Covid-19 JN Update: ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 232 ರೋಗಿಗಳು ಸೋಂಕು ಮುಕ್ತರಾಗಿದ್ದಾರೆ ಅಥವಾ ರಾಜ್ಯದಿಂದ ಹೊರಗೆ ತೆರಳಿದ್ದಾರೆ. ಇಲ್ಲಿಯವರೆಗೆ ಒಟ್ಟು 68,38,761 ರೋಗಿಗಳು ಸೋಂಕು ಮುಕ್ತರಾಗಿದ್ದಾರೆ.
ಕರೋನವೈರಸ್ ಲಸಿಕೆಯ ಎರಡು ಡೋಸ್ ತೆಗೆದುಕೊಂಡವರಿಗೆ ಚಿತ್ರಮಂದಿರಗಳು ಮತ್ತು ಆಡಿಟೋರಿಯಂಗಳು ಅಕ್ಟೋಬರ್ 25 ರಿಂದ ಶೇಕಡ 50 ರಷ್ಟು ಸ್ಥಳಾವಕಾಶದೊಂದಿಗೆ ಮತ್ತೆ ತೆರೆಯಲ್ಪಡುತ್ತವೆ ಎಂದು ರಾಜ್ಯ ಸರ್ಕಾರವು ಶನಿವಾರ ಕೋವಿಡ್ -19 ನಿರ್ಬಂಧಗಳ ಸಡಿಲಿಕೆ ಘೋಷಣೆ ಮಾಡಿದೆ.
ಕೋವಿಡ್ -19 ಪ್ರಕರಣಗಳ ಏರಿಕೆ ಹಿನ್ನಲೆಯಲ್ಲಿ ಈಗ ಕೇರಳದ ಸರ್ಕಾರ ತೀವ್ರ ಟೀಕೆಯನ್ನು ಎದುರಿಸುತ್ತಿದೆ, ಇದೆ ಸಂದರ್ಭದಲ್ಲಿ ಈಗ ಕೇರಳ ಸಿಎಂ ಪಿನರಾಯಿ ವಿಜಯನ್ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸುವ ಪ್ರಸ್ತಾಪವನ್ನು ತಳ್ಳಿ ಹಾಕಿದ್ದಾರೆ.
ಸೆಪ್ಟೆಂಬರ್ 6 ರಿಂದ ಹನ್ನೊಂದನೇ ತರಗತಿಯ ಪರೀಕ್ಷೆಯನ್ನು ದೈಹಿಕವಾಗಿ ನಡೆಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 13 ಕ್ಕೆ ನಿಗದಿಪಡಿಸಲಾಗಿದೆ.
ಭಾರತದಲ್ಲಿ ಕೊರೊನಾವೈರಸ್ನ ಮೂರನೇ ತರಂಗದ ಭಯದ ನಡುವೆ, ಕೇರಳದಲ್ಲಿ ಹೆಚ್ಚುತ್ತಿರುವ ಸೋಂಕಿನ ಒತ್ತಡವು ಆತಂಕವನ್ನು ಹೆಚ್ಚಿಸಿದೆ ಮತ್ತು ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.