ಫೆಬ್ರವರಿ 26 ರಂದು ಬಾಲಕೋಟ್ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ನಡೆಸಲು ವಾಯುಪಡೆಯು ತನ್ನ 12 ಮಿರಾಜ್ 2000 ಯುದ್ಧ ವಿಮಾನಗಳನ್ನು ಕಳುಹಿಸಿದಾಗ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಅದಕ್ಕೆ 'ಆಪರೇಷನ್ ಬಂದರ್ (ಮಂಗ )' ಎಂದು ಹೆಸರಿಸಿತ್ತು ಎನ್ನುವ ಸಂಗತಿ ಈಗ ಬೆಳಕಿಗೆ ಬಂದಿದೆ.
"ಇಂದು ದೇಶದಲ್ಲಿ ಸಾವಿರಾರು ಸೈನಿಕರು ಹುತಾತ್ಮರಾಗಿದ್ದಾರೆ. ಇದು ಚುನಾವಣಾ ವಿಚಾರ ಆಗಬಾರದೇ? ರೈತರು ಸತ್ತರೆ, ಅದು ಚುನಾವಣಾ ವಿಷಯವಾಗುತ್ತದೆ. ಆದರೆ ಸೈನಿಕರು ಸಾವನ್ನಪ್ಪಿದರೆ ಅದು ಚುನಾವಣಾ ವಸ್ತು ವಿಷಯವಲ್ಲವೇ? ಅದು ಹೇಗೆ ಸಾಧ್ಯ?" ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಐಎಎಫ್ ವಾಯುಪಡೆ ದಾಳಿ ನರೇಂದ್ರ ಮೋದಿಯವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಸಹಾಯ ಮಾಡುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.