Karnataka Assembly Election 2023 : ಬಿ. ಎಸ್. ಯಡಿಯೂರಪ್ಪ ಅವರು ಒಟ್ಟು 4 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇದೀಗ 2023ರ ಚುನಾವಣೆಗೆ ಶಿಕಾರಿಪುರ ಪಟ್ಟಣದ ಆಡಳಿತ ಸೌಧದಲ್ಲಿ ಮತದಾನ ಮಾಡಿದ್ದಾರೆ.
siddalinga Shree : ಸಿದ್ದಗಂಗಾ ಮಠದ ಸ್ವಾಮೀಜಿಗಳು ತುಮಕೂರಿನ ಮತಗಟ್ಟೆ ಸಂಖ್ಯೆ 116ರಲ್ಲಿ ಮತದಾನ ಮಾಡಿದರು. ಶ್ರೀಗಳು 116ರ ವಾರ್ಡ್ ನಲ್ಲಿ ಮೊದಲಿಗರಾಗಿ ಮತ ಹಾಕಿದ್ದಾರೆ. ಜೊತೆಗೆ ಮತದಾನದ ಮಹತ್ವದ ಕುರಿತು ಮಾದ್ಯಮಗಳ ಜೊತೆ ಮಾತನಾಡಿದ್ದಾರೆ.
Dr. C. N. Ashwath Narayan : ಹೈವೋಲ್ಟೇಜ್ ಕಣವಾಗಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಅಂತ್ಯವಾಗಿ, ಇಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದ್ದು, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಗೆಲುವಿನ ಆಶಾವಾದನ್ನು ಇಟ್ಟುಕೊಂಡಿವೆ.
ಎಂತೆಂತಾ ಕಾರಣಕ್ಕೆ ಕೊಲೆಯಾಗುತ್ತವೆ ಎಂಬುದನ್ನು ನೀವೆಲ್ಲಾ ನೋಡಿರುತ್ತೀರಾ. ಆದರೆ ಗಂಡಸರ ನಡುವೆ ನಡೆಯುತ್ತಿದ್ದ ಸೆಕ್ಸ್ ನಡುವೆ ಹೆಣ್ಣೊಬ್ಬಳು ಬಂದಿದ್ದಕ್ಕೆ ಕೊಲೆ ನಡೆದಿರುವ ಸತ್ಯ ಬಯಲಾಗಿದೆ. ಚಂದ್ರಲೇಔಟ್ನಲ್ಲಿ ನಡೆದಿದ್ದ ಉದ್ಯಮಿ ಲಿಯಾಕತ್ ಅಲಿಖಾನ್ ಕೊಲೆಗೆ ಹೋಮೋ ಸೆಕ್ಸ್ ಕಾರಣ ಎಂಬ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಆತನಿಗೆ ಜೀವನದಲ್ಲಿ ಏನನ್ನಾದರು ಸಾಧಿಸಬೇಕು ಅನ್ನೋ ಛಲ ಇತ್ತು. ಅದಕ್ಕಾಗಿ ಹಗಲು ರಾತ್ರಿ ಕಷ್ಟ ಪಡ್ತಿದ್ದ. ಅವಕಾಶ ಸಿಕ್ಕಾಗಲೆಲ್ಲ ಸಂಗೀತ ಕಾರ್ಯಕ್ರಮ ನೀಡ್ತಿದ್ದ. ಜೊತೆಗೆ ಬೆಸ್ಕಾಂ ನಲ್ಲೂ ಕೆಲಸ ಮಾಡ್ತಿದ್ದ. 9 ತಿಂಗಳಹಿಂದಷ್ಟೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ಆದರೆ BWSSB ನಿರ್ಲಕ್ಷ್ಯ ಆತನ ಜೀವವನ್ನೇ ತೆಗೆದಿದೆ. ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದು, ಮಗು ಭೂಮಿಗೆ ಕಾಲಿಡೊ ಮೊದಲೇ ತಂದೆ ಸಾವಿನ ಮನೆ ಸೇರಿದ್ದಾನೆ.
ಅಲ್ಲಿ ಇಡೀ ಕುಟುಂಬವೊಂದು ರಾತ್ರಿಯಿಡಿ ಅಡುಗೆ ಮಾಡಿ ಬೆಳಗ್ಗೆ ಊಟಕ್ಕೆ ಕರೆದಿದ್ದ ಅಥಿತಿಗಳಿಗೆ ಬಡಿಸೋದಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಇನ್ನೇನು ಅಡುಗೆ ಕೆಲಸವೆಲ್ಲ ಮುಗಿತಲ್ಲ ಎಂದು ಸ್ವಲ್ಪ ರಿಲ್ಯಾಕ್ಸ್ ಮಾಡೋಣ ಅಂತಾ ಮಲಗಿದ್ದಾರೆ. ಆದ್ರೆ ಮಗುವಿಗೆ ಹಾಲು ಕಾಯಿಸೊಣ ಅಂತ ಕಿಚನ್ ನಲ್ಲಿ ಲೈಟರ್ ಆನ್ ಮಾಡಿದ್ದಾರೆ ಅಷ್ಟೇ ಮುಂದೆ ಆಗಿದ್ದು ಮಾತ್ರ ಘನಘೋರ ಘಟನೆ. ಹಾಗಾದ್ರೆ ಏನಾಯ್ತು ಎಂಬುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂಟಿ ಮಹಿಳೆ ಕೊಂದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಮಂಡ್ಯ ಮೂಲದ ಕೌಸರ್ ಮುಬೀನಾಳನ್ನು ಹತ್ಯೆಗೈದ ಆರೋಪದಡಿ ಆಕೆಯ ಜೊತೆ ಲಿವಿಂಗ್ ರಿಲೇಷನ್ಶಿಪನಲ್ಲಿದ್ದ ನದೀಮ್ ಪಾಷ ಎಂಬಾತನನ್ನು ಬಂಧಿಸಲಾಗಿದೆ.
ಯುವತಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದ ಘಟನೆ ಮಾಸುವ ಮುನ್ನವೇ ನಗರದಲ್ಲಿ ಅಂಥಹದ್ದೇ ಮತ್ತೊಂದು ಘಟನೆ ನಡೆದಿದೆ. ನಕಲಿ ಖಾತೆ ಸೃಷ್ಟಿಸಿ ಯುವತಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆಯ ಸಹೋದರ ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ. ಸಿದ್ಧಾರ್ಥ್ ಚಾಕು ಇರಿತಕ್ಕೊಳಗಾದ ಯುವಕ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.