ZEE News Big Impact: ರಹಸ್ಯ ಬಯಲಾಗುತ್ತಿದ್ದಂತೆ BCCI ಆಯ್ಕೆ ಸಮಿತಿ ಸ್ಥಾನಕ್ಕೆ ರಾಜೀನಾಮೆ ನೀಡಿದ Chethan Sharma

Chetan Sharma Resign From BCCI Chief Selector: ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚೇತನ್ ಶರ್ಮಾ ತಮ್ಮ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ನೀಡಿದ್ದು, ಅವರು ಅದನ್ನು ಅಂಗೀಕರಿಸಿದ್ದಾರೆ. 

Written by - Chetana Devarmani | Last Updated : Feb 17, 2023, 06:59 PM IST
  • ZEE News ರಹಸ್ಯ ಕಾರ್ಯಾಚರಣೆಯ ಬಿಗ್‌ ಇಂಪ್ಯಾಕ್ಟ್‌
  • BCCI ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ರಾಜೀನಾಮೆ
  • ಸೆನ್ಷೆಷನಲ್‌ ಮಾಹಿತಿ ಹಂಚಿಕೊಂಡಿದ್ದ ಚೇತನ್ ಶರ್ಮಾ
ZEE News Big Impact: ರಹಸ್ಯ ಬಯಲಾಗುತ್ತಿದ್ದಂತೆ BCCI ಆಯ್ಕೆ ಸಮಿತಿ ಸ್ಥಾನಕ್ಕೆ ರಾಜೀನಾಮೆ ನೀಡಿದ Chethan Sharma title=
Chetan Sharma resigns

ZEE News Sting Operation Big Impact : ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚೇತನ್ ಶರ್ಮಾ ತಮ್ಮ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ನೀಡಿದ್ದು, ಅವರು ಅದನ್ನು ಅಂಗೀಕರಿಸಿದ್ದಾರೆ. ಜೀ ನ್ಯೂಸ್‌ನ ರಹಸ್ಯ ಕಾರ್ಯಾಚರಣೆಯ ನಂತರ, ಚೇತನ್ ಶರ್ಮಾ ತಮ್ಮ ಸ್ಥಾನವನ್ನು ತೊರೆಯಲು ನಿರ್ಧರಿಸಿದ್ದಾರೆ. ಆಟಗಾರರು ಫಿಟ್‌ನೆಸ್‌ಗಾಗಿ ಚುಚ್ಚುಮದ್ದು ಸ್ವೀಕರಿಸುತ್ತಾರೆ ಎಂಬ ವಿಚಾರ ಸೇರಿದಂತೆ ಅನೇಕ ಸೆನ್ಷೆಷನಲ್‌ ಮಾಹಿತಿಗಳು ಜೀ ನ್ಯೂಸ್‌ ಚೇತನ್‌ ಶರ್ಮಾ ಅವರ ಮೇಲೆ ನಡೆಸಿದ್ದ ಸ್ಟಿಂಗ್ ಆಪರೇಷನ್‌ನಲ್ಲಿ ಬಹಿರಂಗವಾಗಿದ್ದವು.

