ತಾಪಮಾನ ಕುಸಿತದೊಂದಿಗೆ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಗಾಳಿಯ ಗುಣಮಟ್ಟ ಕ್ಷೀಣಿಸಲು ಪ್ರಾರಂಭಿಸಿದೆ. ಸೋಮವಾರದಂದು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 263 (ಕಳಪೆ) ದಾಖಲಾಗಿದೆ, ಆದರೆ ಮಂಗಳವಾರ ಸಂಜೆ ಹಬ್ಬದ ನಂತರ ಇದು 300 (ಅತ್ಯಂತ ಕಳಪೆ) ದಾಟುವ ಸಾಧ್ಯತೆಯಿದೆ. ಬೆಳಿಗ್ಗೆ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದರೂ, ಅದು ಕಳಪೆ ವಿಭಾಗದಲ್ಲಿ ಉಳಿಯಿತು. ವಾಯು ಗುಣಮಟ್ಟ ಮಾನಿಟರಿಂಗ್ ಏಜೆನ್ಸಿ ಪ್ರಕಾರ, ಸೋಮವಾರ ಸಂಜೆ 4 ಗಂಟೆಗೆ ನಗರದ ಸರಾಸರಿ ಎಕ್ಯೂಐ 263 ಆಗಿತ್ತು, ಇದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ 220 ತಲುಪಿದೆ.
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದಲ್ಲಿ ಭಾರತೀಯನ ಆಯಸ್ಸಿನಲ್ಲಿ ಸರಾಸರಿ ಐದು ವರ್ಷ ಕಡಿಮೆಯಾಗಲಿದೆ' ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ. ಅದರಲ್ಲೂ, ವಿಶ್ವದಲ್ಲಿ ಅತಿ ಹೆಚ್ಚು ಮಾಲಿನ್ಯವಿರುವ ನಗರದಲ್ಲೊಂದಾಗಿರುವ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇದೇ ರೀತಿ ಮುಂದುವರಿದಲ್ಲಿ, ನಗರದ ನಿವಾಸಿಗಳ ಆಯಸ್ಸಿನಲ್ಲಿ 10 ವರ್ಷ ಕಡಿಮೆಯಾಗುವ ಅಪಾಯ ಇದೆ ಎಂದು ಇದೇ ಅಧ್ಯಯನ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.