Chetan Sharma Resign From BCCI Chief Selector: ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚೇತನ್ ಶರ್ಮಾ ತಮ್ಮ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ನೀಡಿದ್ದು, ಅವರು ಅದನ್ನು ಅಂಗೀಕರಿಸಿದ್ದಾರೆ.
Indian Cricket Team Chief Selector: ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಜೀ ನ್ಯೂಸ್ನ ಕುಟುಕು ಕಾರ್ಯಾಚರಣೆ 'ಗೇಮ್ ಓವರ್' ನಲ್ಲಿ ಹಲವಾರು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. T20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನದ ನಂತರ, ಅವರನ್ನು ಮುಖ್ಯ ಆಯ್ಕೆಗಾರ ಹುದ್ದೆಯಿಂದ ತೆಗೆದುಹಾಕಲಾಯಿತು, ಆದರೆ 2 ತಿಂಗಳ ನಂತರ ಮತ್ತೆ ಅವರಿಗೆ ಅಧಿಕಾರ ನೀಡಲಾಯಿತು.
Who is Chethan Sharma: ಜನವರಿ 3, 1966 ರಂದು ಜನಿಸಿದ ಚೇತನ್ ಶರ್ಮಾ, 1983 ರಲ್ಲಿ 17 ನೇ ವಯಸ್ಸಿನಲ್ಲಿ ಪಂಜಾಬ್ಗಾಗಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಅದರ ಮುಂದಿನ ವರ್ಷ ODI ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. ಟೀಂ ಇಂಡಿಯಾ ಪರವಾಗಿ ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನು ಆಡಿರುವ ಚೇತನ್ ಶರ್ಮಾ ವೇಗದ ಬೌಲರ್ ಆಗಿ ಹೆಸರು ಮಾಡಿದ್ದಾರೆ.
Chetan Sharma Sting Operation : ZEE NEWS ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಮೇಲೆ ರಹಸ್ಯ ಕಾರ್ಯಾಚರಣೆ ನಡೆಸಿದೆ. ಚೇತನ್ ಶರ್ಮಾ ZEE ಮೀಡಿಯಾದ ಹಿಡನ್ ಕ್ಯಾಮರಾದಲ್ಲಿ ಇಂತಹ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ, ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ.
ZEE NEWS Exclusive Sting Operation: ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಅವರು ಜೀ ನ್ಯೂಸ್ನ ಹಿಡನ್ ಕ್ಯಾಮೆರಾದಲ್ಲಿ ಅನೇಕ ದೊಡ್ಡ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ಅವರು, ”ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು, ಪ್ರಸ್ತುತ ಯುಗದಲ್ಲಿ ವಿಶ್ವದ ದೊಡ್ಡ ಆಟಗಾರನಿಗೆ ಗುರಿಯಾಗಿದ್ದೇಕೆ ಎಂದು ತಿಳಿಯಲು ನೀವು ಬಯಸುತ್ತೀರಾ? ಅಷ್ಟಕ್ಕೂ ಬಿಸಿಸಿಐ ದಾದಾನಿಗೆ ವಿರಾಟ್ ಇಡೀ ವಿಶ್ವದ ಮುಂದೆ ಸವಾಲು ಹಾಕಿದ್ದೇಕೆ ಗೊತ್ತಾ? ಎಂದು ಹೇಳಿದ್ದಾರೆ.
Zee News Sting Operation: ಒಂದರಿಂದ ಹನ್ನೊಂದನೇಯವರೆಗಿನ ಭಾರತೀಯ ಕ್ರಿಕೆಟ್ ತಂಡದ ಪ್ರತಿ ಸ್ಥಾನಕ್ಕೂ ಹಲವು ಸ್ಪರ್ಧಿಗಳಿರುತ್ತಾರೆ. ಯಾರಿಗಾದರೂ ಅವಕಾಶಗಳು ಬಂದರೆ, ಅವಕಾಶಕ್ಕಾಗಿ ಕಾಯುತ್ತಿರುವ ಅನೇಕರ ವೃತ್ತಿಜೀವನವು ಕೊನೆಗೊಳ್ಳುತ್ತದೆ. ಇಂತಹ ಪ್ರಬಲ ಪೈಪೋಟಿಯ ನಡುವೆಯೂ ಆಟಗಾರನೊಬ್ಬ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರೆ ಸಣ್ಣಪುಟ್ಟ ಗಾಯಗಳಿಂದಾಗಿ ತಂಡದಿಂದ ಹೊರಗುಳಿಯಲು ಬಯಸುವುದಿಲ್ಲ.
Zee News Exclusive Sting Operation: ಬಿಸಿಸಿಐನ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಬಿಸಿಸಿಐ ಮತ್ತು ಟೀಂ ಇಂಡಿಯಾ ಆಟಗಾರರ ಕರ್ಮಕಾಂಡದ ಬಗ್ಗೆ ಮಾತನಾಡಿದ್ದಾರೆ. ಈ ಎಲ್ಲಾ ಮಾಹಿತಿಗಳು Zee News Exclusive ಆಗಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ತಿಳಿದುಬಂದಿದೆ. ಈ ಸೀಕ್ರೆಟ್ ಕ್ಯಾಮಾರದಲ್ಲಿ ನಕಲಿ ಫಿಟ್ನೆಸ್ ಗಾಗಿ ಇಂಜೆಕ್ಷನ್ ತೆಗೆದುಕೊಳ್ಳುವ ಟೀಂ ಇಂಡಿಯಾದ ಆಟಗಾರರ ಬಗ್ಗೆಯೂ ಮಾತನಾಡಿರುವುದು ಸೆರೆಯಾಗಿದೆ.
