Lok Sabha Election 2024: ಪ್ರತಾಪ್ ಸಿಂಹ ಬದಲು ಈ ಬಾರಿ ಯಧುವಂಶದ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಟಿಕೆಟ್ ನೀಡಲಾಗುತ್ತದೆ ಎಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ 3ನೇ ಹೆಸರು ಕೇಳಿಬರುತ್ತಿದೆ. ಅದುವೇ ಶಿಲ್ಪಿ ಅರುಣ್ ಯೋಗಿರಾಜ್.
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನ ವಿಗ್ರಹವನ್ನು ಕೆತ್ತಿರುವ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಡಾ. ಹಿರೇಮಠ ಫೌಂಡೇಷನ್ ವತಿಯಿಂದ ಸೋಮವಾರ ಪ್ರತಿಷ್ಠಿತ "ಅಭಿನವ ಅಮರಶಿಲ್ಪಿ" ಬಿರುದು ನೀಡಿ ಗೌರವಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಾಗರ್ ದರ್ಶನ್ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅವರನ್ನು ಪುರಸ್ಕರಿಸಲಾಯಿತು.
ಗರ್ಭಗುಡಿಯೊಳಗೆ ಬಂದ ಶ್ರೀರಾಮನ ವಿಗ್ರಹ
ಕ್ರೇನ್ ಸಹಾಯದಿಂದ ಮೂರ್ತಿಯ ಪ್ರವೇಶ
ಅಯೋಧ್ಯೆಯಲ್ಲಿ ಮತ್ತಷ್ಟು ಕಳೆಗಟ್ಟಿದ ಸಂಭ್ರಮ
ಇದಕ್ಕೂ ಮುನ್ನ ಗರ್ಭಗುಡಿಗೆ ವಿಶೇಷ ಪೂಜೆ
ಈ ವೇಳೆ ಅರುಣ್ ಯೋಗಿರಾಜ್ ಉಪಸ್ಥಿತಿ
ಅರುಣ್ ಯೋಗಿರಾಜ್, ಶ್ರೀರಾಮನ ಮೂರ್ತಿ ಶಿಲ್ಪಿ
ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕುರಿತು ಮತ್ತೊಂದು ಸಂತಸದ ಸುದ್ದಿ ಹೊರಬಿದ್ದಿದೆ. ಜನವರಿ 22 ರಂದು ನಡೆಯಲಿರುವ ಸಮಾರಂಭದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ 'ರಾಮ ಲಲ್ಲಾ' ಮೂರ್ತಿ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದೆ ಎಂದು ದೇವಾಲಯ ಟ್ರಸ್ಟ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ʻಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೃಷ್ಣಶಿಲೆಯಿಂದ ಕೆತ್ತಿರುವ ವಿಗ್ರಹವನ್ನು ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದೆ.
ಶ್ರೀರಾಮಮಂದಿರ ಉದ್ಘಾಟನೆಯ ದಿನವೇ ತಮಗೆ ಸಿಜೀರಿನ್ ಮಾಡಿಸಿ ಎಂದು ಅನೇಕರು ವೈದ್ಯರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರಂತೆ. ರಾಮಮೂರ್ತಿ ಪ್ರತಿಷ್ಠಾಪನೆಯ ದಿನ ತುಂಬಾ ಒಳ್ಳೆಯ ದಿನವಾಗಿದೆ. ಹೀಗಾಗಿ ಸಾಕಷ್ಟು ಗರ್ಭಿಣಿಯರು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಜನವರಿ 22ರಂದೇ ಡೆಲಿವರಿ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಶ್ರೀರಾಮನ ಪ್ರತಿಮೆಯನ್ನು ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಅವರು ಇದ್ದಕ್ಕಿದ್ದಂತೆ ಬೆಳಕಿಗೆ ಬಂದಿದ್ದಾರೆ. ಇದಕ್ಕೂ ಮುನ್ನ ಅರುಣ್ ಯೋಗಿರಾಜ್ ಅವರು ದೇಶದ ಹಲವು ಪ್ರಮುಖ ಸ್ಥಳಗಳು ಮತ್ತು ದೇವಾಲಯಗಳಿಗೆ ಪ್ರತಿಮೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಪ್ರಧಾನಿ ಮೋದಿ ಕೂಡ ಯೋಗಿರಾಜ್ ಭೇಟಿ ಮಾಡಿದ್ದು, ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.