Commonwealth Games 2022: ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ 17 ಚಿನ್ನ ಸೇರಿದಂತೆ ಒಟ್ಟು 49 ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದೆ. ಕಾಮನ್ವೆಲ್ತ್ ಗೇಮ್ಸ್ನ 10 ನೇ ದಿನದಂದು, ನೀತು ಘಂಘಾಸ್, ಅಮಿತ್ ಪಂಗಲ್, ನಿಖತ್ ಜರೀನ್ ಮತ್ತು ಅಲ್ಧೌಸ್ ಪಾಲ್ ಎದುರಾಳಿ ಆಟಗಾರರನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದರು. ಅಬ್ದುಲ್ಲಾ ಅಬು ಬಕರ್ ಬೆಳ್ಳಿ ಪದಕ ಪಡೆದರು.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯತ್ತಿರುವ ಕಾಮನ್ವೆಲ್ತ್ ಗೇಮ್ಸ್ನ 22 ನೇ ಆವೃತ್ತಿಯಲ್ಲಿ ಪುರುಷರ 67 ಕೆಜಿ ವೇಟ್ಲಿಫ್ಟಿಂಗ್ ಫೈನಲ್ನಲ್ಲಿ ಭಾರತವು ಚಿನ್ನ ಗೆದ್ದಿದೆ. ಜೆರೆಮಿ ಲಾಲ್ರಿನ್ನುಂಗಾ ಅವರು ಬಂಗಾರ ಮುಡಿಗೇರಿಸಿಕೊಳ್ಳುವ ಮೂಲಕ ಭಾರತಕ್ಕೆ ಐದನೇ ಪದಕ ತಂದುಕೊಟ್ಟಿದ್ದಾರೆ.
ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟವು ಜುಲೈ 28ರಿಂದ ಆಗಸ್ಟ್ 08ರವರೆಗೆ ನಡೆಯಲಿದ್ದು, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ 322 ಜನರ ಭಾರತ ತಂಡವನ್ನು ಈಗಾಗಲೇ ಹೆಸರಿಸಿದೆ. ಇನ್ನು ಈ ತಂಡದಲ್ಲಿ 215 ಅಥ್ಲೀಟ್ಗಳು ಮತ್ತು 107 ಅಧಿಕಾರಿಗಳು, ಸಹಾಯಕ ಸಿಬ್ಬಂದಿಗಳು ಸೇರಿದ್ದಾರೆ.
2022 ರ ಬರ್ಮಿಂಗ್ ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮಹಿಳಾ ಕ್ರಿಕೆಟ್ ನ್ನು ಸೇರಿಸಲು ಸಿಜಿಎಫ್ ಗುರುವಾರ ನಾಮ ನಿರ್ದೇಶನ ಮಾಡಿದೆ.ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ (ಸಿಜಿಎಫ್) ನ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ನಾಮನಿರ್ದೇಶನ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.