ್ಷದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದಲ್ಲಿ ಇರಿದು ಕೊಂದಿರುವ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಾಗ್ಪುರದ ಮಹಾಲಕ್ಷ್ಮಿ ನಗರ ಪ್ರದೇಶದಿಂದ ಶನಿವಾರ ತಡರಾತ್ರಿ ಜಯಶ್ರೀ ಪಂಜಾಡೆ ತನ್ನ ಸ್ನೇಹಿತೆ ಸವಿತಾ ಸಾಯರ್ ಅವರೊಂದಿಗೆ ಪಾನ್ ಶಾಪ್ನ ಹೊರಗೆ ಧೂಮಪಾನ ಮಾಡುತ್ತಿದ್ದಾಗ ಘಟನೆ ವರದಿಯಾಗಿದೆ.
Marriage frauds: ಬಂಧಿತ ವಂಚಕಿಯನ್ನು ಎಲೀ ಮಹಂತಾ(32) ಎಂದು ಗುರುತಿಸಲಾಗಿದೆ. ಹಣಕ್ಕಾಗಿ ಮಾತ್ರವಲ್ಲದೇ ಈಕೆ ತನ್ನನ್ನು ಮದುವೆಯಾಗಬೇಕೆಂದು ಕೂಡ ಹಲವರಲ್ಲಿ ಬೇಡಿಕೆ ಇಟ್ಟಿದ್ದಳೆಂದು ತಿಳಿದುಬಂದಿದೆ.
Honor killing: ಕೊಲೆಯಾಗಿರುವ ಕವನ ಅದೇ ಗ್ರಾಮದ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ಆಕೆಯ ಅಪ್ಪ ಮಂಜುನಾಥನಿಗೆ ತಿಳಿದ ನಂತರ ಮನೆಯಲ್ಲಿ ಗಲಾಟೆಯಾಗಿತ್ತು. ಈ ಬಗ್ಗೆ ಮಂಜುನಾಥ್ ತನ್ನ ಮಗಳಿಗೆ ಎರಡ್ಮೂರು ಬಾರಿ ಬುದ್ದಿ ಹೇಳಿದ್ದನಂತೆ. ಆದರೆ ತಂದೆಯ ಮಾತು ಕೇಳದ ಕವನ ಪ್ರೀತಿಸುವುದನ್ನು ಮುಂದುವರಿಸಿದ್ದಳು.
ಜುಲೈ 11ರಂದು ಮನೆಯಿಂದ ಹೋಗಿದ್ದ ಜೋಗೇಂದ್ರ ನಂತರ ವಾಪಸ್ ಬಂದಿರಲಿಲ್ಲ. ಹೀಗಾಗಿ ಆತಂಕಗೊಂಡ ಅವರ ತಂದೆ, ಮದನ್ ಲಾಲ್ ಮೇಲೆ ಶಂಕೆ ಇರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ‘ನನ್ನ ಮಗನನ್ನು ಹತ್ಯೆ ಮಾಡಲಾಗಿದೆ, ಇದರಲ್ಲಿ ಅನೇಕ ಜನರು ಭಾಗಿಯಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದ್ದರು.
Cyberattack Crime: ಅಥಿರಾ ಕೊಟ್ಟಾಯಂನ ಖಾಸಗಿ ಸಂಸ್ಥೆಯಲ್ಲಿ ವೆಬ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಸ್ನೇಹಿತನಾಗಿದ್ದ ಅರುಣ್ ವಿದ್ಯಾಧರನ್ ಫೇಸ್ಬುಕ್ ಮೂಲಕ ಆಕೆಯ ವಿರುದ್ಧ ಸೈಬರ್ ದಾಳಿ ನಡೆಸಿದ್ದನೆಂದು ಹೇಳಲಾಗಿದೆ.
Bengaluru Crime News Updates: ಸುಬ್ರತೋ ಮಂಡಲ್ 6 ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ. ಆದರೆ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದನ್ನು ಬಿಟ್ಟು ನಲ್ಲಿ ಕಳ್ಳತನಕ್ಕೆ ಇಳಿದಿದ್ದ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.