10-Seater Car- Force Citiline: ಸಾಮಾನ್ಯವಾಗಿ 5,6,7 ಸೀಟರ್ ಕಾರುಗಳನ್ನು ನೋಡಿರುತ್ತೇವೆ, ಅದರ ಬಗ್ಗೆ ಮಾಹಿತಿ ಕೇಳಿರುತ್ತೇವೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಆಸನ ಸಾಮರ್ಥ್ಯವಿರುವ ಕಾರುಗಳಿವೆ. 8 ಆಸನ ಮತ್ತು 10 ಆಸನಗಳ ಕಾರುಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ
ಇದುವರೆಗೆ ನೀವು ಕೇಳಿದ್ದು 5-ಸೀಟರ್, 6-ಸೀಟರ್ ಅಥವಾ 7-ಸೀಟರ್ ಕಾರುಗಳನ್ನು ನೋಡಿದ್ದೀರಾ.. ಆದರೆ 10-ಸೀಟರ್ ಕಾರುಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದು ನಂಬಲು ಅಸಾಧ್ಯ. ಆದರೆ ಇದೇ ನಿಜ. 10 ಆಸನಗಳ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.
10 Seater Force Cityline car: ಇದು ಯಾವುದೇ ವಿದೇಶಿ ತಯಾರಿಕಾ ಕಂಪನಿಯ ಕಾರಲ್ಲ. ಬದಲಾಗಿ ಭಾರತೀಯ ಕಾರು ತಯಾರಿಕಾ ಕಂಪನಿಯಾದ ಫೋರ್ಸ್’ನ ಸಿಟಿಲೈನ್ ಕಾರಾಗಿದೆ. ಇದು ಕಂಪನಿಯ ಫೋರ್ಸ್ ಟ್ರಾಕ್ಸ್ ಕ್ರೂಸರ್’ನ ಅಪ್ಡೇಟೆಡ್ ಆವೃತ್ತಿಯಾಗಿದೆ. 'ಕುಟುಂಬ ಮತ್ತು ಸ್ನೇಹಿತರೊಂದಿಗೆ ಸುದೀರ್ಘ ಪ್ರವಾಸ ಕೈಗೊಳ್ಳಲು ಸಿಟಿಲೈನ್ ಪರಿಪೂರ್ಣ ಆಯ್ಕೆಯಾಗಿದೆ' ಎಂದು ಕಂಪನಿ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.