ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ, ಭಾರತೀಯ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ಮುಷ್ಕರಕ್ಕೆ ಕರೆ ನೀಡಿದ್ದು, ಇದರ ಜತೆಗೆ ಬ್ಯಾಂಕಿಂಗ್ ಕ್ಷೇತ್ರದ ಕೆಲವು ಉದ್ಯೋಗಗಳನ್ನು ಹೊರ ಗುತ್ತಿಗೆ ನೀಡುವುದಕ್ಕೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಎಲ್ಲಾ ಬ್ಯಾಂಕುಗಳ ಗುರುತನ್ನು ಕಾಪಾಡುವುದು ಸೇರಿದಂತೆ 10 ಬ್ಯಾಂಕುಗಳ ಉದ್ದೇಶಿತ ವಿಲೀನದಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಎಲ್ಲರನ್ನೂ ಒಳಗೊಂಡ ಸಮಿತಿಯೊಂದನ್ನು ರಚಿಸುವಲ್ಲಿ ಹಣಕಾಸು ಸಚಿವಾಲಯ ಸಕಾರಾತ್ಮಕವಾಗಿದೆ ಎನ್ನಲಾಗಿದೆ.
ನೀವು ಬ್ಯಾಂಕ್ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವ ಮಾಡಬೇಕಿದ್ದರೆ, ಅದನ್ನು ಎರಡು ದಿನಗಳಲ್ಲಿ ಅಂದರೆ 24 ಮತ್ತು 25 ಸೆಪ್ಟೆಂಬರ್ (ಮಂಗಳವಾರ ಮತ್ತು ಬುಧವಾರ) ನಿಭಾಯಿಸಬೇಕು. ಇದರ ನಂತರ, ಸೆಪ್ಟೆಂಬರ್ 26 ರಿಂದ ನಾಲ್ಕು ದಿನಗಳವರೆಗೆ ದೇಶಾದ್ಯಂತದ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.