Zee News Sting Operation: ಟೀಂ ಇಂಡಿಯಾದಲ್ಲಿ ಯಾವ ರೀತಿ ಫಿಟ್ನೆಸ್ ಗಾಗಿ ನಕಲಿ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳುತ್ತಾರೆಂಬ ವಿಚಾರವನ್ನು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವಿನ ವಿವಾದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಸಹ ಇಂದು ಚೇತನ್ ಶರ್ಮಾ ಹೇಳಿದ್ದಾರೆ.
Team India : ಚೇತನ್ ಶರ್ಮಾ ಮತ್ತೊಮ್ಮೆ ಮುಖ್ಯ ಆಯ್ಕೆಗಾರರಾಗಿ ಆಯ್ಕೆಯಾಗಿದ್ದಾರೆ. ಟಿ20 ವಿಶ್ವಕಪ್ 2022 ಸೋಲಿನ ನಂತರ, ಚೇತನ್ ಶರ್ಮಾ ಅವರನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾಗೊಳಿಸಿದೆ. ಐವರು ಸದಸ್ಯರ ಸಮಿತಿಯಲ್ಲಿ ಚೇತನ್ ಶರ್ಮಾ ಅವರಲ್ಲದೆ ಶಿವಸುಂದರ್ ದಾಸ್, ಸುಬ್ರೋತೊ ಬ್ಯಾನರ್ಜಿ, ಸಲೀಲ್ ಅಂಕೋಲಾ ಮತ್ತು ಶ್ರೀಧರನ್ ಶರತ್ ಆಯ್ಕೆಯಾಗಿದ್ದಾರೆ.
BCCI Decision: ಬಿಸಿಸಿಐ ಸಿನಿಯರ್ ರಾಷ್ಟೀಯ ಆಯ್ಕೆ ಸಮಿತಿಯನ್ನು ವಜಾಗೊಳಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನದ ನಂತರ, ಆಯ್ಕೆ ಸಮಿತಿಯ ಮೇಲೆ ಪ್ರಶ್ನೆಗಳು ಉದ್ಭವಿಸಿದವು.
ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವೆ ನಿರಂತರ ವಿವಾದಗಳಿವೆ. ರೋಹಿತ್ ಶರ್ಮಾ ನಾಯಕರಾದ ತಕ್ಷಣ ವಿರಾಟ್ ಕೊಹ್ಲಿಗೆ ಸಂಕಷ್ಟ ಶುರುವಾಗಿದೆ. ಅದು ಏನು ಅಂತೀರಾ..? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿರಿ.
ಸಚಿನ್ ಅವರ ಬ್ಯಾಟಿಂಗ್ ಬಗ್ಗೆ ಎಲ್ಲರಿಗೂ ಗೊತ್ತಿರುವಂತಾದ್ದೆ, ಆದರೆ ಇಂದು ನಾವು ಅವರ ಬೌಲಿಂಗ್ ಬಗ್ಗೆ ಹೇಳಲಿದ್ದೇವೆ. ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಮಾರಕ ಬೌಲರ್ಗಳಿಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ, ಆದ್ದರಿಂದ ಆ ಬೌಲರ್ಗಳ ಬಗ್ಗೆ ತಿಳಿಯೋಣ.
ಕಳೆದ ಕೆಲವು ದಿನಗಳಿಂದ ಭಾರತೀಯ ಕ್ರಿಕೆಟ್ನಲ್ಲಿ ಸಾಕಷ್ಟು ಸದ್ದು-ಗದ್ದಲಗಳು ನಡೆಯುತ್ತಿವೆ. ಅಂದಿನಿಂದ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದೀಗ ಬಿಸಿಸಿಐ ಮತ್ತೆ ವಿರಾಟ್ ಬಗ್ಗೆ ದೊಡ್ಡ ಹೇಳಿಕೆ ನೀಡಿದೆ.
ಮದನ್ ಲಾಲ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ಚೇತನ್ ಶರ್ಮಾ, ಅಬೆ ಕುರುವಿಲ್ಲಾ ಮತ್ತು ದೇಬಾಶಿಶ್ ಮೊಹಂತಿ ಅವರನ್ನು ಹಿರಿಯ ಆಯ್ಕೆ ಸಮಿತಿಯ ಹೊಸ ಸದಸ್ಯರನ್ನಾಗಿ ಗುರುವಾರ ಮಧ್ಯಾಹ್ನ ಹೆಸರಿಸಿದೆ.
ಭಾರತವು ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಮತ್ತು ವಿರಾಟ್ ಕೊಹ್ಲಿಯಂತಹ ಅಸಾಮಾನ್ಯ ಬ್ಯಾಟ್ಸ್ಮನ್ಗಳನ್ನು ಉತ್ಪಾದಿಸಿದೆ. ಈ ಮೂವರು ಶ್ರೇಷ್ಠ ಬ್ಯಾಟ್ಸ್ಮನ್ಗಳು ಕ್ರಿಕೆಟ್ ಜಗತ್ತನ್ನು ಆಳಿದ್ದಾರೆ. ಈ ಮೇಲೆ ಪ್ರಸ್ತಾಪಿಸಿದ ಮೂವರಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ರನ್ನು ಆಯ್ಕೆ ಮಾಡಲು ಕೇಳಿದಾಗ, ಭಾರತದ ಮಾಜಿ ಆಟಗಾರ ಚೇತನ್ ಶರ್ಮಾ ಇತರ ಇಬ್ಬರು ಶ್ರೇಷ್ಠ ಆಟಗಾರರ ನಡುವೆ ಸುನಿಲ್ ಗವಾಸ್ಕರ್ ಅವರನ್ನು ಆಯ್ಕೆ ಮಾಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.