31 ವರ್ಷಗಳ ಬಳಿಕ ಆಲ್ ಇಂಡಿಯಾ ರೇಡಿಯೋದ ನ್ಯಾಷನಲ್ ಚಾನೆಲ್ ಅಸ್ತಂಗತ

1987ರಲ್ಲಿ ಆರಂಭವಾದ ರಾಷ್ಟ್ರೀಯ ಚಾನೆಲ್ 31 ವರ್ಷಗಳ ಸುದೀರ್ಘ ಸೇವೆ ಬಳಿಕ ಸ್ಥಗಿತವಾಗುತ್ತಿದೆ. 

Last Updated : Jan 6, 2019, 07:29 PM IST
31 ವರ್ಷಗಳ ಬಳಿಕ ಆಲ್ ಇಂಡಿಯಾ ರೇಡಿಯೋದ ನ್ಯಾಷನಲ್ ಚಾನೆಲ್ ಅಸ್ತಂಗತ title=

ನವದೆಹಲಿ: ಆಲ್ ಇಂಡಿಯಾ ರೇಡಿಯೋದ ರಾಷ್ಟ್ರೀಯ ಚಾನೆಲ್ ಮತ್ತು ಐದು ಪ್ರಾದೇಶಿಕ ತರಬೇತಿ ಅಕಾಡೆಮಿಗಳನ್ನು 'ವೆಚ್ಚ ಕಡಿತ ಕ್ರಮಗಳು' ಮತ್ತು ಸೇವೆಗಳನ್ನು 'ತರ್ಕಬದ್ಧಗೊಳಿಸುವ' ಭಾಗವಾಗಿ ಮುಚ್ಚಲು ಪ್ರಸಾರ ಭಾರತಿ ನಿರ್ಧರಿಸಿದೆ. 

ಐದು ನಗರಗಳಲ್ಲಿನ ಬ್ರಾಡ್ಕಾಸ್ಟಿಂಗ್ ಮತ್ತು ಮಲ್ಟಿಮೀಡಿಯಾ ಪ್ರಾದೇಶಿಕ ಅಕಾಡೆಮಿಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಹೊರತುಪಡಿಸಿ ನ್ಯಾಷನಲ್ ಚಾನಲ್ ನಲ್ಲಿ ಕಾರ್ಯಕ್ರಮ, ತಾಂತ್ರಿಕ, ಸಚಿವಾಲಯ ಮೊದಲಾದ ವಿಭಾಗಗಳಲ್ಲಿ ತೋಡಪುರ ಮತ್ತು ನಾಗಪುರ ಸೇರಿದಂತೆ ಇತರೆಡೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಸಂಸ್ಥೆಯ ಅಗತ್ಯತೆಯ ಆಧಾರದ ಮೇಲೆ ಹುದ್ದೆಗಳನ್ನು ನೀಡಲಾಗುವುದು ಎಂದು ಆಲ್ ಇಂಡಿಯಾ ರೇಡಿಯೋ ಪ್ರಧಾನ ನಿರ್ದೇಶಕರು ನೀಡಿರುವ ಆದೇಶದಲ್ಲಿ ತಿಳಿಸಲಾಗಿದೆ.

"AIR ಸೇವೆಗಳನ್ನು ತರ್ಕಬದ್ಧಗೊಳಿಸುವುದು ಮತ್ತು ವೆಚ್ಚ ಕಡಿತ ಕ್ರಮಗಳನ್ನು ಗಮನದಲ್ಲಿಟ್ಟುಕೊಳ್ಳುವ ಸಲುವಾಗಿ", ಅಹಮದಾಬಾದ್ನಲ್ಲಿರುವ ಆಲ್ ಇಂಡಿಯಾ ರೇಡಿಯೋ ನ್ಯಾಷನಲ್ ಚಾನೆಲ್ ಮತ್ತು ಹೈದರಾಬಾದ್, ಲಕ್ನೌ, ಶಿಲ್ಲಾಂಗ್, ಅಹಮದಾಬಾದ್ ಮತ್ತು ತಿರುವನಂತಪುರಂನಲ್ಲಿರುವ ಮಲ್ಟಿಮೀಡಿಯಾ ಮತ್ತು ಬ್ರಾಡ್ಕಾಸ್ಟಿಂಗ್ ಪ್ರಾದೇಶಿಕ ಅಕಾಡೆಮಿಗಳನ್ನು ಈ ಕೂಡಲೇ ಮುಚ್ಚಲು ಡಿಸೆಂಬರ್ 24, 2018 ರಂದು ಪ್ರಸಾರ ಭಾರತಿ ನಿರ್ಧರಿಸಿರುವುದಾಗಿ AIR ಡೈರೆಕ್ಟರ್ ಜನರಲ್ ಅವರಿಗೆ ತಿಳಿಸಲಾಗಿದೆ.

ಜನವರಿ 3ರಂದು ಹೊರಡಿಸಿರುವ ಆದೇಶದ ಪ್ರಕಾರ, ರಾಷ್ಟ್ರೀಯ ಚಾನೆಲ್ನಿಂದ ನಿರ್ವಹಿಸಲ್ಪಡುವ ಎಲ್ಲಾ ದಾಖಲಾದ ಕಾರ್ಯಕ್ರಮಗಳನ್ನು ಡಿಜಿಟಲೀಕರಣ ಮತ್ತು ಭವಿಷ್ಯದ ಉಪಯೋಗಕ್ಕಾಗಿ ದೆಹಲಿಯಲ್ಲಿರುವ ಕೇಂದ್ರ ಕಚೇರಿಗೆ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ. 

ಈ ಮೂಲಕ ರಾಷ್ಟ್ರೀಯ ವಿಚಾರಗಳಲ್ಲಿ ಜನರನ್ನು ತೊಡಗಿಸಿಕೊಳ್ಳುತ್ತಿದ್ದ, ಮಾಹಿತಿ ಒದಗಿಸುತ್ತಿದ್ದ, 1987ರಲ್ಲಿ ಆರಂಭವಾದ ರಾಷ್ಟ್ರೀಯ ಚಾನೆಲ್ 31 ವರ್ಷಗಳ ಸುದೀರ್ಘ ಸೇವೆ ಬಳಿಕ ಸ್ಥಗಿತವಾಗುತ್ತಿದೆ. 

Trending News