ಜೀ ನ್ಯೂಸ್‌ನಲ್ಲಿ, ಚೇತನ್ ಶರ್ಮಾ ಅವರು ತಂಡಕ್ಕೆ ಆಟಗಾರರ ಆಯ್ಕೆ ವಿಷಯಗಳಿಗೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಗಳನ್ನು ಹೇಳಿದ್ದರು. ಕೊಹ್ಲಿ-ಗಂಗೂಲಿ ವಿವಾದ, ಆಟಗಾರರ ಫಿಟ್‌ನೆಸ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ದೊಡ್ಡ ಮಾಹಿತಿ ಬಹಿರಂಗಪಡಿಸಿದ್ದರು. ನಂತರ ಅವರು ವಿವಾದಗಳಲ್ಲಿ ಸಿಲುಕಿಕೊಂಡರು. ಟೀಂ ಇಂಡಿಯಾದಲ್ಲಿ ಆಟಗಾರರು ಚುಚ್ಚುಮದ್ದು ತೆಗೆದುಕೊಳ್ಳುವ ಮೂಲಕ ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆಯುತ್ತಾರೆ ಎಂದು ಚೇತನ್ ಶರ್ಮಾ Zee ಮೀಡಿಯಾದ ಹಿಡನ್ ಕ್ಯಾಮೆರಾ ಮುಂದೆ ಬಹಿರಂಗಪಡಿಸಿದರು. ಇದರೊಂದಿಗೆ ಚೇತನ್ ಶರ್ಮಾ ಟೀಂ ಇಂಡಿಯಾದ ಆಟಗಾರರನ್ನು ಆಯ್ಕೆ ಮಾಡುವ ಮತ್ತು ಕೈಬಿಡುವ ಪ್ರಕ್ರಿಯೆಯ ಬಗ್ಗೆಯೂ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ :“ವಿರಾಟ್ ಕೊಹ್ಲಿ ಸುಳ್ಳುಗಾರ”: Zee News ರಹಸ್ಯ ಕಾರ್ಯಾಚರಣೆಯಲ್ಲಿ ಕೊಹ್ಲಿ ಬಗ್ಗೆ ಚೇತನ್ ಬಿಚ್ಚಿಟ್ಟ ಮಹಾರಹಸ್ಯವೇನು!

ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವಿನ ವಿವಾದವನ್ನು ಚೇತನ್ ಶರ್ಮಾ ಬಹಿರಂಗಪಡಿಸಿದ್ದಾರೆ, ಇದರಲ್ಲಿ ವಿರಾಟ್ ಕೊಹ್ಲಿ ಅವರು ಸೌರವ್ ಗಂಗೂಲಿ ತನಗೆ ತಿಳಿಸದೆ ನಾಯಕತ್ವದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ 2022 ರ ಟಿ 20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಭಾರತದ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಅವರನ್ನು ಈ ಹಿಂದೆ ಕೈಬಿಡಲಾಗಿತ್ತು. ಆದರೆ, ನಂತರ ಅವರನ್ನು ಉಳಿಸಿಕೊಳ್ಳಲಾಯಿತು. ಚೇತನ್ ಶರ್ಮಾ ಮುಖ್ಯ ಆಯ್ಕೆಗಾರರಾಗಿದ್ದಾಗ ಟೀಂ ಇಂಡಿಯಾದ ಪ್ರದರ್ಶನವೂ ತೀರಾ ಕಳಪೆಯಾಗಿತ್ತು. ಚೇತನ್ ಶರ್ಮಾ ಅವರ ಅವಧಿಯಲ್ಲಿ ಟೀಂ ಇಂಡಿಯಾ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ :GameOver: ರೋಹಿತ್ ಶರ್ಮಾ T20 ವೃತ್ತಿಜೀವನ ಎಂಡ್‌.! Zee News ಹಿಡನ್ ಕ್ಯಾಮರಾ ಮುಂದೆ ಚೇತನ್ ಶರ್ಮಾ ಬಿಚ್ಚಿಟ್ರು ಈ ಸತ್ಯ.!

ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ T20I ಸರಣಿಗೆ ಬುಮ್ರಾ ಮರಳುವ ಬಗ್ಗೆ ತಮ್ಮ ಮತ್ತು ತಂಡದ ಮ್ಯಾನೇಜ್‌ಮೆಂಟ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಚೇತನ್ ಶರ್ಮಾ ಆರೋಪಿಸಿದ್ದಾರೆ. ಬುಮ್ರಾ ಪ್ರಸ್ತುತ ತಂಡದಿಂದ ಹೊರಗಿದ್ದಾರೆ ಮತ್ತು ನಾಲ್ಕು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ನಂತರದ ಮೂರು-ODI ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News