ಬೆಂಗಳೂರು: ಇದು ಅಂತೀತಾ ಕಳ್ಳನ ಕಥೆ ಅಲ್ಲಾ, ಚಿನ್ನ ಕದ್ದು ಗುಜರಿಗೆ ಹಾಕಿದ ಕಳ್ಳನ ಕಥೆ. ಅಷ್ಟಕ್ಕೂ ಬೆಂಗಳೂರಿಗೆ ಪಶ್ಚಿಮ ಬಂಗಾಳದಿಂದ ಕೆಲಸ ಅರಸಿ ಬಂದವನು ಕೆಲಸ ಮಾಡದೇ ಕಳ್ಳತನದ ದಾರಿ ಹಿಡಿದಿದ್ದ.
ಸದ್ಯ ಯಶವಂತಪುರ ಪೊಲೀಸರು ಆರೋಪಿ ಸುಬ್ರತೋ ಮಂಡಲ್ ಅಲಿಯಾಸ್ ಗುಜರಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆದರೆ ಕದ್ದ ಚಿನ್ನವನ್ನು ಈತ ಗುಜರಿಗೆ ಹಾಕಿದ್ದ ಎಂಬುದೇ ಇಂಟ್ರಸ್ಟಿಂಗ್. ಸುಬ್ರತೋ ಮಂಡಲ್ 6 ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ. ಆದರೆ ಯಾವುದಾದರು ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದನ್ನು ಬಿಟ್ಟು ನಲ್ಲಿ ಕಳ್ಳತನಕ್ಕೆ ಇಳಿದಿದ್ದ.
ಇದನ್ನೂ ಓದಿ: ಎಪ್ರಿಲ್ 8 ಅಥವಾ 9 ರಂದು ಬಿಜೆಪಿ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ-ಸಿಎಂ ಬೊಮ್ಮಾಯಿ
ಹೀಗೆ 25ಕ್ಕೂ ಅಧಿಕ ನಲ್ಲಿಗಳನ್ನು ಕದ್ದು ಗುಜರಿಗೆ ಹಾಕಿ ಅಲ್ಲಿಂದ ಬರುತ್ತಿದ್ದ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಇದೇ ರೀತಿ ಕಳೆದ ತಿಂಗಳು 11ನೇ ತಾರೀಖಿನಲ್ಲಿ ಕದಿಯಬೇಕು ಎಂದು ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತಿಕೆರೆ ಹೆಚ್ಎಂಟಿ ಲೇಔಟ್ನ ನಿಜೇಶ್ ಎಂಬುವವರ ಮನೆಗೆ ನುಗ್ಗಿದ್ದ. ಆದರೆ ಮನೆಗೆ ಬೀಗ ಹಾಕದೇ ಮನೆಯವರು ಹೊರಗೆ ಹೋಗಿದ್ದನ್ನು ಅರಿತು ಒಳನುಗ್ಗಿದ್ದ ಆರೋಪಿ 130 ಗ್ರಾಂ ಚಿನ್ನ, ನಗದು ದೋಚಿ ಪರಾರಿಯಾಗಿದ್ದ.
ನಂತರ ಕದ್ದ ಚಿನ್ನವನ್ನು ಏನೂ ಮಾಡಬೇಕು ಎಂದು ಅರಿಯದೇ ಸೀದಾ ಗುಜರಿಗೆ ಹೋಗಿ ನಲ್ಲಿ ಮಾರುವಂತೆ 7 ಲಕ್ಷ ಮೌಲ್ಯದ 130 ಗ್ರಾಂ ಚಿನ್ನವನ್ನು ಕೇವಲ 30 ಸಾವಿರಕ್ಕೆ ಮಾರಿ ಕುಡಿದು ಮಜಾ ಮಾಡಿದ್ದಾನೆ. ಸದ್ಯ ಮನೆಯಲ್ಲಿ ಚಿನ್ನ, ನಗದು ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾದ ಹಿನ್ನೆಲೆ ಕಾರ್ಯಾಚರಣೆ ನಡೆಸಿ ಯಶವಂತಪುರ ಪೊಲೀಸರು ಚಿನ್ನ ಸೀಜ್ ಮಾಡಿ ಆರೋಪಿ ಸುಬ್ರುತೋ ಮಂಡಲ್ನನ್ನು ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಗುರುವಾರದೊಳಗೆ ಜೆಡಿಎಸ್ 2ನೇ ಪಟ್ಟಿ: ಹೆಚ್.ಡಿ.ಕುಮಾರಸ್ವಾಮಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.